ಚಿತ್ರದುರ್ಗ : ಧೀರ ಹುತಾತ್ಮ, ದೇಶಭಕ್ತ ಭಗತ್ ಸಿಂಗ 119 ನೇ ಜನ್ಮದಿನಾಚರಣೆಯನ್ನು ಎಐಡಿಎಸ್ಓ ಎಐಡಿವೈಓ
ಎಐಎಂಎಸ್ಎಸ್ ವತಿಯಿಂದ ರೋಟರಿ ಬಾಲಭವನದ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಭಾನುವಾರ ಆಚರಿಸಲಾಯಿತು.
ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದ ಭಗತಸಿಂಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್ ಮಾತನಾಡಿ ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ ಕೆಚ್ಚೆದೆಯ ವೀರ ಭಗತ್ ಸಿಂಗ್ ರವರ ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ 23ನೇ ವಯಸ್ಸಿಗೆ ನೇಣಿಗೆ ಕೊರಳೊಡ್ಡಿದ ಭಗತ್ಸಿಂಗ್ ವಿಚಾರ ಯಾರಿಗೂ ಬೇಕಾಗಿಲ್ಲ. ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ನಿರ್ಲಕ್ಷಿಸುತ್ತಲೆ ಬರುತ್ತಿವೆ. ಜಲಿಯನ್ ವಾಲಾಬಾಗ್ ಘಟನೆ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಬ್ರಿಟೀಷರ ಗುಲಾಮಗಿರಿ ವಿರುದ್ದ ಧ್ವನಿ ಎತ್ತಿ ದೇಶದ ಸ್ವಾತಂತ್ರ್ಯದ ಬಗೆಗಿನ ಪರಿಕಲ್ಪನೆ ಭಗತ್ ಸಿಂಗ್ರಲ್ಲಿ ಪಕ್ವಗೊಂಡು ಇಂದಿಗೂ ಎಲ್ಲರೆದೆಯಲ್ಲಿ ಧೀರ
ಹುತಾತ್ಮನಾಗಿ ಉಳಿದುಕೊಂಡಿದ್ದಾರೆಂದು ಸ್ಮರಿಸಿದರು. ಎಐಎಂಎಸ್ಎಸ್ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕುಮುದ, ಎಐಡಿಎಸ್ಓ. ಜಿಲ್ಲಾ ಸಂಚಾಲಕ ಮಹಂತೇಶ್, ಎಐಡಿವೈಓ. ಸಂಘಟನಾ ಸಂಚಾಲಕ ಕೃಷ್ಣ ಭರತ್, ಶಿವಕುಮಾರ್, ಗಿರಿಜಮ್ಮ, ಗುರುಶಾಂತ, ಲಕ್ಷ್ಮಿ, ಭಗತ್ಸಿಂಗ್ ಅಭಿಮಾನಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಟ್ಯಾಕ್ಸಿ ಚಾಲಕರುಗಳು ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







