ಚಿತ್ರದುರ್ಗ: ನಗರದಲ್ಲಿ ಪ್ರತಿಷ್ಠಾಪನೆಯಾಗಿರುವ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಶನಿವಾರ ಅದ್ದೂರಿಯಾಗಿ ನಡೆಯಲಿದೆ, ಇದರ ಅಂಗವಾಗಿ ಗಣೇಶೋತ್ಸವ ಸಮಿತಿ ವತಿಯಿಂದ ನಗರದಲ್ಲಿ ವಿವಿಧ ವೃತ್ತದಲ್ಲಿರುವ ಪ್ರತಿಮೆಗಳಿಗೆ ವಿಶೇಷವಾದಅಲಂಕಾರವನ್ನು ಮಾಡಲಾಗಿದೆ.ಚಿತ್ರದುರ್ಗವನ್ನು ಆಳಿದ ಮದಕರಿ ನಾಯಕ ಪ್ರತಿಮೆಯ ಬಳಿ ಈ ಬಾರಿ ವಿಶಿಷ್ಟವಾದ ಅಲಂಕಾರವನ್ನು ಮಾಡಲಾಗಿದೆ. ಮದಕರಿನಾಯಕ ಹಿಂದೆ ಹಿಮಾಲಯ ಪವರ್ತವನ್ನು ನಿರ್ಮಾಣ ಮಾಡಿ ಅದರ ಮೇಲೆ ಕನ್ನಡಾಂಬೆಯನ್ನು ಪ್ರತಿಷ್ಠಾಪನೆ ಮಾಡಿ ಆಕೆಯಕೈಯಿಂದ ಭಾರತ ದೇಶದ ಭಾವುಟವನ್ನು ನೀಡಲಾಗಿದೆ. ಮದಕರಿ ನಾಯಕನ ಕಾಲ ಬಳಿ ನಾಯಕ ಜನಾಂಗದ ಮಹರ್ಷಿವಾಲ್ಮಿಕಿಯ ಚಿತ್ರವನ್ನು ಹಾಕಲಾಗಿದೆ ಇದರೊಂದಿಗೆ ಮುಂದುಗಡೆಯಲ್ಲಿ ದೇಶದ ರಕ್ಷಣೆಗೆ ಸಂಬAಧಪಟ್ಟ ಶಸ್ತ್ರಸ್ರಗಳಾದ ರಾಕೆಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಇದಾದ ನಂತರ ವಿದ್ಯುತ್ ದೀಪದಲ್ಲಿ ಗಣೇಶನ ಹಾಗೂ ನಂದಿಯ ಚಿತ್ರಗಳನ್ನುಮೂಡಿಸಲಾಗಿದೆ. ಮದಕರಿ ನಾಯಕನ ವೃತ್ತದ ಸುತ್ತಾ ವಿದ್ಯುತ್ ದೀಪಗಳಿಂದ ಅಲಂಕಾರವನ್ನು ಮಾಡಲಾಗಿದೆ.ಇದಾದ ನಂತರ ದೇಶಕ್ಕೆ ಸಂವಿಧಾನವನ್ನು ನೀಡಿದ ಭಾರತರತ್ನ ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೂ ಸಹಾ ವಿಶೇಷವಾದಅಲಂಕಾರವನ್ನು ಮಾಡಲಾಗಿದೆ ಪ್ರತಿಮೆಯ ಹಿಂದೆ ಸ್ತಂಭಗಳ ಮೂಲಕ ಮಂಟಪವನ್ನು ನಿರ್ಮಾಣ ಮಾಡಿ ಅದಕ್ಕೆ ವಿದ್ಯುತ್ದೀಪಗಳಿಂದ ಅಲಂಕಾರವನ್ನು ಮಾಡಲಾಗಿದೆ. ಒನಕೆ ಓಬವ್ವ ಪ್ರತಿಮೆ ಹಿಂದೆ ಮಹಿಳೆಯ ಚಿತ್ರವನ್ನು ಬಿಡಿಸಲಾಗಿದೆ ಇಲ್ಲಿಯೂ ಸಹಾ ವಿದ್ಯುತ್ ದೀಪದಲ್ಲಿ ಅಲಂಕಾರವನ್ನು ಮಾಡಲಾಗಿದೆ.ಭಗವಾನ್ ಮಹಾವೀರ ಪ್ರತಿಮೆಗೆ ಮಂಟಪದ ಅಲಂಕಾರವನ್ನು ಮಾಡಲಾಗಿದೆ. ಉತ್ತಮವಾದ ಮಂಟಪವನ್ನು ನಿರ್ಮಾಣಮಾಡಿದ್ದಾರೆ. ಇಲ್ಲಿಯೂ ಸಹಾ ವಿದ್ಯುತ್ ದೀಪಗಳನ್ನು ಅಲಂಕಾರ ಮಾಡಲಾಗಿದೆ. ವಾಸವಿ ವೃತ್ತದಲ್ಲಿನ ಓಂ ಚಿತ್ರಕ್ಕೂ ಸಹಾಅಲಂಕಾರವನ್ನು ಮಾಡಲಾಗಿದೆ ಇಲ್ಲಿ ಓಂ ಚಿತ್ರದುರ್ಗ ಸುತ್ತಾ ಮಂಟಪಗಳನ್ನು ನಿರ್ಮಾಣ ಮಾಡಿ ಸುತ್ತಲೂ ವಿದ್ಯುತ್ ದೀಪಗಳಿಂದ ಓಂ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.ಹೊಳಲ್ಕೆರೆ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯೂ ಸಹಾ ವಿಶೇಷವಾಗಿ ಅಲಂಕಾರವನ್ನು ಮಾಡಲಾಗಿದೆ, ಸಂಗೊಳ್ಳಿ ರಾಯಣ್ಣ ಹಿಂದೆ ತಾಂಡವಾಡುತ್ತಿರುವ ಶಿವವನ್ನು ಇರಿಸಲಾಗಿದೆ, ಆತನ ಕೈಯಲ್ಲಿ ಢಮರುಗ ತ್ರಿಶೊಲವನ್ನು ನೀಡಲಾಗಿದೆ.ಪ್ರತಿಮೆಯ ಮುಂದೆ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ.ಹೊಳಲ್ಕರೆ ರಸ್ತೆಯ ಕೊನೆಯಲ್ಲಿ ಇರುವ ಕನಕ ವೃತ್ತದಲ್ಲಿನ ಪ್ರತಿಮೆಯಲ್ಲಿ ಕನಕದಾಸರ ಹಿಂದೆ ಮಂಟಪವನ್ನು ನಿರ್ಮಾಣ ಮಾಡಿಅಲ್ಲಿ ವೆಂಕಟೇಶ್ವರ ಹಾಗೂ ಪದ್ಮಾವತಿಯನ್ನು ಚಿತ್ರವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದ್ದಲ್ಲದೆ ಪ್ರತಿಮೆಯ ಜಾಗದಲ್ಲಿ ಸತ್ತಲೂ ಸಹ ವಿದ್ಯುತ್ ದೀಪಗಳಿಂದ ಆಲಂಕಾರವನ್ನು ಮಾಡಲಾಗಿದೆ. ಕನಕದಾಸರ ಪ್ರತಿಮೆಯ ಬಳಿ ಆನೆಗಳನ್ನು ಇರಿಸಲಾಗಿದೆ.ಇದ್ದಲ್ಲದೆ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯಾಗಿರುವ ಮಂಟಪದಿAದ ಹಿಡಿದು ಹೊಳಲ್ಕರೆ ರಸ್ತೆಯ ಕೊನೆಯವರೆಗೂ ಸಹಾಎಲ್ಲಾ ಅಂಗಡಿ, ಮನೆಯ ಮೇಲೆ ವಿದ್ಯುತ್ ದೀಪಗಳಿಂದ ಅಲಂಕಾರವನ್ನು ಮಾಡ ಲಾಗಿದೆ ಇದ್ದಲ್ಲದೆ ಒನಕೆ ಓಬವ್ವ ವೃತ್ತದಲ್ಲಿ ಹಾಗೂ ಗಾಂಧಿ ವೃತ್ತದಲ್ಲಿ ಕೇಸರಿ ಬಣ್ಣದ ಬಂಟಿಗ್ಸ್ ಗಳನ್ನು ಹಾಕಲಾಗಿದೆ. ಗಣಪತಿ ಸಾಗುವ೨ ದಾರಿಯುದ್ದಕ್ಕೂ ವಿವಿಧ ರೀತಿಯಅಲಂಕಾರವನ್ನು ಜನರೇ ಸ್ವಯಂ ಆಗಿ ಮಾಡಿದ್ದಾರೆ. ಶೋಭಾಯಾತ್ರೆಯ ವೇಳೆ ಭಾಗವಹಿಸುವ ಭಕ್ತರಿಗಾಗಿ ಅನ್ನಪ್ರಸಾದ, ಕುಡಿಯುವ ನೀರು, ಐಸ್ ಕ್ರೀಂ, ತಂಪಾದ ಪಾನೀಯಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ಹಂಚಲಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







