ಬೆಂಗಳೂರು: ಎರಡು ದಶಕಗಳಿಗೂ ಅಧಿಕ ಹಳೆಯ ಅಸ್ಥಿಪಂಜರದಲ್ಲಿ 31 ಡಿಎನ್‌ಐ ಹಾಗೂ ಲಿಂಗತ್ಯ ಪರೀಕ್ಷೆ ಕಾರ್ಯ ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಎರಡು ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದು ವಿಧಿ ವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿವೆ. ಆದರೆ ಅವು ಬಹಳ ಹಳೆಯವು. ಹೀಗಾಗಿ ಎರಡು ಮಾದರಿಯಲ್ಲಿ ಅಸ್ಥಿಪಂಜರದ ಪರೀಕ್ಷೆಯನ್ನು ಕೈಗೆತ್ತಿಕೊಳ್ಳಬಹುದು. ಡಿಎನ್‌ಐ ಹಾಗೂ ಲಿಂಗತ್ವ ಪರೀಕ್ಷೆ ನಡೆಯಲಿದೆ. ಮೂಳೆಗಳು, ಹಲ್ಲುಗಳು ಹಾಗೂ ಮೂಳೆಗಳ ಎಲುಬುಗಳಲ್ಲಿ ಮ್ಯಾರೋಸ್ ಅಂಟಿದ ಚರ್ಮದಿಂದ ಮೈಟೊಕಾಂಡ್ರಿಯಲ್ ಡಿಎನ್ಎಐ ಪರೀಕ್ಷೆ ನಡೆಸಬಹುದು. ಆದರೆಹಳೇ ಮೂಳೆ ಹಾಗೂ ಹಲ್ಲುಗಳಲ್ಲಿ ಅವುಗಳಿದ್ದು ಅಂಟಿದ್ದ ತೆಳುವಾದ ಚರ್ಮದ ಪೊರೆ ಸಿಗುವುದೇ ಎಂಬುದೇ ಯಕ ಪ್ರಶ್ನೆಯಾಗಿದೆ ಎಂದಿದ್ದಾರೆ. ಅದೇ ರೀತಿ ಮಾನವ ಶಾಸ್ತ್ರ ವಿಭಾಗದಲ್ಲಿ ಅಸ್ಥಿಪಂಜರದ ಪರೀಕ್ಷೆಗೊಳಪಡಿಸಿ ಪುರುಷ ಅಥವಾ ಮಹಿಳೆಯದ್ದೇ ಖಚಿತಪಡಿಸಿಕೊಳ್ಳಲಾಗುತ್ತದೆ. ಇಲ್ಲಿ ಯಾವ ಲಿಂಗ ಎಂಬುದು ಖಚಿತವಾದ ನಂತರ ಮೃತನ ಮೂಲ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಆದರೆ ಆ ಪ್ರದೇಶಗಳಲ್ಲಿ ಬಳೆ, ಚಿನ್ನ ವಿನಾದರೂ ಪತ್ತೆಯಾದರೆ ಮೃತನ ಗುರುತು ಪತ್ತೆಗೆ ಸ್ವಲ್ಪ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



