ಬೆಂಗಳೂರು: ಧರ್ಮಸ್ಥಳ ಕೇಸ್ನಲ್ಲಿ ಸರ್ಕಾರ ಎಸ್ಐಟಿ (SIT) ರಚನೆ ಮಾಡಿದೆ. ತನಿಖೆ ಬಳಿಕ ಸತ್ಯ ಹೊರಗೆ ಬರಲಿದೆ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.ಧರ್ಮಸ್ಥಳ ಕೇಸ್ ಎಸ್ಐಟಿಗೆ (SIT) ವಹಿಸಬೇಕು ಎಂಬ ಸತೀಶ್ ಜಾರಕಿಹೋಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಸವಣ್ಣ ನಮ್ಮ ಮಾನ ಅಪಮಾನ ನಿಮ್ಮದಯ್ಯ ಅಂತ ಹೇಳಿದ್ದಾರೆ. ಅದೆಲ್ಲವನ್ನು ತಿಳಿಯೋಕೆ ಈಗ ಎಸ್ಐಟಿ ರಚನೆ ಮಾಡಲಾಗಿದೆ. ಎಸ್ಐಟಿ ತನಿಖೆಯಲ್ಲಿ ಎಲ್ಲವೂ ಹೊರಗೆ ಬರುತ್ತದೆ ಎಂದು ತಿಳಿಸಿದರು.ತನಿಖೆಯಿಂದ ಯಾರು ಏನೇನು ಮಾಡಿದ್ದಾರೆ ಎಂದು ಹೊರಗೆ ಬಂದಾಗ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಸರ್ಕಾರ ಧರ್ಮಸ್ಥಳ ಕೇಸ್ನಲ್ಲಿ ಎಡವಿಲ್ಲ. ಅಪಪ್ರಚಾರಕ್ಕೆ ಎಡ ಮಾಡಿಕೊಡೋದಾಗಲಿ ಯಾವ ಪ್ರಶ್ನೆಯೂ ಇಲ್ಲ. ಯಾರು ಸುಳ್ಳು ಸುದ್ದಿ, ಅಪಪ್ರಚಾರ ಮಾಡ್ತಾರೆ ಒಂದು ಸೂಕ್ತ ತನಿಖೆ ಮೂಲಕ ತಾರ್ಕಿಕ ಅಂತ್ಯಕ್ಕೆ ಹೋಗಬೇಕು. ತಾರ್ಕಿಕ ಅಂತ್ಯಕ್ಕೆ ಹೋದ ಮೇಲೆ ಎಲ್ಲದ್ದಕ್ಕೂ ಸ್ಪಷ್ಟತೆ ಸಿಗುತ್ತದೆ. ಇದರಲ್ಲಿ ಸರ್ಕಾರ ಮಾಡುವುದು ಏನು ಇಲ್ಲ. ಪರಿಶುದ್ಧವಾಗಿ ಹೊರಗೆ ಬರಬೇಕು ಅನ್ನೋದು ನಮ್ಮ ಆಸೆ ಎಂದು ಸ್ಪಷ್ಟಪಡಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







