ಚಿತ್ರದುರ್ಗ ಜು. 01 ರೋಟರಿ ಕ್ಲಬ್ ಚಿತ್ರದುರ್ಗ,ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಆರ್ಯ ವೈಶ್ಯಸಂಘ ಇನ್ನರ್ವೀಲ್‍ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್ ಸಂಹಯೋಗದೊಂದಿಗೆ ಬಸವೇಶ್ವರ ಬ್ಲಡ್ ಬ್ಯಾಂಕ್ ಮತ್ತು ರೆಡ್‍ಕ್ರಾಸ್ ಸೊಸೈಟಿಸಹಕಾರದೊಂದಿಗೆ ಚಿತ್ರದುರ್ಗ ನಗರದಲ್ಲಿ ಮಂಗಳವಾರ ವಾಸವಿ ಮಹಲ್‍ನಲ್ಲಿ ವೈದ್ಯರ ಮತ್ತು ಲೆಕ್ಕ ಪರಿಶೋಧಕರದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ರಕ್ತದಾನ ಶಿಬಿರದಲ್ಲಿ ಪುರುಷ ಮಹಿಳೆ ಎನ್ನದೆ ಎಲ್ಲರು ಸಹಾ ರಕ್ತವನ್ನು ದಾನ ಮಾಡಿದರು. ರಕ್ತದಾನ ಶಿಬಿರವನ್ನು ಉದ್ಘಾಟಿಸಿದರೋಟರಿಯನ್ ಸಂಸ್ಥೆಯ ಜಿಲ್ಲಾ ಗೌರನ್ನರ್ ಎಂ.ಕೆ.ರವೀಂದ್ರ ಮಾತನಾಡಿ, ರಕ್ತದಾನ ಎನ್ನುವುದು ಸ್ವಯಂ ಪ್ರೇರಿತವಾಗಿಬರಬೇಕಿದೆ, ರಕ್ತದ ಕೊರತೆಯಿಂದ ಬಹಳಷ್ಟು ಜನ ನರಳುತ್ತಿ ದ್ದಾರೆ ಈ ರೀತಿಯಾದ ರಕ್ತದಾನ ಶಿಬಿರಗಳನ್ನು ಆಯೋಜನೆಮಾಡುವುದರ ಮೂಲಕ ಅಂತಹರಿಗೆ ನೆರವಾಗಬೇಕಿದೆ. ನಮ್ಮ ದೇಹದಲ್ಲಿ ರಕ್ತವನ್ನು ದಾನ ಮಾಡುವುದರಿಂದ ಯಾವುದೇ ರೀತಿಯಹಾನಿಯಾ ಗುವುದಿಲ್ಲ ಬದಲಿಗೆ ಹೊಸದಾದ ರಕ್ತ ಬರುತ್ತದೆ. ರಕ್ತವನ್ನು ನಿಯಮಿತವಾದ ಸಮಯದಲ್ಲಿ ದಾನ ಮಾಡುವುದರಿಂದನಮ್ಮ ದೇಹದಲ್ಲಿ ರಕ್ತ ಉತ್ಪಾದನೆಯಾಗುತ್ತದೆ ಎಂದರು.
ಈ ರಕ್ತದಾನ ಶಿಬಿರದಲ್ಲಿ ಸುಮಾರು 20 ಯೂನಿಟ್‍ಗಳಷ್ಟು ರಕ್ತವನ್ನು ಸಂಗ್ರಹ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಅಧ್ಯಕ್ಷರಾದ ಭಾಗ್ಯಲಕ್ಷ್ಮೀ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್‍ನಅಧ್ಯಕ್ಷರಾದಶಶಿಧರ್ಗುಪ್ತ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷರಾದ ದಿಲ್‍ಷಾದ್ ವುನೀಸ್, ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಬಾಬು,ಇನ್ನರ್ ವೀಲ್‍ಕ್ಲಬ್‍ನ ಅಧ್ಯಕ್ಷರಾದ ವೀಣಾ, ಇನ್ನರ್ ವೀಲ್‍ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್‍ನ ಅಧ್ಯಕ್ಷರಾದ ಗಾಯತ್ರಿ ಶಿವರಾಂ,ರೋಟೇರಿಯನ್‍ಗಳಾದ ಮಧುಪ್ರಸಾಸದ, ಎಸ್.ವಿರೇಶ್, ಸೂರ್ಯ ಪ್ರಕಾಶ್, ವೀರಭದ್ರಸ್ವಾಮಿ, ಜಯಶ್ರೀ ಷಾ, ಮಾಧುರಿ,ಯೋಗೀಶ್, ಮಂಜುನಾಥ್ ಬಾಗತ್ವ್, ಗುರುಮೂರ್ತಿ ಸುರೇಶ್, ಶಿವರಾಂ, ಮೈಲೇಶ್ ಕುಮಾರ್, ಮಹಡಿ ಶಿವಮೂರ್ತಿ,ಚಂದ್ರಮೋಹನ್, ವೆಂಕಟೇಶ್, ಮಧು ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



