ಚಿತ್ರದುರ್ಗ : ಬೃಹತ್ ಶಿಲಾಯುಗ ಕಾಲದಲ್ಲಿ ಮಾನವ ಮೊಟ್ಟ ಮೊದಲು ಕಬ್ಬಿಣ ಬಳಕೆ ಮಾಡಿದ್ದು, ಎಂದು ಪುರಾತತ್ವ
ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಕಮಲಾಪುರದ ಡಾ.ಆರ್.ತೇಜೇಶ್ವರ ತಿಳಿಸಿದರು.
ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ,ಸಂಸ್ಕೃತಿ, ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ
ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಭಾನುವಾರ ನಡೆದ 51 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಚೀನಸ್ಮಾರಕಗಳ ಸಂರಕ್ಷಣೆ ಈಚಿನ ಅನ್ವೇಷಣೆಗಳ ಹಿನ್ನೆಲೆಯಲ್ಲಿ ಎಂಬ ವಿಷಯ ಕುರಿತು ಮಾತನಾಡಿದರು.
ಶಿಲಾಯುಗ, ಮಡಿಕೆ, ಶಿಲಾಶಾಸನ, ತಾಮ್ರಶಾಸನ, ಮೂರ್ತಿಶಿಲ್ಪಿ, ಮಾಸ್ತಿಗಲ್ಲು, ವೀರಗಲ್ಲು ಶಿಲ್ಪಿ, ಹಳೆ ಶಿಲಾಯುಗ, ನೂತನಶಿಲಾಯುಗ, ಅರಿಯುವ ಕಲ್ಲು, ಶಿಲಾಯುಧ, ನಿಲಿಸುಗಲ್ಲು, ಕದಂಬರು ಆಳಿದ ಕೋಟೆಗಳು ಶಾಸನಗಳು ಸಿಗುತ್ತವೆ. ಕೆಳದಿ ಅರಸರಫಲವಂತಿಕೆ ಶಿಲ್ಪಗಳು, ದ್ವಿಬಾಹು ಗಣೇಶ ಇವುಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಮಾದಾಪುರದಲ್ಲಿ ಸಿಕ್ಕಿದ್ದು,ಎನ್ನುವುದನ್ನು ಸ್ಲೈಡ್‍ಗಳ ಮೂಲಕ ಪ್ರದರ್ಶಿಸಿದರು.
ಬಾದಾಮಿ ಚಾಲುಕ್ಯರ ಶಾಸನ, ಸಿಡಿತಲೆ ವೀರಗಲ್ಲುಗಳು, ರಾಷ್ಟ್ರಕೂಟರ ಕಾಲದ ವೀರಗಲ್ಲುಗಳನ್ನು ವ್ಯಕ್ತಿ ಪೂಜೆಯಲ್ಲಿ
ಕಾಣಬಹುದು. ಕರ್ನಾಟಕದಲ್ಲಿ ಬರಗಾಲ ಉಲ್ಲೇಖಿಸುವ ಮೊದಲ ಶಾಸನ, ರಾಕೆಟ್‍ಗಳು ಸಂಶೋಧನೆಯಲ್ಲಿ ಸಿಕ್ಕಿವೆ. ಕದಂಬ,ರವಿವರ್ಮನ ಶಾಸನ ಶಿವಪ್ಪನಾಯಕ ಅರಮನೆಯಲ್ಲಿರುವ ಪಟ್ಟಾಕತ್ತಿಗಳು ಪಟ್ಟಾಕತ್ತಿಯ ಶಿಲ್ಪವಿರುವ ವೀರಗಲ್ಲುಗಳನ್ನುಕಾಣಬಹುದು. ಮರಾಠರು, ಕೆಳದಿ ಅರಸರು, ಪಟ್ಟಾಕತ್ತಿಗಳನ್ನು ಬಳಸುತ್ತಿದ್ದರು. ನೃತ್ಯದ ಶಿಲ್ಪಗಳು, ಕೋಟೆಯ ಚಿತ್ರಣಸೂರ್ಯಗ್ರಹಣ, ಚಂದ್ರಗ್ರಹಣ, ಶಿಲ್ಪಗಳು, ಸುವರ್ಣದಾನ ನೀಡುವ ಆತ್ಮಬಲಿದಾನದ ಶಿಲ್ಪ, ಹಂದಿ, ಮೊಲ ಬೇಟೆಯ ವೀರಮಾಸ್ತಿಗಲ್ಲುಗಳು ಮಹಾರಾಷ್ಟ್ರದಲ್ಲಿ ಗರುಢ ನಂದಿ ಕಂಡು ಬಂದಿತು ಎಂದು ಹೇಳಿದರು.
ಶಿವಪ್ಪನಾಯಕ ಅರಮನೆಯಲ್ಲಿ ರಾಕೆಟ್‍ಗಳಿವೆ. ಮದ್ದು ತುಂಬಿದ ರಾಕೆಟ್‍ಗಳು, ರಾಕೆಟ್ ತಯಾರಿಕೆಯ ವಸ್ತುಗಳು ಕಂಡು ಬಂದವು.
ವಿಶೇಷ ಶಿಲ್ಪಗಳು, ಸ್ಮಾರಕಗಳ ದತ್ತು ಯೋಜನೆಯಿದೆ. ಸ್ಮಾರಕಗಳ ಸಂರಕ್ಷಣೆ ಹೇಗೆ ಎಂಬ ತರಬೇತಿ ನೀಡುತ್ತೇವೆ. ಎಲ್ಲಾ
ಸ್ಮಾರಕಗಳಲ್ಲೂ ಬಾವಲಿ ಪಕ್ಷಿಗಳಿವೆ. ಸೂಕ್ಷ್ಮ ಅಧ್ಯಯನ ಮಾಡಿ ಸ್ಮಾರಗಳು, ಶಾಸನಗಳನ್ನು ಸಂರಕ್ಷಿಸುವ ಅಗತ್ಯವಿದೆ.ಹಾಗಾಗಿಸ್ಮಾರಕಗಳನ್ನು ಸ್ಥಳಾಂತರ ಮಾಡಬಹುದು. ಮತ್ತಿ ತಿಮ್ಮಣ್ಣನಾಯಕನ ಸಮಾಧಿ, ಮಾಯಕೊಂಡದಲ್ಲಿರುವ ಮದಕರಿನಾಯಕನ ಸಮಾಧಿಗೆ ಹೋಗಿದ್ದೇನೆ. ಕದಂಬರು, ಮೌರ್ಯರ ಕಾಲದ ಸ್ಮಾರಕಗಳಿವೆ. ಚಾಲುಕ್ಯರು, ರಾಷ್ಟ್ರಕೂಟರು ಆಳ್ವಿಕೆ ನಡೆಸಿದ್ದಾರೆಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ತನ್ನದೆ ಆದ ಇತಿಹಾಸವಿದೆ. ಕೋಟೆ ಆಳಿದ ಪಾಳೆಯಗಾರರನ್ನು ಕೇವಲ ನಾಯಕ ಜನಾಂಗಕ್ಕಷ್ಟೆ ಮೀಸಲುಗೊಳಿಸುವುದು ಸರಿಯಲ್ಲ. ಜಾತಿಯಿಂದ ಇತಿಹಾಸ ನೋಡುವ ದರಿದ್ರ ಮೊದಲು ನಿವಾರಣೆಯಾಗಬೇಕು. ಕ್ಷೇತ್ರ ಕಾರ್ಯದಲ್ಲಿ ಕೈಗೊಂಡಿರುವ ಹೊಸ ವಿಷಯವನ್ನು ಡಾ.ಆರ್.ತೇಜೇಶ್ವರ ಕೈಗೆತ್ತಿಕೊಂಡಿದ್ದಾರೆಂದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ.ಲಕ್ಷ್ಮಣ ತೆಲಗಾವಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಸಹಾಯಕ ನಿರ್ದೇಶಕ ಪ್ರಹ್ಲಾದ್ ಜಿ. ಪ್ರೊ.ಟಿ.ವಿ.ಸುರೇಶ್‍ಗುಪ್ತ, ಡಾ.ದೊಡ್ಡಮಲ್ಲಯ್ಯ, ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಮೃತ್ಯುಂಜಯ, ಅಪರಾದ ಶಾಸ್ತ್ರವಿಭಾಗದ ವಿಶ್ರಾಂತ ಪ್ರಾಧ್ಯಾಪಕಡಾ.ನಟರಾಜ್, ಪ್ರೊ.ಹೆಚ್.ನಿಂಗಪ್ಪ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಗೋಪಾಲಸ್ವಾಮಿನಾಯಕ, ರಾಜಾವೀರ ಮದಕರಿ ಜಯಚಂದ್ರನಾಯಕ ಪ್ರೊ.ಎಂ.ಜಿ.ರಂಗಸ್ವಾಮಿ, ಜಿ.ಎಸ್.ಉಜ್ಜಿನಪ್ಪ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



