ಚಿತ್ರದುರ್ಗ: ಡ್ರಗ್ಸ್ ಇನ್ನಿತರೆ ಮಾದಕ ಚಟಗಳಿಗೆ ಬಲಿಯಾಗುತ್ತಿರುವ ಯುವ ಜನಾಂಗ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದೆ.ಮಾದಕ ವಸ್ತುಗಳ ಸಾಗಾಣಿಕೆ ಸೇವೆನೆಯನ್ನು ತಡೆಯುವುದು ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ.ಸಾರ್ವಜನಿಕರು ಕೈಜೋಡಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಭಂಡಾರು ಮನವಿ ಮಾಡಿದರು.ಈದ್ಮಿಲಾದ್ ಹಬ್ಬದ ಮುನ್ನಾ ದಿನವಾದ ಗುರುವಾರ ಯೂತ್ ಅಸೋಸಿಯೇಷನ್ ವತಿಯಿಂದ ಉಮರ್ ಸರ್ಕಲ್ನಲ್ಲಿಏರ್ಪಡಿಸಲಾಗಿದ್ದ ಮಾದಕ ನಷೆ ಮುಕ್ತ ಮತ್ತು ಸ್ವಚ್ಚ ಭಾರತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡ್ರಗ್ಸ್ ಮತ್ತು ಮಾದಕವ್ಯಸನಗಳ ವಿರುದ್ದ ಯುವ ಜನತೆ ಆಲೋಚನೆ ಮಾಡಿದರೆ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಗ್ರಾಮಗಳಲ್ಲಿಯೂ ಎಲ್ಲರ ಕೈಗೆಸಿಗುತ್ತಿರುವುದರಿಂದ ಯುವ ಪೀಳಿಗೆ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದೆ. ಮುಸ್ಲಿಂ ಯುವಕರು ಹೆಚ್ಚು ಡ್ರಗ್ಸ್ಗಳ ಸೇವನೆಮಾಡುತ್ತಿರುವುದರ ವಿರುದ್ದ ದೂರುಗಳು ದಾಖಲಾಗುತ್ತಿದ್ದು, ಧರ್ಮ ಗುರುಗಳು, ಹಿರಿಯರು ಬುದ್ದಿಮಾತು ಹೇಳಿ ಸರಿದಾರಿಗೆತರಬೇಕೆಂದು ತಿಳಿಸಿದರು.ಮಾದಕ ವಸ್ತುಗಳ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸುವುದು ಎಷ್ಟು ಮುಖ್ಯವೋ ಅದೇ ರೀತಿ ಸ್ವಚ್ಛತೆ ಕುರಿತು ಜನತೆಯಲ್ಲಿಅರಿವು ಮೂಡಿಸಬೇಕಿದೆ. ಮನೆಯ ಕಸವನ್ನು ಹೊರಗೆ ತಂದು ಸುರಿದರೆ ಪರಿಸರ ಹಾಳಾಗುತ್ತದೆ. ಪ್ರತಿಯೊಬ್ಬರ ಮೇಲೂಸಾಮಾಜಿಕ ಜವಾಬ್ದಾರಿಯಿದೆ. ಈದ್ಮಿಲಾದ್, ಹಿಂದೂ ಮಹಾಗಣಪತಿ ಮೆರವಣಿಗೆಯನ್ನು ಸೌಹಾರ್ಧಯುತವಾಗಿ ಹಿಂದೂ-ಮುಸಲ್ಮಾರು ಒಟ್ಟಿಗೆ ಆಚರಿಸಬೇಕು. ಇದರಿಂದ ಶಾಂತಿ ಮತ್ತು ಸೌಹಾರ್ಧತೆಯ ಸಂದೇಶ ಮೂಡಿಸಿದಂತಾಗುತ್ತದೆಂದು ಹೇಳಿದರು.ಪೊಲೀಸ್ ಉಪಾಧೀಕ್ಷಕರಾದ ದಿನಕರ್ ಮಾತನಾಡಿ ಯುವಕರು ಗಾಂಜ ಮತ್ತು ಡ್ರಗ್ಸ್ಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದರಿಂದ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕೆಂದುಉಮರ್ ಸರ್ಕಲ್ ಯೂತ್ ಅಸೋಸಿಯೇಷನ್ ಯುವಕರಿಗೆ ಕರೆ ನೀಡಿದರು.ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ ಮಾತನಾಡುತ್ತ ಪ್ರವಾದಿ ಮಹಮದ್ ಪೈಗಂಬರ್ ಎಲ್ಲಾ ಸಮಾಜಕ್ಕೂಶಾಂತಿಯ ಸಂದೇಶ ಸಾರಿದ್ದಾರೆ. ಅವರ ಮಾರ್ಗದರ್ಶನದಂತೆ ಎಲ್ಲರೂ ನಡೆದಾಗ ಸಮಾಜದಲ್ಲಿ ಅಶಾಂತಿಯಿರುವುದಿಲ್ಲ ಎಂದರು.ನಗರಸಭೆ ಪೌರಾಯುಕ್ತರಾದ ಎಸ್.ಲಕ್ಷ್ಮಿ ಮಾತನಾಡುತ್ತ ಅಪಾಯಕಾರಿ ಡ್ರಗ್ಸ್ ಮತ್ತು ಸ್ವಚ್ಚತೆ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಪೋಷಕರು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳಿಸುವುದಷ್ಟೆ ಮುಖ್ಯವಲ್ಲ. ಅವರ ಚಲನವಲನಗಳ ಬಗ್ಗೆ ನಿಗಾವಹಿಸಬೇಕೆಂದು ತಿಳಿಸಿದರು.ಮುಸ್ಲಿಂ ಧರ್ಮಗುರು ಹಜರತ್ ಮೌಲಾನಾ ಜುನೈದ್ ಸಖಾಫಿ ಮಾತನಾಡುತ್ತ ಲೋಕ ಪ್ರವಾದಿ ಮಹಮದ್ ಪೈಗಂಬರ್ ಜನ್ಮತಾಳಿ 1500 ವರ್ಷಗಳಾಗಿದೆ. ಶಾಂತಿಯ ಸಂದೇಶವನ್ನು ಇಡಿ ವಿಶ್ವಕ್ಕೆ ಸಾರಿದ್ದಾರೆ. ಎಲ್ಲಾ ಧರ್ಮಗಳು ಬಯಸುವುದು ಶಾಂತಿಯನ್ನೇ.ಇಸ್ಲಾಂ ಎಂದರೆ ಶಾಂತಿ. ಭಯೋತ್ಪಾದನೆಗೆ ಪ್ರಚೋದನೆ ನೀಡುವುದಿಲ್ಲ. ಮಾದಕ ವಸ್ತುಗಳಿಂದ ಎಲ್ಲರೂ ದೂರವಿರಬೇಕೆಂದು ಇಸ್ಲಾಂ ಧರ್ಮ ಹೇಳಿದೆ. ಕಲುಷಿತ ವಾತಾವರಣದಲ್ಲಿ ನಾವುಗಳೆಲ್ಲಾ ಬದುಕುತ್ತಿದ್ದೇವೆ. ಕೆಲವು ರಾಜಕಾರಣಿಗಳು ಉದ್ವೇಗದಭಾಷಣಗಳನ್ನು ಮಾಡುತ್ತ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆ. ಶತ್ರುಗಳನ್ನು ಪ್ರೀತಿಸಿ ಎಂದು ಕ್ರೈಸ್ತ ಧರ್ಮ ಹೇಳಿದ್ದರೆ,ಇಸ್ಲಾಂ ಧರ್ಮ ನಿಮ್ಮ ನೆರೆಹೊರೆಯವರನ್ನು ಸಹೋದರರಂತೆ ಕಾಣಿ ಎನ್ನುವ ಸಂದೇಶ ಸಾರಿದೆ. ಹೀಗೆ ಎಲ್ಲಾ ಧರ್ಮಗಳುಸೌಹಾರ್ಧತೆಯನ್ನು ಬೋಧಿಸಿವೆ. ರಾಜ್ಯದಲ್ಲಿ ಕೋಮು ಗಲಭೆ ಜಾಸ್ತಿಯಾಗುತ್ತಿದೆ. ರಾಜ್ಯ ಸರ್ಕಾರ ಡಿ.ಜೆ.ನಿಷೇಧಿಸಿರುವುದುಸ್ವಾಗತಾರ್ಹ ಎಂದರು.ಡಾ.ಕೌಸರ್ ವೇದಿಕೆಯಲ್ಲಿದ್ದರು.ಮಾದಕ ವಸ್ತುಗಳಿಂದ ದೂರವಿರುವಂತೆ ಪ್ರಮಾಣ ಬೋಧಿಸಲಾಯಿತು.ಉಮರ್ ಸರ್ಕಲ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಮಹಮದ್ ಆಜಾಂ, ಕಾರ್ಯದರ್ಶಿ ಮಹಮದ್ ಗಯಾಜ್, ಸೈಯದ್ಅನ್ವರ್, ಸೈಯದ್ ಸಸ್ರುಲ್ಲಾ, ಫಿಫೋಫರೋಜ್ ಅಹಮದ್ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







