ಚಿತ್ರದುರ್ಗ: ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದಂತಹ ಯೂರಿಯಾ ರಸಗೊಬ್ಬರವನ್ನು ವಿಲೇವಾರಿ ಮಾಡುತ್ತಿದೆ.ಆದರೆ ರಾಜ್ಯ ಸರ್ಕಾರಸರಿಯಾದ ರೀತಿಯಲ್ಲಿ ವಿತರಣೆ ಮಾಡದೇ ರಸ ಗೊಬ್ಬರವನ್ನು ತಯಾರಿಕೆ ಮಾಡುವಂತಹ ಕೈಗಾರಿಕೆಗಳಿಗೆ ಅಕ್ರಮವಾಗಿಮಾರಾಟ ಮಾಡುವವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಜ್ಯದಲ್ಲಿ ಕೃತಕ ಯೂರಿಯಾ ಗೊಬ್ಬರದ ಅಭಾವವನ್ನು ಸೃಷ್ಟಿಮಾಡಿದ್ದಾರೆ ಎಂದು ಬಿಜೆಪಿಯ ರಾಜ್ಯ ವಕ್ತಾರ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಆರೋಪಿಸಿದ್ದಾರೆ.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾರ್ಚ್ -ಏಪ್ರಿಲ್ ತಿಂಗಳಲ್ಲಿಯೇ ನಮ್ಮ ರಾಜ್ಯಕ್ಕೆ ಇಷ್ಟೇ ಪ್ರಮಾಣದ ಅಗತ್ಯತೆ ಇದೆ ಎಂದು ಪತ್ರ ಬರೆಯುವುದರ ಮೂಲಕ ಅದರ ಬಿಡುಗಡೆಗೆಅಗತ್ಯವಾದಂತಹ ಹಣವನ್ನು ಸಹ ನೀಡಬೇಕು.ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಇದಕ್ಕೆ ಒಂದು ಸಾವಿರ ಕೋಟಿ ರೂಗಳನ್ನುನೀಡಲಾಗಿತ್ತು.. ಆದರೆ ಈಗಿನ ಸಿದ್ದರಾಮಯ್ಯನವರ ಸರ್ಕಾರ ಕೇವಲ 400 ಕೋಟಿ ರೂಗಳನ್ನು ಮಾತ್ರ ನೀಡಿ ಉಳಿದಂತಹ 600ಕೋಟಿ ರೂಗಳಿಗೆ ಖಾಸಗಿ ಕಂಪನಿಗಳಿಗೆ ಅನುಕೂಲವಾಗುವಂತಹ ವಾತಾವರಣವನ್ನು ಕಲ್ಪಿಸಿದೆ ಎಂದು ದೂರಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ.. ರೈತರ ಬಗ್ಗೆ ಎಳ್ಳಷ್ಟು ಸಹ ಕಾಳಜಿ ವಹಿಸುತ್ತಿಲ್ಲ.ತಮ್ಮ
ಅಧಿಕಾರ ಕುರ್ಚಿ ಉಳಿವಿಗಾಗಿ ಹಲವಾರು ಬಾರಿ ದೆಹಲಿ ಪ್ರವಾಸವನ್ನು ಮಾಡಿರುವ ಸಿದ್ದರಾಮಯ್ಯರವರು ಇದರಲ್ಲಿ ಒಂದು
ಬಾರಿಯೂ ಸಹ ಕೇಂದ್ರ ಕೃಷಿ ಸಚಿವರನ್ನಾಗಲೀ.ಸಂಬಂಧಪಟ್ಟ ಅಧಿಕಾರಿಗಳನ್ನಾಗಲೀ ಭೇಟಿ ಮಾಡಿ ನಮ್ಮ ರಾಜ್ಯಕ್ಕೆ ಯೂರಿಯಾಬೇಡಿಕೆ ಬಗ್ಗೆ ಬೇಡಿಕೆಯನ್ನು ಇಟ್ಟಿಲ್ಲ.ಇಂದಿನ ದಿನಮಾನಗಳಲ್ಲಿ ಏಕಕಾಲದಲ್ಲಿ ಮಳೆ ವ್ಯಾಪಿಸಿದೆ.ರೈತರೆಲ್ಲರೂ ಸಹ ಬಿತ್ತನೆಕಾರ್ಯವನ್ನು ಪ್ರಾರಂಭ ಮಾಡಿದ್ದಾರೆ.. ಎಲ್ಲಾ ರೈತರಿಗೂ ಯೂರಿಯಾ ಗೊಬ್ಬರದ ಅವಶ್ಯಕತೆಯಿದೆ.ಇದರ ಬಗ್ಗೆ ಗಮನಹರಿಸಿದಸಿದ್ದರಾಮಯ್ಯರವರು ತಮ್ಮ ಕುರ್ಚಿ ಉಳಿವಿಕೆಗಾಗಿ ಗಮನ ನೀಡಿದ್ದಾರೆ ಹೊರತು ಅನ್ನದಾತರ ಬಗ್ಗೆ ಯಾವುದೇ ಗಮನ ನೀಡಿಲ್ಲಎಂದು ನವೀನ್ ತಿಳಿಸಿದರು.ಮುಖ್ಯಮಂತ್ರಿಯವರ ತಪ್ಪಿನಿಂದಾಗಿ ನಾಡಿನ ರೈತರು ಕಷ್ಟಕ್ಕೆ ಸಿಲುಕ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದರ ಬಗ್ಗೆಸಂಬಂಧಪಟ್ಟ ಸಚಿವರಾಗಲೀ ಕೃಷಿ ಅಧಿಕಾರಿಗಳಾಗಲೀ ಗಮನ ನೀಡಬೇಕಾಗಿದೆ.ಆಗಸ್ಟ್ -11ರಿಂದ ನಡೆಯುವಂತಹವಿಧಾನಸಭೆಯ ಅಧಿವೇಶನದಲ್ಲಿ ಇದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಚರ್ಚೆ ಮಾಡಿ ಮುಖ್ಯಮಂತ್ರಿಗಳ ಹಾಗೂ ಕೃಷಿ ಸಚಿವರರಾಜೀನಾಮೆಗೆ ಒತ್ತಾಯಿಸಲಾಗುವುದು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ ಧೋರಣೆಯನ್ನು ತಾಳಿದೆ..
ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಮುಂದಾಗಿದೆ.ಜನರ ಹಿತವನ್ನು ಕಾಯುತ್ತಿಲ್ಲ ಇದರ ಬಗ್ಗೆ ಬಿಜೆಪಿ ರೈತ
ಮೋರ್ಚಾದಿಂದ ಆದಷ್ಟು ಬೇಗನೆ ಹೋರಾಟವನ್ನು ಮಾಡಲಾಗುವುದು ಎಂದರು. ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಖಂಜಾಚಿ ಮಾಧುರೀಗೀರೀಶ್, ಉಪಾಧ್ಯಕ್ಷ ಮೋಹನ್, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



