Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಐಪಿಎಲ್ ಆರಂಭದ ಹೊಸ್ತಿಲಲ್ಲೇ ಬದಲಾಯ್ತು ನಿಯಮ

ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಗೆ ಮಾತೃ ವಿಯೋಗ

200 ಕೋಟಿ ರೂ. ಬಂಗಲೆ ಮಾಹಿತಿ ಮರೆಮಾಚಿದ ಆರೋಪ:

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಕ್ರೈಂ»ಡಿಜಿಟಲ್ ಅರೆಸ್ಟ್‌ ; ವಂಚಕರ ಜಾಲಕ್ಕೆ ಸಿಲುಕಿದ ಉದ್ಯಮಿ
ಕ್ರೈಂ

ಡಿಜಿಟಲ್ ಅರೆಸ್ಟ್‌ ; ವಂಚಕರ ಜಾಲಕ್ಕೆ ಸಿಲುಕಿದ ಉದ್ಯಮಿ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 22, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಡಿಜಿಟಲ್ ಅರೆಸ್ಟ್‌ ; ವಂಚಕರ ಜಾಲಕ್ಕೆ ಸಿಲುಕಿದ ಉದ್ಯಮಿ

ಸೈಬರ್ ವಂಚಕರು ಹೆಣೆದ ಡಿಜಿಟಲ್ ಅರೆಸ್ಟ್‌ಗೆ ಬೆಳಗಾವಿಯ ಹಿರಿಯ ಉದ್ಯಮಿ ಸಿಲುಕಿದ್ದು, ಒಂದಲ್ಲ, ಎರಡಲ್ಲ ಬರೊಬ್ಬರಿ 15 ಕೋಟಿ ಹಣ ಕಳೆದುಕೊಂಡಿದ್ದಾರೆ‌.

ಸೈಬರ್‌ ವಂಚನೆ ಕುರಿತು ಜಾಗೃತಿ ಹೆಚ್ಚಾದಂತೆ ವಂಚಕರೂ ತಮ್ಮ ಕೃತ್ಯದ ಮಾರ್ಗವನ್ನು ಬದಲಿಸಿದ್ದಾರೆ.‌ ಹೀಗೆ ಡಿಜಿಟಲ್‌ ಅರೆಸ್ಟ್ ಮಾಡಿ ಬೆಳಗಾವಿ ನಗರದ 81 ವರ್ಷದ ವೃದ್ಧ ಉದ್ಯಮಿ‌ ಒಬ್ಬರನ್ನು ತಮ್ಮ ವಂಚನೆ ಖೆಡ್ಡಾಗೆ ಕೆಡವಿ, ಬರೊಬ್ಬರಿ 15 ಕೋಟಿ ರೂಪಾಯಿಯನ್ನು ಎಗರಿಸಿದ್ದಾರೆ.

ಡಾರ್ಕ್‌ ವೆಬ್‌ನಿಂದ ವ್ಯಕ್ತಿಯನ್ನು ಸಂಪರ್ಕಿಸಿರುವ ವಂಚಕರು, ಬಳಿಕ ನಿಮ್ಮ ಬ್ಯಾಂಕ್‌ ಖಾತೆ ಮನಿ ಲಾಂಡ್ರಿಂಗ್‌ ಪಟ್ಟಿಯಲ್ಲಿ ತೋರಿಸುತ್ತಿದೆ ಎಂದು ಹೆದರಿಸಿದ್ದಾರೆ. ವಿಡಿಯೋ ಕಾಲ್ ಮಾಡಿ ನಾವು ಇಡಿ ಅಧಿಕಾರಿಗಳು ಎಂದು ಬೆದರಿಸಿದ್ದಾರೆ. ನಾನೇನೂ ಮನಿ ಲಾಂಡ್ರಿಂಗ್ ಮಾಡಿಲ್ಲ ಎಂದು ವೃದ್ಧ ಹೇಳುತ್ತಿದ್ದಂತೆ ವರಸೆ ಬದಲಿಸಿರುವ ಖದೀಮರು, ಈಗ ತನಿಖೆ ಮಾಡುತ್ತಿದ್ದೇವೆ. ಅಲ್ಲಿಯವರೆಗೂ ನಿಮ್ಮ ಬಳಿಯ ಹಣವನ್ನು ನಾವು ಕೊಡುವ ಖಾತೆಗೆ ವರ್ಗಾಯಿಸಿ. ತನಿಖೆ ಮುಗಿಯುವವರೆಗೂ ನಿಮ್ಮ ಹಣ ನಮ್ಮ ಬಳಿ ಸುರಕ್ಷಿತವಾಗಿ ಇರುತ್ತದೆ. ತನಿಖೆ ಮುಗಿದ ಬಳಿಕ ಹಣ ಮರಳಿ ನಿಮ್ಮ ಖಾತೆಗೆ ವರ್ಗಾಯಿಸುತ್ತೇವೆ ಎಂದು ನಂಬಿಸಿದ್ದಾರೆ.

ವಂಚಕರ ಬಣ್ಣ ಬಣ್ಣದ ಮಾತಿಗೆ ಮರಳಾಗಿರುವ ವೃದ್ಧ ತಮ್ಮ ಖಾತೆಯಲ್ಲಿದ್ದ 15 ಕೋಟಿ ರೂ. ಹಣವನ್ನು ಸೈಬರ್ ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ.

ಎರಡ್ಮೂರು ದಿನಗಳ ನಂತರ ಸಂಪರ್ಕ ಮಾಡದೇ ಇದ್ದಾಗ ವೃದ್ಧನಿಗೆ ಅನುಮಾನ ಬಂದು ಬೆಳಗಾವಿಯ ನಗರ ಸಿಇಎನ್‌ ಠಾಣೆಯಲ್ಲಿ ವೃದ್ಧ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಂಚಕರ ಖಾತೆಯಿಂದ 90 ಲಕ್ಷ ರೂ.‌ ಪ್ರೀಜ್‌ ಮಾಡಿದ್ದಾರೆ. ವಂಚಕರ ಇನ್ನುಳಿದ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮಾ.18ರಂದು ಬೆಳಗಾವಿ ನಗರ ಸಿಇಎನ್‌ ಠಾಣೆಯಲ್ಲಿ ಡಿಜಿಟಲ್‌ ಅರೆಸ್ಟ್‌ ಪ್ರಕರಣ ದಾಖಲಾಗಿದೆ. ಬೆಳಗಾವಿ ನಗರದ 81 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ವಿಡಿಯೋ ಕಾಲ್‌ ಮಾಡಿ, ನಾವು ಸರ್ಕಾರಿ ಅಧಿಕಾರಿಗಳು ಮಾತಾಡುತ್ತಿರುವುದು ಅಂತಾ ಹೇಳಿ, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪ್ರಕರಣದ ಜೊತೆಗೆ ಸಂಬಂಧವಿದೆ. ನೀವು ದೊಡ್ಡ ಮೋಸ ಮಾಡಿದ್ದಿರಿ ಅಂತಾ ಹಂತ ಹಂತವಾಗಿ ಒಟ್ಟು 15 ಕೋಟಿ ರೂ. ಹಣ ತೆಗೆದುಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾಹಿತಿ ನೀಡಿದ್ದಾರೆ.
==

Follow on Facebook Follow on Instagram
Share. Facebook Twitter WhatsApp Telegram
Previous Articleಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸ್ವತಃ ಅಭ್ಯಂಜನ ಸ್ನಾನ ಮಾಡಿಸಿದ ಶಿಕ್ಷಕ!
Next Article ಬರಿಗಾಲಲ್ಲಿ ಶಾಮನೂರು ಮೊಮ್ಮಗ ಸುತ್ತಾಟ; ಎಲ್ಲ ದುಗ್ಗಮ್ಮ ದೇವಿ ಕೃಪೆ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಆಸ್ತಿಯಲ್ಲಿ ಭಾಗ ಕೇಳಿದ ತಂಗಿಯನ್ನೇ ಕುಡುಗೋಲಿಂದ ಕೊಚ್ಚಿ ಕೊಂದ ಅಣ್ಣ

March 21, 2026
Add A Comment
Leave A Reply Cancel Reply

Advertisement
Latest Posts

ಐಪಿಎಲ್ ಆರಂಭದ ಹೊಸ್ತಿಲಲ್ಲೇ ಬದಲಾಯ್ತು ನಿಯಮ

ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಗೆ ಮಾತೃ ವಿಯೋಗ

200 ಕೋಟಿ ರೂ. ಬಂಗಲೆ ಮಾಹಿತಿ ಮರೆಮಾಚಿದ ಆರೋಪ:

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ; ಹೈಕೋರ್ಟ್ ತರಾಟೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.