ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಅನಾಮಿಕ ವ್ಯಕ್ತಿಯನ್ನು ಎರಡನೇ ದಿನವಾದ ಭಾನುವಾರವೂ ವಿಶೇಷ ತನಿಖಾ ತಂಡ ಮಂಗಳೂರಿನ ಕಚೇರಿಯಲ್ಲಿ ವಿಚಾರಣೆ ನಡೆಸಿದೆ. ಎಸ್‌ಐಟಿ ಮುಖ್ಯಸ್ಥ, ಡಿಜಿಪಿ ಪ್ರಣವ್ ಮೊಹಾಂತಿ ಭಾನುವಾರ ಮಂಗಳೂರಿಗೆ ಆಗಮಿಸಿದ್ದು, ಮಲ್ಲಿಕಟ್ಟೆಯ ಎಸ್‌ಐಟಿ ಕಚೇರಿಯಲ್ಲಿ ಸತತ 6 ತಾಸು ಅನಾಮಿಕ ವ್ಯಕ್ತಿಯ ವಿಚಾರಣೆ ನಡೆಸಿದರು. ಶನಿವಾರ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಭಾನುವಾರವೂ ಅನಾಮಿಕನ ವಿಚಾರಣೆ ಯನ್ನು ಎಸ್‌ಐಟಿ ತಂಡ ಮುಂದುವರಿಸಿತು. ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ, ಡಿಐಜಿ ಅನುಚೇತ್, ಎಸ್ಪಿ ಜೀತೇಂದ್ರ ದಯಾಮ ಇವರ ಸಮ್ಮುಖದಲ್ಲಿ ಅನಾಮಿಕ ವ್ಯಕ್ತಿಯ ದಾಖಲಿಸಲಾಯಿತು. ಹೇಳಿಕೆಗಳನ್ನುವಕೀಲರು ಖಾಸಗಿ ಕಾರಿನಲ್ಲಿ ಮಂಗಳೂರಿನ ಅನಾಮಿಕ ವ್ಯಕ್ತಿಯನ್ನು ಮೂವರು ಎಸ್‌ಐಟಿ ಕಚೇರಿಗೆ ಬೆಳಗ್ಗೆ 10.30ಕ್ಕೆ ಕರೆ ತಂದರು. ಮುಂದೆ ಸಂಜೆ ಮುಸುಕಿನಲ್ಲಿಯೇ ಕರೆ ತಂದು ಎಸ್‌ಐಟಿ ಆತನನ್ನು ಕಪ್ಪುಬಣ್ಣದ ಕಚೇರಿಯಲ್ಲಿರುವ ತನಿಖಾಧಿಕಾರಿ ಜಿತೇಂದ್ರ ಕುಮಾರ್‌ದಯಾಮ ಹಾಜರುಪಡಿಸಲಾಯಿತು. 4.30ರವರೆಗೆ ಆತನ ವಿಚಾರಣೆ ನಡೆಯಿತು. ಬೆಳ್ತಂಗಡಿ ಠಾಣೆಗೆ ಪ್ರಣವ್ ಭೇಟಿ: ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಮಂಗಳೂರಿನಲ್ಲಿ ತನಿಖೆ ನಡೆಸಿದ ಬಳಿಕ ಸಂಜೆ ವೇಳೆಗೆ ನೇರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



