ದಾವಣಗೆರೆ ಕ್ಷೇತ್ರ ಪ್ರಚಾರಕ್ಕೆ ಕಡೆಗೂ ಜಮೀರ್ ಪ್ರವೇಶ
ನನಗೆ ಮುನಿಸಿಲ್ಲ, ಎಸ್ಸೆಸ್‌ಎಂ ಆತ್ಮೀಯರು: ಸಚಿವ
ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಿಲ್ಲ ಎಂದು ಮುನಿಸಿ ಕೊಂಡು ಚುನಾವಣಾ ಪ್ರಚಾರದಿಂದ ದೂರ ಉಳಿ ದಿದ್ದ ಸಚಿವ ಜಮೀರ್ ಅಹಮದ್ ಖಾನ್, ಭಾನುವಾರ ದಾವಣಗೆರೆಗೆ ಆಗಮಿಸಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಪ್ರಚಾರ ನಡೆಸಿದರು. ಕೇರಳದಿಂದ ಹುಬ್ಬಳ್ಳಿಗೆ ಬಂದು, ಅಲ್ಲಿಂದ ದಾವಣಗೆರೆಗೆ ಆಗಮಿಸಿದ ಸಚಿವರು, ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಇದೇ ಮೊದಲ ಬಾರಿಗೆ ಚುನಾವಣಾ
ಪ್ರಚಾರಕ್ಕೆ ಆಗಮಿಸಿದ ಜಮೀರ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾ ಯಿತು. ಈ ವೇಳೆ, ಅಭಿ ಮಾನಿಗಳಿಂದ ಬಿಝಡ್… ఎంబ … ಘೋಷಣೆಗಳು ಮೊಳಗಿ ದವು. ಜಮೀರ್‌ಭೇಟಿ ಹಿನ್ನೆಲೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮನೆ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ನನಗೆ ಮುನಿಸು ಇಲ್ಲ. ನಾನು, ಮಲ್ಲಿಕಾರ್ಜುನ ಇಬ್ಬರೂ ಆತ್ಮೀಯ ಸ್ನೇಹಿತರು.ಇಲ್ಲಿ ನೂರಕ್ಕೆ ನೂರರಷ್ಟು ನಮ್ಮ ಸಮರ್ಥ ಗೆದ್ದೇ ಗೆಲ್ಲುತ್ತಾರೆ ಎಂದರು.
