ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ CNG ಗುಂಡಿಗಳು ತೆರದುಕೊಂಡು ರಸ್ತೆಗಳು ಯಮ ಸ್ವರೂಪಿ ರಸ್ತೆಗಳಾಗಿ ಮಾರ್ಪಟ್ಟಿವೆ. ಇನ್ನೂ ಇದಕ್ಕೆ ಸಾಕ್ಷಿ ಎಂಬಂತೆ ನಗರದ ಹಲವು ಕಡೆ ಮನೆ ಮನೆಗೆ CNG ಗ್ಯಾಸ್ ಒದಗಿಸುವ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದ್ದು ಅಪಘಾತಗಳಿಗೆ ಇದು ಆಹ್ವಾನ ಕೊಡುತ್ತಿದೆ. ನಿನ್ನೆ ಸಂಜೆ ವೇಳೆ ಸ್ಟೇಡಿಯಂ ರಸ್ತೆಯ ಸ್ಟೇಡಿಯಂ ಮುಂಬಾಗದ ಪೈಪ್ ಲೈನ್ ಕಾಮಗಾರಿ ಹಂತದ ಗುಂಡಿಯಲ್ಲಿ ಬಿದ್ದ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಸ್ಟೇಡಿಯಂ ಮುಂಬಾಗ ದೊಡ್ಡದಾದ ಗುಂಡಿಯನ್ನ ಅಗೆದು ಮನೆ ಮನೆಗೆ ಗ್ಯಾಸ್ ಒದಗಿಸುವ ಕಾಮಗಾರಿ ನಡೆಸುತ್ತಿದ್ದು ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.
ಇದರಿಂದಾಗಿ ಇಲ್ಲಿ ಓಡಾಡುವ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ವೃದ್ದರಿಗೆ ಸಂಚಕಾರ ತಂದೊಡ್ಡಿದೆ. ಇನ್ನೂ ವೇಗವಾಗಿ ಬಂದ ಬೈಕ್ ಸವಾರರು ನಾಯಿಯೊಂದನ್ನ ತಪ್ಪಿಸಲು ಹೋಗಿ ಮಳೆ ನೀರಿನಿಂದ ತುಂಬಿರುವ ಈ ಕಾಮಗಾರಿ ಹಂತದ ಗ್ಯಾಸ್ ಗುಂಡಿಯಲ್ಲಿ ಬಿದ್ದಿದ್ದು ಅದೃಷ್ಟವಶಾತ್ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಸ್ಥಳೀಯರು ಬೈಕ್ ಸವಾರರನ್ನ ರಕ್ಷಣೆ ಮಾಡಿದ್ದಾರೆ. ಇನ್ನೂ ಈ ಜಾಗದಲ್ಲಿ ನಿತ್ಯ ನೂರಾರೂ ಮಂದಿ ಓಡಾಟ ನಡೆಸುತ್ತಿದ್ದು ಗ್ಯಾಸ್ ಪೈಪ್ ಲೈನ್ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದು ಇಲ್ಲಿ ಓಡಾಡುವ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಮಳೆಗಾಲವಾದ್ದರಿಂದ ಮಳೆ ನೀರು ಈ ಗುಂಡಿಯಲ್ಲಿ ತುಂಬಿರುತ್ತದೆ. ಆಯತಪ್ಪಿ ಯಾರಾದರೂ ಈ ಗುಂಡಿಯಲ್ಲಿ ಬಿದ್ದು ಸತ್ತರೂ ಸಹ ಯಾರೂ ಕೇಳುವವರಿಲ್ಲದಂತಾಗಿದೆ. ರಾತ್ರಿ ಸಂದರ್ಭದಲ್ಲಿ ಇಲ್ಲಿ ಓಡಾಟ ನಡೆಸುವವರು ಜಾಗ್ರತೆಯಿಂದ ಓಡಾಟ ನಡೆಸಬೇಕಿದೆ. ಇನ್ನೂ ಆದಷ್ಟೂ ಬೇಗ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿ ಮುಗಿಸಿ ಗುಂಡಿಯನ್ನ ಮುಚ್ಚಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅಣುವು ಮಾಡಿ ಕೊಡುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



