ಧರ್ಮಸ್ಥಳದಲ್ಲಿ ನಡೆದಿರುವಂತಹ ಕೊಲೆಗಳಿಗೆ ಸಂಬಂಧಪಟ್ಟಂತೆ ಎಸ್‍ಐಟಿ ಸಮಿತಿಯನ್ನು ರಚಿಸಿರುವುದು ಸ್ವಾಗತಾರ್ಹ.ಆದರೆತನಿಖೆ ನೆಪದಲ್ಲಿ ಧರ್ಮಸ್ಥಳದ ದೇವಸ್ಥಾನಕ್ಕಾಗಲೀ.. ಅದರ ಮುಖಂಡರಿಗಾಗಲೀ ಅಪಮಾನ ಮಾಡುವುದು ಸರಿಯಲ್ಲ ಎಂದುಬಿಜೆಪಿಯ ರಾಜ್ಯ ವಕ್ತಾರ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದ್ದಾರೆ.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಧಾರ್ಮಿಕ ಸಂಸ್ಥೆ..ರಾಜ್ಯದಲ್ಲಿ ಈಗಾಗಲೇ ಹಲವಾರು ವಿವಿಧ ಉತ್ತಮ ಕಾರ್ಯಗಳನ್ನು ಮಾಡಿದೆ ಹಲವಾರು ಬಡಜನತೆಗೆ ನೆರವಾಗಿದೆ.ಅಲ್ಲಿನಡೆದಿರುವಂತಹ ಕೊಲೆಯಾಗಲೀ.. ಆತ್ಮಹತ್ಯೆಯಂತಹ ಪ್ರಕರಣಗಳ ಬಗ್ಗೆ ಪೂರ್ಣ ಪ್ರಮಾಣದ ತನಿಖೆಯಾಗಲಿ ಆದರೆ ಇದನ್ನನೆಪವಾಗಿಟ್ಟುಕೊಂಡು ಧರ್ಮಸ್ಥಳದ ದೇವಸ್ಥಾನದ ಮೇಲೆ ವಿನಹ ಕಾರಣ ಅಪವಾದ ಮಾಡುವುದು.ಹೇಳಿಕೆಗಳನ್ನು ನೀಡುವುದುಸರಿಯಲ್ಲ ಎಂದು ತಿಳಿಸಿದ ಅವರು. ತನಿಖೆ ನ್ಯಾಯಯುತವಾಗಿ ನಡೆಯಲಿ..ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಲಿ.. ಇದಕ್ಕೆ ನಮ್ಮಪೂರ್ಣ ಬೆಂಬಲವಿದೆ ಎಂದರು..
ಸಿದ್ದರಾಮಯ್ಯನವರ ಮಗನಾದ ಯತೀಂದ್ರ ಸಿದ್ದರಾಮಯ್ಯರವರು ತಮ್ಮ ಮಾತಿನ ಭರಾಟೆಯಲ್ಲಿ ಮೈಸೂರಿಗೆ ರಾಜ
ಮಹಾರಾಜರು ನೀಡಿದಂತಹ ಕಾಣಿಕೆಗಿಂತ ಸಿದ್ದರಾಮಯ್ಯರವರು ಹೆಚ್ಚಿನ ರೀತಿಯಾದಂತಹ ಕೊಡುಗೆಗಳನ್ನು ನೀಡಿದ್ದಾರೆ ಎಂದುಹೇಳಿಕೆ ನೀಡಿರುವುದು ಹಾಸ್ಯಸ್ಪದವಾಗಿದ್ದು. ಅದು ಈ ವರ್ಷದ ದೊಡ್ಡ ಜೋಕಾಗಿದೆ.ಅತಿ ದೊಡ್ಡ ಜೋಕು ಮಾಡಿದವರಿಗೆ ಪ್ರಶಸ್ತಿನೀಡುವುದಾದರೆ ಅದನ್ನು ಯತೀಂದ್ರವರಿಗೆ ನೀಡಬೇಕು. ಸಿದ್ದರಾಮಯ್ಯರವರಿಂದ ಯತೀಂದ್ರರವರಿಗೆ ಹೆಚ್ಚಿನ ಅನುಕೂಲವಾಗಿದೆಎಂದು ಹೇಳಿಕೊಳ್ಳುವ ಭರಾಟೆಯಲ್ಲಿ ಮೈಸೂರಿಗೆ ರಾಜ ಮಹಾರಾಜರಿಗಿಂತ ಹೆಚ್ಚು ಅನುಕೂಲನೀಡಿದ್ದಾರೆ ಎಂದು ಹೇಳಿದ್ದಾರೆಎಂದು ವ್ಯಂಗವಾಡಿದರು.ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಖಂಜಾಚಿ ಮಾಧುರೀ
ಗೀರೀಶ್, ಉಪಾಧ್ಯಕ್ಷ ಮೋಹನ್, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ
ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇಂದ್ರೆ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



