Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಭದ್ರಾ ಮೇಲ್ದಂಡೆ ವೇಗಕ್ಕೆ ಪಟ್ಟು; ಯುಗಾದಿ ಆಚರಣೆ ತ್ಯಜಿಸಿದ ಸಿರಿಗೆರೆ ಶ್ರೀ

ಸರಕೆ ಚುನರಿಯಾ’ ಹಾಡು ನಿಷೇಧವಿಲ್ಲ: ಸಂಸತ್ತಿನಲ್ಲಿ ಸಚಿವರ ಸ್ಪಷ್ಟನೆ

₹16 ಸಾವಿರ ಕೋಟಿ ಮೌಲ್ಯಕ್ಕೆ RCB ಮಾರಾಟ? ಬಿಡ್ ಪ್ರಕ್ರಿಯೆ ಅಂತಿಮ ಹಂತದಲ್ಲಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ನಿಮ್ಮ ಜತೆ ನಾವಿದ್ದೇವೆ; ತಿಪ್ಪೇಸ್ವಾಮಿಗೆ ಸಮಾನ ಮನಸ್ಕ ಪತ್ರಕರ್ತರ ಅಭಯ
ಚಿತ್ರದುರ್ಗ

ನಿಮ್ಮ ಜತೆ ನಾವಿದ್ದೇವೆ; ತಿಪ್ಪೇಸ್ವಾಮಿಗೆ ಸಮಾನ ಮನಸ್ಕ ಪತ್ರಕರ್ತರ ಅಭಯ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 17, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}
Share
WhatsApp Twitter Facebook Telegram

ನಿಮ್ಮ ಜತೆ ನಾವಿದ್ದೇವೆ; ತಿಪ್ಪೇಸ್ವಾಮಿಗೆ ಸಮಾನ ಮನಸ್ಕ ಪತ್ರಕರ್ತರ ಅಭಯ

ನಿಸ್ವಾರ್ಥ ಹೋರಾಟಕ್ಕೆ ಸದಾ ಬೆಂಬಲ – ಆರೋಗ್ಯದತ್ತ ಗಮನಹರಿಸಿ – ನೀರಿನ ವಿಚಾರದಲ್ಲಿ ನಾವು ಧ್ವನಿ ಆಗುತ್ತೇವೆ

ಚಿತ್ರದುರ್ಗ: ನಿಮ್ಮ ಜತೆ ನಾವಿದ್ದೇವೆ, ಯಾವುದೇ ಹಂತದಲ್ಲೂ ಎದೆಗುಂದ ಬೇಡಿ, ನಿಸ್ವಾರ್ಥ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅವರಿಗೆ ಸಮಾನ ಮನಸ್ಕ ಪತ್ರಕರ್ತರ ತಂಡ ವಿಶ್ವಾಸ ತುಂಬಿತು.

ಹಿರಿಯೂರು ತಾಲ್ಲೂಕಿನ ಬೀರನಹಳ್ಳಿ ತಮ್ಮ ನಿವಾಸಕ್ಕೆ ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ತಂಡದ ಸದಸ್ಯರು, ಮೊದಲು ನಿಮ್ಮ ಆರೋಗ್ಯದತ್ತ ಗಮನಹರಿಸಿ, ನೀರಿನ ವಿಚಾರದಲ್ಲಿ ನಾವು ಧ್ವನಿ ಆಗುತ್ತೇವೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಜಿಲ್ಲೆಯ ಬಹುತೇಕ ಪತ್ರಕರ್ತರು ಹೋರಾಟದ ಮನಸ್ಸುಳ್ಳವರು. ನನ್ನ ಆರೋಗ್ಯ ಕುರಿತು ಕಾಳಜಿ ವಹಿಸಿ ದೂರದಿಂದ ನಿವಾಸಕ್ಕೆ ಭೇಟಿ ನೀಡಿರುವುದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ನಿಮ್ಮ ಈ ಪ್ರೀತಿಗೆ ಸದಾ ಚಿರಋಣಿ ಎಂದು ಭಾವುಕರಾದರು.

ನನಗೆ ನನ್ನ ಆರೋಗ್ಯ, ಬದುಕು ಮುಖ್ಯವಲ್ಲ. ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಲಕ್ಷಾಂತರ ಜನರ ಬದುಕು ಉನ್ನತಗೊಳ್ಳಬೇಕು. ಅದೇ ನನ್ನ ಗುರಿ ಎಂದು ಹೇಳಿದರು.

ಮೂರು ತಿಂಗಳು ನಿರಂತರ ಹೋರಾಟ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಸಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲೆಯ ಭದ್ರಾ ಯೋಜನೆ ಪರವಾಗಿ ಬಜೆಟ್‌ನಲ್ಲಿ ಹಣ ಘೋಷಿಸಲಿಲ್ಲ. ಕೇಂದ್ರ ಸರ್ಕಾರ 2023ರ ಬಜೆಟ್‌ನಲ್ಲಿ 5,300 ಕೋಟಿ ರೂ. ಘೋಷಿಸಿತು, ಜೊತೆಗೆ ರಾಷ್ಟಿçÃಯ ಯೋಜನೆಯೆಂದು ಘೋಷಿಸುತ್ತೇವೆಂದು ನರೇಂದ್ರ ಮೋದಿ ಸೇರಿ ಎಲ್ಲ ನಾಯಕರು ಘೋಷಿಸಿದರು. ಅದೇ ರೀತಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಸ್ಪಷ್ಟವಾಗಿ ತಿಳಿಸುತ್ತಿಲ್ಲ ಎಂದು ಬೇಸರಿಸಿದರು.

ಜಿಲ್ಲೆಯಲ್ಲಿ ಅಂತರ್ಜಲ ಕುಸಿತಗೊಂಡಿದೆ. ಕುಡಿಯುವ ನೀರು ಯೋಗ್ಯವಿಲ್ಲವೆಂದು ಅನೇಕ ವರದಿಗಳು ಹೇಳಿವೆ. ಕುಡಿಯುವ ನೀರಿಗಾಗಿ ಎಲ್ಲೆಡೆ ಪರದಾಟ ಆರಂಭವಾಗಿದೆ. ಆದರೂ ಸರ್ಕಾರಗಳು ನಮ್ಮ ಜಿಲ್ಲೆಗೆ ಭದ್ರಾ ನೀರು ಹರಿಸಿ ಬದುಕು ಹಸನುಗೊಳಿಸುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

ಮೂರು ತಿಂಗಳು ಸರಣಿ ರೀತಿ ಜಿಲ್ಲೆಯಲ್ಲಿ ಚಳವಳಿ ನಡೆಸಲಾಯಿತು. ಜನರು ಎಲ್ಲೆಡೆ ಕೂಗು ಹಾಕಿದರು. ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕುಗಳು ಸಂಪೂರ್ಣ ಬಂದ್ ಮಾಡುವ ಮೂಲಕ ಭದ್ರಾ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು.

ಜಿಲ್ಲಾ ಕೇಂದ್ರದಲ್ಲಿ 3 ಸಾವಿರ ಮಂದಿ ಸೇರಿ ಸಮಾವೇಶ ನಡೆಸಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಲಾಯಿತು. ಜಿಲ್ಲೆಯ ಜನಪ್ರತಿನಿಧಿಗಳು ಎಲ್ಲರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ತೆರಳಿ ಭದ್ರಾ ಯೋಜನೆಗೆ 5 ಸಾವಿರ ಕೋಟಿ ರೂ. ಮೀಸಲಿಡುವಂತೆ ಮನವಿ ಮಾಡಿದರು. ಆದರೂ ಯಾವುದು ಫಲ ಕೊಡಲಿಲ್ಲ ಎಂದು ನೊಂದುಕೊAಡರು.

ಕೇAದ್ರ ಸರ್ಕಾರ ಘೋಷಿಸಿದ 5,300 ಕೋಟಿ ರೂಪಾಯಿಯನ್ನು ಯಾವುದೇ ಷರತ್ತು ಇಲ್ಲದೆ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ 157 ಕೆರೆ ತುಂಬಿಸುವುದು, 135 ಕಿಮೀ ಕಾಲುವೆ ಕಾಮಗಾರಿ 2027ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿದೆ. ಇದಕ್ಕೆ ಇಂತಿಷ್ಟು ಹಣವನ್ನು ಎತ್ತಿಡಬೇಕು. ಈ ಸಂಬAಧ ಅಧಿವೇಶನದಲ್ಲಿ ನೀರಾವರಿ ಮಂತ್ರಿಗಳು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಜನ ಇನ್ನಷ್ಟು ಉಗ್ರವಾಗಿಯೇ ಸರ್ಕಾರಗಳಿಗೆ ಚಾಟಿ ಬೀಸಬೇಕು. ಜನಾಂದೋಲನ ರೂಪುಗೊಳ್ಳಬೇಕು. ಎಲ್ಲ ಜನಪ್ರತಿನಿಧಿಗಳ ಮನೆ ಬಾಗಿಲ ಬಳಿ ಪ್ರತಿಭಟನೆ, ಬೀಗ ಜಡಿದು ಮುಷ್ಕರ, ವಿಧಾನಸೌಧಕ್ಕೆ ಮುತ್ತಿಗೆ, ದೆಹಲಿ ಚಲೋ ಹಮ್ಮಿಕೊಳ್ಳಬೇಕು. ಆಗ ಮಾತ್ರ ಸರ್ಕಾರಗಳು ಭದ್ರಾ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತವೇ. ಈ ನಿಟ್ಟಿನಲ್ಲಿ ಹೋರಾಟ ರೂಪಿಸಬೇಕೆಂದು ಹೇಳಿದರು.

ಭೋವಿ ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಮಹೇಶಬಾಬು, ಟೈಮ್ಸ್ ಆಫ್ ಬಯಲುಸೀಮೆ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ವೀರೇಂದ್ರ ಕೋಗುಂಡೆ ಮಠ, ಹಿರಿಯ ಪತ್ರಕರ್ತರಾದ ಬಸವರಾಜ್ ಮುದನೂರು, ವಿ.ಚಂದ್ರಪ್ಪ, ದ್ವಾರಕನಾಥ್, ರಂಗನಾಥ್, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ್ ಅಪ್ಪು, ರಾಜ್ಯ ಸಮಿತಿ ಸದಸ್ಯ ಎಸ್.ಸಿದ್ದರಾಜು, ರಾಜ್ಯ ಕುರುಬ ಸಂಘದ ಮಾಜಿ ನಿರ್ದೇಶಕ ಎಮ್ಮೆಹಟ್ಟಿ ಹನುಮಂತಪ್ಪ, ಮುಖಂಡ ಎಂ.ದಯಾನAದ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ಪತ್ರಕರ್ತರಾದ ಕೆ.ಪಿ.ಓಂಕಾರಮೂರ್ತಿ, ಕಿರಣ್ ತೊಡರನಾಳ್ ಸೇರಿ 25ಕ್ಕೂ ಹೆಚ್ಚು ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.

==

ಆರೋಗ್ಯದತ್ತ ಚಿತ್ತ ಇರಲಿ

ಆರೋಗ್ಯ ಇದ್ದರೇ ಮಾತ್ರ ಜನರ ಸೇವೆ ಮಾಡಲು ಸಾಧ್ಯ. ಆದ್ದರಿಂದ ಇನ್ನೂ ನಾಲ್ಕೆöÊದು ತಿಂಗಳು ಕಾಲ ಸಂಘಟನೆ, ಚಳವಳಿ ಎಲ್ಲವನ್ನೂ ಮರೆತು ವಿಶ್ರಾಂತಿ ಪಡೆಯಿರಿ. ಬಳಿಕ ಬೃಹತ್ ಹೋರಾಟ ರೂಪಿಸುವಂತೆ ನಾವೆಲ್ಲರೂ ಬೆಂಬಲವಾಗಿರುತ್ತೇವೆ ಎಂದು ಭೇಟಿ ನೀಡಿದ್ದ ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು ಕೆ.ಟಿ.ತಿಪ್ಪೇಸ್ವಾಮಿ ಅವರಿಗೆ ಕಿವಿಮಾತು ಹೇಳಿದರು.

ಉಪವಾಸ ಸತ್ಯಾಗ್ರಹದ ಬಳಿಕ ಕೆಲವೇ ಗಂಟೆಗಳಲ್ಲಿ ನಿಮ್ಮ ಆರೋಗ್ಯ ಕೈಕೊಟ್ಟಾಗ ತಕ್ಷಣವೇ ನಿಮ್ಮ ನೆರವಿಗೆ ಬಂದಿರುವುದು ನಿಮ್ಮ ಕುಟುಂಬ. ಆದ್ದರಿಂದ ಅವರು ಹೇಳಿದಂತೆ ಸ್ವಲ್ಪ ದಿನ ಆರೋಗ್ಯದತ್ತ ಗಮನಹರಿಸಿ, ಬಳಿಕ ಹೋರಾಟ ಇದ್ದೇ ಇರುತ್ತದೆ ಎಂದು ಸಲಹೆ ನೀಡಿದರು.

==

ಬಾಕ್ಸ್

ಭದ್ರಾ ಯೋಜನೆಗೆ ಅನುದಾನ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದ ಬಳಿಕ ಅನಾರೋಗ್ಯದಿಂದ ಶಸ್ತçಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ರೈತನಾಯಕ ಕೆ.ಟಿ.ತಿಪ್ಪೇಸ್ವಾಮಿ ನಿವಾಸಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

chitradurga karanataka ಚಿತ್ರದುರ್ಗ
Follow on Facebook Follow on Instagram
Share. Facebook Twitter WhatsApp Telegram
Previous Articleಗಮನ ಸೆಳೆಯುವ ಸೂಚನೆಗಳಿಗೆ ನಿಗದಿತ ಸಮಯದಲ್ಲಿ ಉತ್ತರ ನೀಡವಂತೆ ಅಧಿಕಾರಿಗಳಿಗೆ ಸೂಚಿನೆ – ಸಭಾಧ್ಯಕ್ಷ ಯು.ಟಿ. ಖಾದರ್*
Next Article ಕರ್ನಾಟಕದಲ್ಲಿ ಯುಗಾದಿ ಹಬ್ಬ: ಆಚರಣೆ, ಊಟ ಮತ್ತು ಸಂಪ್ರದಾಯ – ಸಂಕ್ಷಿಪ್ತ ಮಾಹಿತಿ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಭದ್ರಾ ಮೇಲ್ದಂಡೆ ವೇಗಕ್ಕೆ ಪಟ್ಟು; ಯುಗಾದಿ ಆಚರಣೆ ತ್ಯಜಿಸಿದ ಸಿರಿಗೆರೆ ಶ್ರೀ

March 18, 2026

₹16 ಸಾವಿರ ಕೋಟಿ ಮೌಲ್ಯಕ್ಕೆ RCB ಮಾರಾಟ? ಬಿಡ್ ಪ್ರಕ್ರಿಯೆ ಅಂತಿಮ ಹಂತದಲ್ಲಿ

March 18, 2026

ಯುಗಾದಿ ವಿಶೇಷ: ಆರೋಗ್ಯದ ಗುಟ್ಟು ‘ಅಭ್ಯಂಗ’ದಲ್ಲಿದೆ – ಆಯುಷ್ ಅಧಿಕಾರಿ ಸಲಹೆ

March 18, 2026
Add A Comment
Leave A Reply Cancel Reply

Advertisement
Demo
Latest Posts

ಭದ್ರಾ ಮೇಲ್ದಂಡೆ ವೇಗಕ್ಕೆ ಪಟ್ಟು; ಯುಗಾದಿ ಆಚರಣೆ ತ್ಯಜಿಸಿದ ಸಿರಿಗೆರೆ ಶ್ರೀ

ಸರಕೆ ಚುನರಿಯಾ’ ಹಾಡು ನಿಷೇಧವಿಲ್ಲ: ಸಂಸತ್ತಿನಲ್ಲಿ ಸಚಿವರ ಸ್ಪಷ್ಟನೆ

₹16 ಸಾವಿರ ಕೋಟಿ ಮೌಲ್ಯಕ್ಕೆ RCB ಮಾರಾಟ? ಬಿಡ್ ಪ್ರಕ್ರಿಯೆ ಅಂತಿಮ ಹಂತದಲ್ಲಿ

ಯುಗಾದಿ ವಿಶೇಷ: ಆರೋಗ್ಯದ ಗುಟ್ಟು ‘ಅಭ್ಯಂಗ’ದಲ್ಲಿದೆ – ಆಯುಷ್ ಅಧಿಕಾರಿ ಸಲಹೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.