ಚಿತ್ರದುರ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಅಸಮಾಧಾನದ ನುಡಿಗಳನ್ನು ಹೊರಹಾಕಿದ ಬೆನ್ನಲ್ಲೇ ಕೈ ಹೈಕಮಾಂಡ್ ಮೂರು ದಿನಗಳ ಕಾಲ ಶಾಸಕರ ಸಮಸ್ಯೆಗಳನ್ನು ಕೇಳುವ ಜೊತೆಗೆ ಮುನಿಸು ಶಮನ ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೀವಾಲ ಅವರನ್ನು ಕಲಿಸಿಕೊಟ್ಟಿದೆ. ಮೂರು ದಿನಗಳ ಕಾಲ ಸುರ್ಜೀವಾಲ ವಲಯವಾರು ಶಾಸಕರ ಸಭೆ ನಡೆಸಲಿದ್ದು ಇದರ ಜೊತೆಗೆ ಶಾಸಕ ಮೌಲ್ಯಮಾಪನ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸುರ್ಜೀವಾಲ
6 ಪ್ರಶ್ನಾವಳಿ ಸಿದ್ಧಪಡಿಸಿಕೊಂಡು ಶಾಸಕರ ಮೌಲ್ಯ ಮಾಪನಕ್ಕೆ ರೆಡಿ ಆಗಿದ್ದಾರೆ. ಹಾಗಾದ್ರೆ ಆ 6 ಪ್ರಶ್ನಾವಳಿ ಹೀಗಿವೆ…
ನಿಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಅನುಷ್ಠಾನ ಆಗಿವೆಯಾ..?
ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಯ ರಾಜಕೀಯ ಸಾಮಾಜಿಕ ಸಮಸ್ಯೆಗಳೇನು..?
ನಿಮ್ಮ ಕ್ಷೇತ್ರದಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳು ಮತ್ತು ಸಮಸ್ಯೆಗಳ ಲಿಸ್ಟ್ ಕೊಡಿ
ನಿಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ವಿಂಗ್ ಗಳು ಯಾವ ರೀತಿ ಕೆಲಸ ಮಾಡುತ್ತಿವೆ
ನಿಮ್ಮ ಕ್ಷೇತ್ರದಲ್ಲಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಪಟ್ಟಿ ತರಲು ಸೂಚನೆ
ಸರ್ಕಾರ ಮತ್ತು ನಿಗಮ ಮಂಡಳಿಗಳಲ್ಲಿ ನಿಮ್ಮ ಕ್ಷೇತ್ರದ ಯಾವ ಕಾರ್ಯಕರ್ತರಿಗೆ ನಾಯಕರಿಗೆ ಸ್ಥಾನಮಾನ ಕೊಡಬೇಕು, ಅವರ ಹೆಸರು, ಮತ್ತೆ ಯಾಕೆ ಸ್ಥಾನಮಾನ ಕೊಡಬೇಕು ಎಂಬುದಕ್ಕೆ ಕಾರಣಬೇರೆ ಸಲಹೆಗಳು ಏನಾದ್ರೂ ಇವೆಯೇಇಷ್ಟು ಪ್ರಶ್ನಾವಳಿ ರೆಡಿ ಮಾಡಿಕೊಂಡಿದ್ದು ಇಂದು ಶಾಸಕರ ಮುನಿಸಿಗೆ ಕಾರಣ ಹಾಗೂ ಪರಿಹಾರ ಕಂಡುಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



