ಚಿತ್ರದುರ್ಗ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನವಾದ ಸೆ.17 ರಿಂದ ಅ.2ರವರೆಗೆ ರಾಜ್ಯದಲ್ಲಿ ಸೇವಾ ಪಾಕ್ಷಕಿ ಅಭಿಯಾನವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರು, ಹಾಗೂ
ಸೇವಾ ಪಾಕ್ಷಿಕ ಕಾರ್ಯಕ್ರಮದ ರಾಜ್ಯ ಸಂಚಾಲಕರಾದ ಎನ್.ರವಿಕುಮಾರ್ ತಿಳಿಸಿದರು.ಚಿತ್ರದುರ್ಗ ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಸೇವಾ ಪಾಕ್ಷಿಕ 2025ರ ವಿಶೇಷ ಪೂರ್ವಬಾವಿ ಸಭೆಯಲ್ಲಿಭಾಗವಹಿಸಿ ಮಾತನಾಡಿದ ಅವರು, ದೇಶದ್ಯಂತ ಸೇವಾ ಪಾಕ್ಷಿಕ ಅಭೀಯಾನದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಜನ್ಮದಿನವಾದ ಸೆ. 17 ರಿಂದ ಮಹಾತ್ಮ ಗಾಂಧಿರವರ ಜನ್ಮದಿನವಾದ ಅಕ್ಟೋಂಬರ್ 2ರವರೆಗೆ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸ್ವಚ್ಚತಾ ಅಭಿಯಾನ, ತಾಯಿಯ ಹೆಸರಿನಲ್ಲಿ ಒಂದು ಸಸಿ, ರಕ್ತದಾನ ಆರೋಗ್ಯ ಶಿಬಿರ ಕ್ರೀಡೆ ಹಾಗೂ ಚಿತ್ರಕಲಾ ಸ್ಪರ್ದೆಯಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.ಜಿಲ್ಲಾ ಕೇಂದ್ರಗಳಲ್ಲಿ ಹಂತ 1ರಲ್ಲಿ ಸೆ. 17 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗುವುದು, ಹಂತ 2ರಡರಲ್ಲಿ ಸೆ. 18 ರಿಂದಅ,2ರವರೆಗೆ ಮಂಡಲಗಳಲ್ಲಿ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸನ್ಮಾನ, ಸ್ವಚ್ಚಾತಾ ಅಭಿಯಾನದಲ್ಲಿ ಶಾಲಾ-ಕಾಲೇಜು,ಆಸ್ಪತ್ರೆ,ರೈಲ್ವೆ ನಿಲ್ದಾಣ, ಬಸ್ನಿಲ್ದಾಣ, ದೇವಸ್ಥಾನ, ಉದ್ಯಾನ ವನ ಐತಿಹಾಸಿಕ ಸ್ಥಳಗಳಲ್ಲಿ ಬೃಹತ್ ಮಟ್ಟದ ಸ್ಚಚ್ಚತಾ ಅಭಿಯಾನಅಯೋಜಿಸಲಾಗುವುದು ಇದಲ್ಲದೆ ಸಾರ್ವಜನಿಕರಿಗೆ ಸ್ಚಚ್ಚತೆಯೇ ಸೇವೆ ಎಂಬ ಪ್ರತಿಜ್ಞೆಯನ್ನು ಭೋಧಿಸಲಾಗುವುದು, ದಿವ್ಯಾಂಗರು
ಮತ್ತು ಪ್ರಭುದ್ದರಿಗೆ ಸನ್ಮಾನ ನಡೆಸಲಾಗುವುದೆಂದು ತಿಳಿಸಿದರು.ಇದರಲ್ಲಿ ರಕ್ತದಾನ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಮೋದಿಯವರ ಜೀವನ ಅಧಾರಿತ ಪ್ರದರ್ಶನ, ಪ್ರಬುದ್ದರಗೋಷ್ಟಿ, ಸಾಕ್ಷ್ಯಚಿತ್ರ ವೀಕ್ಷಣೆ, ಪುಸ್ತಕ ವಿತರಣೆ, ಮೋದಿ ವಿಕಾಸ ಮ್ಯಾರಥಾನ್ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾತನಾಡಿ ಈ ಸೇವಾ ಪಾಕ್ಷಿಕ ಅಭಯಾನದಲ್ಲಿ ಬಿಜೆಪಿಯ ಎಲ್ಲಾಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.ಈ ಪೂರ್ವ ಬಾವಿ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ಸಿದ್ದಾಪುರಸುರೇಶ್, ಸೇವಾ ಪಾಕ್ಷಿಕ ಜಿಲ್ಲಾ ಸಂಚಾಲಕರಾದ ಸಂಪತ್ಕುಮಾರ್, ಸಹ ಸಂಚಾಲಕರಾದ ಚಾಲುಕ್ಯ ನವೀನ್, ಜಿಲ್ಲಾ ವಕ್ತಾರನಾಗರಾಜ್ ಬೇದ್ರೇ, ಸೇರಿದಂತೆ ಎಲ್ಲಾ ಮಂಡಲ ಹಾಗೂ ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳುಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







