Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ದೇಶ-ವಿದೇಶ»ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ
ದೇಶ-ವಿದೇಶ

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 1, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

ಟಿಒಬಿ ನ್ಯೂಸ್ ಚಿತ್ರದುರ್ಗ

ಬರೋಬ್ಬರಿ 15 ವರ್ಷದ ನಂತರ ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಪ್ರತಿ 10 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಜನಗಣತಿ 2011ರ ಬಳಿಕ 2026 ಏ.1 ರಿಂದ (2027 ರ ಜನಗಣತಿ) ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಗಣತಿ ಡಿಜಿಟಲ್ ಜನಗಣತಿ ಪ್ರಾರಂಭವಾಗಿದೆ.

ಈ ವಿಶೇಷ ಕಾರ್ಯದ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಸಾಕಷ್ಟು ಪ್ರಚಾರ ನಡೆಸಿದೆ. ಏ.1 ರಂದು ಬೆಳಿಗ್ಗೆ 9.15ಕ್ಕೆ
ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯ ತೋಟಗಾರಿಕೆ ಇಲಾಖೆ ಕಚೇರಿ ಪಕ್ಕದ ಜಿಲ್ಲಾ ನ್ಯಾಯಾಧೀಶರ ನಿವಾಸದ ಬಳಿ ಜನಗಣತಿ – 2027ರ ಮೊದಲ ಹಂತದ ಮನೆ ಪಟ್ಟಿ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಚಾಲನೆ ನೀಡಲಿದ್ದಾರೆ.

ಮೊದಲ ಬಾರಿಗೆ ಜನಗಣತಿ ಡಿಜಿಟಲ್ ವಿಧಾನದಲ್ಲಿ ನಡೆಯಲಿದೆ. ಗಣತಿಕಾರರು ಕೂಡ ಮಾಹಿತಿಯನ್ನು ನೇರವಾಗಿ ತಮ್ಮ ಸ್ಮಾರ್ಟ್‌ ಫೋನ್ ಬಳಸಿ ನೇರವಾಗಿ ಆಪ್ ಲೋಡ್ ಮಾಡುತ್ತಾರೆ.

ಸ್ವಯಂ ಗಣತಿಗೂ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ ಎ.1ರಿಂದ ಏ.15ರವರೆಗೆ ಸ್ವಯಂ ಗಣತಿ ಹಾಗೂ ಏ.16ರಿಂದ ಮೇ 15ರವರೆಗೆ ಮನೆ ಪಟ್ಟಿ ಮಾಡುವುದು ಮತ್ತು ಮನೆ ಸೆನ್ಸಸ್ ನಡೆಯಲಿದೆ. ಈ ಹಿಂದೆ 2011ರಲ್ಲಿ ಜನಗಣತಿ ನಡೆದಿತ್ತು. 2021ರಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಗಣತಿಯನ್ನು ಮುಂದೂಡಲಾಗಿತ್ತು.

ಗಣತಿ ಮೊದಲ ಹಂತದಲ್ಲಿ ಸೆಪ್ಟೆಂಬರ್ 30ರವರೆಗೂ ವಿವಿಧ ರಾಜ್ಯಗಳಲ್ಲಿ ಸ್ವಯಂ ಗಣತಿ ಮತ್ತು ಮನೆಮನೆಗೆ ಸೆನಸ್ ಕಾರ್ಯ ನಡೆಯಲಿದೆ. ಜನರಿಂದ ಮಾಹಿತಿಯನ್ನು ಸಂಗ್ರಹಿಸುವ ಪ್ರಮುಖ ಹಂತ ಮುಂದಿನ ವರ್ಷದ ಫೆಬ್ರವರಿಯಲ್ಲಿ ಶುರುವಾಗುತ್ತದೆ.

ಇದು ದೇಶದ ಮೊದಲ ವೆಬ್ ಆಧಾರಿತ ಸ್ವಯಂ ಗಣತಿಯಾಗಿದ್ದು, ಆನ್‌ಲೈನ್‌ನಲ್ಲಿ ಜನರು ತಮ್ಮ ವಿವರಗಳನ್ನು ತಾವೇ ತುಂಬಬೇಕು. ಹದಿನಾರು ಭಾಷೆಗಳಲ್ಲಿ ಮಾಹಿತಿ ತುಂಬಲು ಜನರಿಗಿದೆ ಅವಕಾಶ

ಮೊದಲು se.census.gov.in ಗೆ ಲಾಗಿನ್ ಆಗಬೇಕು. ಆನಂತರ ‘ಎಸ್ ಇ’ ಪೋರ್ಟಲ್‌ ನಲ್ಲಿ ಮೊಬೈಲ್ ನಂ. ಹಾಕಬೇಕು. ಮೂಲಭೂತ ಮಾಹಿತಿ ಒದಗಿಸಿ ಗಣತಿ ನಿಗದಿಪಡಿಸಿಕೊಳ್ಳಬೇಕು.

Digital India Janagantai ಕರ್ನಾಟಕ ಚಿತ್ರದುರ್ಗ ಪೊಲಿಟಿಕ್ಸ್ ಬೆಂಗಳೂರು
Follow on Facebook Follow on Instagram
Share. Facebook Twitter WhatsApp Telegram
Previous Articleಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ
Next Article ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

April 1, 2026

ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ

April 1, 2026

ಡಿಜಿಟಲ್ ಜಗತ್ತು ಅವಕಾಶಗಳ ಮಹಾಸಾಗರ; ಬಳಕೆಯಲ್ಲಿ ಇರಲಿ ಎಚ್ಚರ

April 1, 2026
Add A Comment
Leave A Reply Cancel Reply

Advertisement
Latest Posts

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ

ಡಿಜಿಟಲ್ ಜಗತ್ತು ಅವಕಾಶಗಳ ಮಹಾಸಾಗರ; ಬಳಕೆಯಲ್ಲಿ ಇರಲಿ ಎಚ್ಚರ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.