ಪ್ರೇಮಿ ಜತೆ ಪತ್ನಿ ಪರಾರಿ: ಪತಿ, ಮದುವೆ ಮಾಡಿಸಿದ್ದ ಮಾವ ಆತ್ಮಹತ್ಯೆ
ದಾವಣಗೆರೆ: ವಿವಾಹವಾಗಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಪರಾ ರಿಯಾಗಿದ್ದಕ್ಕೆ ಮನನೊಂದ ಆಕೆಯ ಪತಿ ಹಾಗೂ ಮದುವೆ ಮಾಡಿಸಿದ್ದ ಸೋದರ ಮಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಗುಮ್ಮನೂರು ನಿವಾಸಿ ಹರೀಶ್ (30) ಹಾಗೂ ದಾವಣಗೆರೆಯ ರುದ್ರೇಶ (40) ಮೃತರು. ಖಾಸಗಿ ಕಂಪನಿಯಲ್ಲಿ ಎಚ್‌ಆರ್‌ಆಗಿದ್ದ ಹರೀಶ್ 45 ದಿನದ ಹಿಂದಷ್ಟೇ ರುದ್ರೇಶ ಅವರ ಸೋದರಿಯ ಮಗಳಾದ ಸರಸ್ವತಿ ಎಂಬುವವರನ್ನು ಮದುವೆಯಾಗಿ ದ್ದರು. ಆದರೆ, ಸರಸ್ವತಿ ಮದುವೆಗೂ ಮುಂಚೆ ಪ್ರೀತಿ ಸುತ್ತಿದ್ದ ಕುಮಾರ ಎಂಬುವವರ ಜತೆ ಓಡಿ ಹೋಗಿದ್ದಾಳೆ. ಇದರಿಂದ ನೊಂದ ಹರೀಶ್ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾರೆ. ಇನ್ನು ರುದ್ರೇಶ ಅವರು ಹರೀಶ್ ಸಾವಿನ ಸುದ್ದಿ ಕೇಳಿ ವಿಷ ಸೇವಿಸಿ ಮೃತಪಟ್ಟಿದ್ದಾರೆ.
