ಬೆಳಗಾವಿಯಲ್ಲಿ ಘೋರ ದುರಂತ ಸಂಭವಿ ಸಿದ್ದು, ವಿದ್ಯುತ್ ತಂತಿ ರಿಪೇರಿ ಮಾಡುವ ವೇಳೆ ಶಾಕ್ ಹೊಡೆದು ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಎಂಬ ಗ್ರಾಮದಲ್ಲಿ ನಡೆದಿದೆ. ಅಮಾನವೀಯ ಸಂಗತಿಯೆಂದರೆ 5 ಗಂಟೆಗಳ ಕಾಲ ಹೆಸ್ಕಾಂ ಸಿಬ್ಬಂದಿಯ ಮೃತದೇಹ ವಿದ್ಯುತ್ ಕಂಬ ದಲ್ಲಿ ನೇತಾಡುತ್ತಿದ್ದರೂ ಅಧಿಕಾರಿಗಳಾರು ಇತ್ತ ಸುಳಿದಿರಲಿಲ್ಲ. ಈ ಬಗ್ಗೆ ಸಾರ್ವಜನಿಕರಆಕ್ರೋಶ ವ್ಯಕ್ತವಾಗಿದೆ. ಮಾರುತಿ ಅವಲಿ (25) ಮೃತಪಟ್ಟ ಲೈನ್ ಮ್ಯಾನ್. ಮಂಗಳವಾರ ಇವರು ವಿದ್ಯುತ್ಕಂಬವನ್ನೇರಿ ದುರಸ್ತಿ ಕೆಲಸದಲ್ಲಿ ನಿತರಾಗಿ ದ್ದರು. ದುರಸ್ತಿ ಮಾಡುತ್ತಿದ್ದಾಗಲೇ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ಲೈನ್ಮ್ಯಾನ್ ಅಲ್ಲಿಯೇ ಅಸುನೀಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



