ಬರಿಗಾಲಲ್ಲಿ ಶಾಮನೂರು ಮೊಮ್ಮಗ ಸುತ್ತಾಟ; ಎಲ್ಲ ದುಗ್ಗಮ್ಮ ದೇವಿ ಕೃಪೆ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
ಸಿಹಿ ತಿನ್ನಿಸಿ, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿದ ಜೈಕಾರ ಕೂಗಿದರು. ಕುರುಬರಕೇರಿಯಲ್ಲಿ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಸಮರ್ಥ್ ಅವರು ಬರಿಗಾಲಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದಾರೆ.
ಟಿಕೆಟ್ ಘೋಷಣೆ ಬಳಿಕ ದಾವಣಗೆರೆ ಕಾಂಗ್ರೆ ಅಭ್ಯರ್ಥಿ ಸಮರ್ಥ್ ಶಾಮನೂರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ದುಗ್ಗಮ್ಮ ದೇವಸ್ಥಾನ ಒಳಗಡೆ ಹೋಗಿ ಕೈ ಮುಗಿಯುತ್ತಿದ್ದಂತೆ ಟಿಕೆಟ್ ಘೋಷಣೆ ಆಯಿತು. ನಮ್ಮ ಜೊತೆ ಯಾವಾಗಲೂ ಶುಭ ಸೂಚನೆಗಳೇ ಇರುತ್ತವೆ ಎಂದರು.
ನಮ್ಮ ಜನರ ಮೇಲೆ ನಮಗೆ ವಿಶ್ವಾಸ ಇದೆ. ಆಕಾಂಕ್ಷಿಗಳು ಬಹಳ ಜನ ಇದ್ದಾಗ ಗೊಂದಲ ಸಾಮಾನ್ಯ, ಆದರೆ ಯಾರು ಗೆಲ್ಲುವಂಥಹ ಅಭ್ಯರ್ಥಿ ಇರ್ತಾರೆ ಅವರಿಗೆ ಟಿಕೆಟ್ ಕೊಡುತ್ತಾರೆ. ಎಲ್ಲರೂ ನನ್ನನ್ನು ಊರಿನ ಮಗ ಅಂತ ಹೇಳುತ್ತಾರೆ. ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದರು.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಅಲ್ಪಸಂಖ್ಯಾತರು, ಎಲ್ಲರೂ ಸೇರಿ ಕಾಂಗ್ರೆಸ್ ಗೆಲ್ಲಿಸುತ್ತೇವೆ. ಯಾರು ಪಕ್ಷಕ್ಕೆ ದುಡಿಯುತ್ತಾರೆ ಅವರನ್ನು ಗುರುತಿಸುವ ನಿಯತ್ತು ಕಾಂಗ್ರೆಸ್ ಪಕ್ಷದಲ್ಲಿದೆ ಎಂದರು.
ಅಲ್ಪಸಂಖ್ಯಾತರು ನಾವು ಅಣ್ಣ ತಮ್ಮಂದಿರ ರೀತಿ ಇದ್ದೇವೆ ಸಣ್ಣಪುಟ್ಟ ಕಿಡಿಗೇಡಿಗಳು ಗೊಂದಲ ಮೂಡಿಸಿರಬಹುದು.
ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ, ಯಾರ ವಿರೋಧ ಇಲ್ಲ. ಅಲ್ಪಸಂಖ್ಯಾತರು, ಎಸ್‌ಸಿ ಎಸ್‌ಟಿ ಬಾಂಧವ್ಯ ಚೆನ್ನಾಗಿದೆ
ನಲವತ್ತು ವರ್ಷದಿಂದ ನಮ್ಮ ಕುಟುಂಬ ಎಲ್ಲರ ವಿಶ್ವಾಸ ಗಳಿಸುತ್ತಾ ಬಂದಿದೆ ಎಂದು ತಿಳಿಸಿದರು.
