ಚಿತ್ರದುರ್ಗ: ಕರ್ನಾಟಕ ರೆಡ್ಡಿ ಜನಸಂಘ ಸ್ಥಾಪನೆ ಆಗಿ ಸೆಪ್ಟೆಂಬರ್ 24ಕ್ಕೆ ನೂರು ವರ್ಷ ಪೂರೈಸುತ್ತಿರುವ ಹಿನ್ನಲೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ರೆಡ್ಡಿ ಸಮುದಾಯದ ಸಂಘಟನಾ ಅಧ್ಯಕ್ಷ ಎಂ. ಸಿ ಪ್ರಭಾಕರ್ ರೆಡ್ಡಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಕಾಂತರಾಜ್ ಆಯೋಗ ವರದಿ ನೀಡಿತ್ತು. ಆಗ ರೆಡ್ಡಿ ಸಮುದಾಯವನ್ನು 7 ಲಕ್ಷಕ್ಕೆ ಸೀಮಿತ ಮಾಡಿದ್ರು. ರಾಜ್ಯದಲ್ಲಿ ರೆಡ್ಡಿ ಸಮುದಾಯ ಬೀದರ್ ಯಿಂದ ಮುಳಬಾಗಿಲು ತನಕ 30 ಲಕ್ಷ ರೆಡ್ಡಿ ಸಮುದಾಯದ ಜನ ಸಂಖ್ಯೆ ಇದೆ. ನಾವು ಸಹ ಈಗ ಜಿಲ್ಲಾವಾರು ಜನಗಣತಿ ಮಾಡುತ್ತಿದ್ದೇವೆ. ಕೇಂದ್ರದಿಂದ ಜಾತಿಗಣತಿ ನಡೆಸಲು ಮುಂದಾಗಿದ್ದಾರೆ. ನಮ್ಮ ಸಮುದಾಯಕ್ಕೆ ಸದಾ ಅನ್ಯಾಯ ಆಗುತ್ತಿದೆ. ಮೀಸಲಾತಿ, ಶೈಕ್ಷಣಿಕ, ಉದ್ಯೋಗ, ಅಧಿಕಾರ ವರ್ಗದಲ್ಲಿ ಎಲ್ಲಾ ರೀತಿಯಲ್ಲಿ ಅನ್ಯಾಯ ಆಗುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮಲ್ಲಿರುವ ಸಮುದಾಯದ ಅಂಕಿ ಅಂಶಗಳಿಂದ ಕಡಿಮೆ ಆಗಿದ್ದಕ್ಕೆ ಅನ್ಯಾಯ ಹೆಚ್ಚಾಗಿದೆ. ನಮ್ಮ ಸಮುದಾಯವನ್ನು ಕ್ರಿಶ್ಚಿಯನ್ ರೆಡ್ಡಿ ಅನ್ನೋ ಪದ ಬಂದಿದೆ. ಕ್ರಿಶ್ಚಿಯನ್ ರೆಡ್ಡಿಯಲ್ಲಿರುವ ಸಂಪ್ರದಾಯ ಹಿಂದೂ ಸಂಪ್ರದಾಯಗಳು ಅಲ್ಲ. ನಮ್ಮ ಸಮುದಾಯವನ್ನು ಇಬ್ಭಾಗ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇನ್ನು ಬಲಿಜ ರೆಡ್ಡಿ, ಗಾಣಿಗ ರೆಡ್ಡಿ ಅಂತೆಲ್ಲ ಪದ ಬಳಕೆ ಮಾಡಿದ್ದಾರೆ ಅದು ಸರಿಯಲ್ಲ. ನಮಗೆ ಎಲ್ಲಾ ಕ್ಷೇತ್ರದಲ್ಲಿ ಸವಲತ್ತುಗಳಿಗೆ ಅನ್ಯಾಯ ಆಗ್ತಿದೆ ಕಾರಣ ಇಬ್ಭಾಗ ಆಗಿರೋದು. ನಮ್ಮ ಸಮುದಾಯ ಉಳಿಯಬೇಕಾದರೆ ಎಲ್ಲರೂ ಸಮೀಕ್ಷೆ ಸಮಯದಲ್ಲಿ ಜಾತಿ ಎಂದು ಬಂದಾಗ ರೆಡ್ಡಿ ಎಂದು ಧರ್ಮ ಎಂದು ಬಂದಾಗ ಹಿಂದೂ ಎಂದು ಅರ್ಜಿ ತುಂಬಬೇಕು ಎಂದು ಪ್ರಭಾಕರ್ ರೆಡ್ಡಿ ಹೇಳಿದರು.
ಇದೆ ವೇಳೆ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಆಯುಷ್ಯ ಇದೆ. ಯಾವುದೇ ಒಂದು ಸಂಸ್ಥೆಗೆ ಆಯುಷ್ಯ ಇಲ್ಲ. ಸಂಸ್ಥೆ ಚಿರಾಯುವಾಗಿ ಇರುತ್ತದೆ. ನೂರು ವರ್ಷದ ಹಿಂದೆ ರೆಡ್ಡಿ ಸಮುದಾಯವರು ಸೇರಿ ಕರ್ನಾಟಕ ರೆಡ್ಡಿ ಜನಸಂಘ ಸ್ಥಾಪನೆ ಮಾಡಿದರು. ನಮ್ಮ ಸಂಸ್ಥೆಯ ನೂರು ವರ್ಷ ತುಂಬಿದೆ. ಇಂತಹ ಸಂತಸದ ಸಮಯದಲ್ಲಿ ಸಂಭ್ರಮದಿಂದ ಅದ್ಧೂರಿಯಾಗಿ ಮಹೋತ್ಸವ ಆಚರಿಸಬೇಕಿದೆ. ನಮ್ಮ ಸಮಾಜದ ಬಂಧುಗಳು ಶತಮಾನೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ವಿನಂತಿ ಮಾಡಿದರು.ಎಲ್ಲಾ ಸಮುದಾಯಗಳಲ್ಲಿ ಪಂಗಡಗಳು ಇವೆ. ನಮ್ಮ ಸಮುದಾಯದಲ್ಲಿ ಸಹ ಪಂಗಡಗಳು ಇವೆ. ಎಲ್ಲಾ ರೆಡ್ಡಿಗಳು ಒಂದಾಗಿ ಇರಬೇಕು. ಮೀಸಲಾತಿ ಸೌಲಭ್ಯಗಳು ನಮಗೆ ವಂಚಿತವಾಗಿವೆ. ಜನಗಣತಿ ಕಾರ್ಯಕ್ರಮ ಆರಂಭವಾಗುತ್ತದೆ. ಆಗ ಒಳ ಪಂಗಡ ಮರೆತು ಜಾತಿ ರೆಡ್ಡಿ ಎಂದು ಮತ್ತು ಧರ್ಮವನ್ನು ಹಿಂದೂ ಎಂದು ನೊಂದಾಯಿಸಿ ಸಮುದಾಯದ ಏಳಿಗೆಗೆ ಸಹಾಯ ಮಾಡಬೇಕು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ್ ರೆಡ್ಡಿ, ನಿರ್ದೇಶಕರಾದ ಶಾಂತರಾಜು, ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣ ರೆಡ್ಡಿ, ರಾಘವ ರೆಡ್ಡಿ, ಪ್ರಸನ್ನ ರೆಡ್ಡಿ ಸೇರಿದಂತೆ ಮತ್ತಿತರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







