ಚಿತ್ರದುರ್ಗದ ಗೋನೂರು ಬಳಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿತ್ತು. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಯುವತಿಯ ಗುರುತು ಪತ್ತೆ ಹಚ್ಚಿದ್ದು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ವಿದ್ಯಾರ್ಥಿ ವರ್ಷಿತಾ (20) ಕೊಲೆಯಾದ ಯುವತಿ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.ಇನ್ನು ಮೃತಪಟ್ಟಿರುವ ವರ್ಷಿತಪರಿಶಿಷ್ಠ ಜಾತಿ, ಪಂಗಡದ ಹಾಸ್ಟೆಲ್ ನಲ್ಲಿ ಉಳಿದಿದ್ದು, ಆಗಸ್ಟ್ 14 ರಂದು ಹಾಸ್ಟೆಲ್ ಗೆ ಲೀವ್ ಲೆಟರ್ ಕೊಟ್ಟು ತೆರಳಿದ್ದರು. ಬಳಿಕ ವರ್ಷಿತ ನಾಪತ್ತೆಯಾಗಿದ್ದರು. ಕಳೆದ 2 ದಿನಗಳಿಂದ ಸಂಪರ್ಕಕ್ಕೆ ಸಿಗದೆ ವರ್ಷಿತ ಮೊಬೈಲ್ ಸ್ವಿಚ್ ಆಪ್ ಆಗಿದ್ದ ಕಾರಣ, ವರ್ಷಿತಾ ಕಾಣೆಯಾದ ಕುರಿತು ದೂರು ನೀಡಲು ತಂದೆ ತಾಯಿ ಮುಂದಾಗಿದ್ದರು. ಆದರೆ ಠಾಣೆಗೆ ಬಂದ ವೇಳೆಯೇ ವರ್ಷಿತಾ ಮೃತ ದೇಹ ಪತ್ತೆ ಸುದ್ದಿ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಮಗಳ ಮೃತದೇಹ ನೋಡಲು ಜಿಲ್ಲಾಸ್ಪತ್ರೆಗೆ ಪೋಷಕರು ಆಗಮಿಸಿದ್ದು,ಪುತ್ರಿ ವರ್ಷಿತಾ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರ ಆಗ್ರಹಿಸಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಗೆ ಆಗಮಿಸಿದ DYSP ದಿನಕರ್, ಗ್ರಾಮಂತರ ಠಾಣೆ PI ಮುದ್ದುರಾಜ್ ಭೇಟಿ ನೀಡಿ, ಪೋಷಕರಿಂದ ಮಾಹಿತಿ ಪಡೆದಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚೇತನ್ ಎಂಬ ಯುವಕನ ಜತೆ ಪ್ರೀತಿ ಮಾಡುತ್ತಿದ್ದ ವದಂತಿ ಇದ್ದು, ಚೇತನ್ ಅಂಡ್ ಗ್ಯಾಂಗ್ ನಿಂದ ಕೊಲೆ ಮಾಡಿರಬಹುದು ಎಂದು ವರ್ಷಿತಾ ತಂದೆ ತಾಯಿಆರೋಪ ಮಾಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿ ಹುಡುಕಾಟ ನಡೆಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







