ಚಿತ್ರದುರ್ಗ: ನಗರದ ಕೋಟೆ ರಸ್ತೆಯಲ್ಲಿನ ಏಕನಾಥೇಶ್ವರ ಪಾದಗುಡಿಯ ಬಳಿಯಲ್ಲಿರುವ ವೃತ್ತಕ್ಕೆ ಹಗಲು ಕಗ್ಗೊಲೆ ಮಾನ್ಯ ರಾಜಮತ್ತಿ ತಿಮ್ಮಣ್ಣ
ನಾಯಕ ವೃತ್ತ ಎಂದು ನಾಮಕರಣ ಮಾಡಲು ನಗರಸಭೆಯಲ್ಲಿ ಅನುಮೋದನೆ ನೀಡಿದೆ. ಈ ಹಿನ್ನಲೆಯಲ್ಲಿ ನೂತನ ವೃತ್ತದ ಉದ್ಘಾಟನಾ ಸಮಾರಂಭ ಸೆ.
23ರಂದು ಮಂಗಳವಾರ ನಡೆಯಲಿದೆ ಎಂದು ಮದಕರಿ ಸಂಘದ ಅಧ್ಯಕ್ಷರಾದ ಡಿ.ಗೋಪಾಲಸ್ವಾಮಿ ನಾಯಕ್ ತಿಳಿಸಿದ್ದಾರೆ.ರಾಜಮತ್ತಿ ತಿಮ್ಮಣ್ಣ ನಾಯಕರವರು ಚಿತ್ರದುರ್ಗವನ್ನು ಆಳಿದ ಪ್ರಥಮ ಅರಸರಾಗಿದ್ಧಾರೆ, ತಿಮ್ಮಣ್ಣ ನಾಯಕ ಕೆರೆ, ಮಾವಿನ ತೋಪುಹಾಗೂ ಬೆಟ್ಟದ ಮೇಲಿನ ಏಕನಾಥೇಶ್ವರಿ ಅಮ್ಮನವರ ದೇವಾಲಯವನ್ನು ಇವರ ಕಾಲದಲ್ಲಿಯೇ ನಿರ್ಮಾಣ ಮಾಡಲಾಗಿತ್ತು.ಸೆ. 23ರಂದು 11 ಗಂಟೆಗೆ ವೃತ್ತದ ನಾಮಫಲಕವನ್ನು ನಾಡಿನ ಹೆಸರಾಂತ ಸಾಹಿತಿಗಳಾದ ಬಿ.ಎಲ್. ವೇಣು ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಸೇರಿದಂತೆ ನಗರಸಭಾ ಸದಸ್ಯರು, ಅಭಿಮಾನಿಗಳು ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು
ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







