ದಾವಣಗೆರೆ ಜಿಲ್ಲೆಯಲ್ಲಿನ ಕೆಲ ಕುಟುಂಬಗಳು ಶತಮಾನಗಳಿಂದ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿವೆ. ಈ ಕುಟುಂಬಗಳು ಸೇರಿಕೊಂಡು ಹಿಂದೂ ಯುವ ಶಕ್ತಿ ಸಮಿತಿ ರಚಿಸಿಕೊಂಡಿದ್ದು, ವಿವಿಧ ರೂಪಗಳಲ್ಲಿ ತಯಾರಿಸಿದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಿವೆ. ಈ ಸಲ ನಂದಿ ಕೊರಳಲ್ಲಿ ಕಟ್ಟುವ ಗಂಟೆಯಿಂದ ಮಾಡಿದ ಗಣಪನನ್ನು ಪ್ರತಿಷ್ಠಾಪಿಸಿದೆ.ಈ ಗಣಪತಿ ಸಮಿತಿ ದಾವಣಗೆರೆಗೆ ಪ್ರಸಿದ್ಧ ಪಡೆದಿದೆ. ಪ್ರತಿ ವರ್ಷವೂ ವಿಶೇಷವಾಗಿ ಗಣಪತಿ ವಿಗ್ರಹಗಳನ್ನು ತಯಾರು ಮಾಡುತ್ತದೆ. ರುದ್ರಾಕ್ಷಿ, ತೆಂಗಿಕಾಯಿ ಸೇರಿದಂತೆ ಹತ್ತಾರು ಸಾಮಗ್ರಿಗಳಿಂದ ಗಣೇಶ ಮಾಡಿ ಗಮನ ಸೆಳೆದಿದೆ. ಈ ವರ್ಷ ಗಂಟೆ ಗಣಪ ನಿರ್ಮಾಣ ಮಾಡಲಾಗಿದೆ. ಸುಮಾರು 3.5 ಕ್ವಿಂಟಾಲ್ ತೂಕದ ಗಂಟೆಗಳಲ್ಲಿ ಗಣೇಶ ವಿಗ್ರಹ ನಿರ್ಮಾಣ ಮಾಡಲಾಗಿದೆ. ನಂದಿ ಅಥವಾ ಹಸುವಿನ ಕೊರಳಲ್ಲಿ ಕಟ್ಟುವ ಗಂಟೆಯಿಂದ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.ದಾವಣಗೆರೆ ನಗರದ ತೋಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವ ಶಕ್ತಿ ಬಳಗ ಈ ವಿಶೇಷ ಗಣೇಶನನ್ನು ಪ್ರತಿಷ್ಠಾಪಿಸಿದೆ. 9555 ಗಂಟೆಗಳ ಬಳಕೆ ಮಾಡಿ 13 ಅಡಿ ಎತ್ತರ, 8.5 ಅಡಿ ಅಗಲವಿರುವ ಗಣೇಶ ವಿಗ್ರಹವನ್ನು 10 ಜನ ಕಲಾವಿದರು 15 ದಿನಗಳ ಕಾಲ ಶ್ರಮ ಪಟ್ಟು ನಿರ್ಮಿಸಿದ್ದಾರೆ. 11 ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ.ದಾವಣಗೆರೆಯಲ್ಲಿರವ ಜಾಧವ್ ಎಂಬ ಕುಟುಂಬ ಶತಮಾನಗಳಿಂದ ಗಣೇಶ ವಿಗ್ರಹ ತಯಾರು ಮಾಡುತ್ತಿದೆ. ಇವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹಾಗೂ ಚಿಗಟೇರಿಯಿಂದ ಮಣ್ಣ ತಂದು ಗಣೇಶ ವಿಗ್ರಹ ಮಾಡಿದೆ. ಆದರೆ, ಅವರ ಆರ್ಥಿಕ ಸ್ಥಿತಿ ಮಾತ್ರ ಬದಲಾಗಿಲ್ಲ. ಆದರೆ, ಗಣೇಶ ವಿಗ್ರಹ ನಿರ್ಮಾಣ ಕಾರ್ಯ ಮಾತ್ರ ನಿಲ್ಲಿಸಿಲ್ಲ.ದಾವಣಗೆರೆ ಜಿಲ್ಲೆಯಲ್ಲಿ 2361 ಕಡೆ ಗಣೇಶ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಅತಿ ಹೆಚ್ಚು ದಾವಣಗೆರೆ ಹಾಗೂ ಚನ್ನಗಿರಿಯಲ್ಲಿ ಗಣೇಶ್ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದಾವಣಗೆರೆ ನಗರದಲ್ಲಿ 28 ಸೂಕ್ಷ್ಮ, 5 ಅತಿ ಸೂಕ್ಷ್ಮ ಸೇರಿ 660 ಕಡೆ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 159 ಸೂಕ್ಷ್ಮ ಮತ್ತು 13 ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಜಿಲ್ಲೆಯಾದ್ಯಂತ ಗರಿಷ್ಠ 21 ದಿನ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿ. ಯಾವುದೇ ರೀತಿ ತೊಂದರೆ ಆಗದಂತೆ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







