Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಐಪಿಎಲ್ ಆರಂಭದ ಹೊಸ್ತಿಲಲ್ಲೇ ಬದಲಾಯ್ತು ನಿಯಮ

ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಗೆ ಮಾತೃ ವಿಯೋಗ

200 ಕೋಟಿ ರೂ. ಬಂಗಲೆ ಮಾಹಿತಿ ಮರೆಮಾಚಿದ ಆರೋಪ:

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜಕೀಯ»ಅಖಾಡದಲ್ಲಿ ಕೋಟಿವೀರರು; ಕೈ-ಕಮಲ ನಡುವೆ ಜಿದ್ದಾಜಿದ್ದಿ
ರಾಜಕೀಯ

ಅಖಾಡದಲ್ಲಿ ಕೋಟಿವೀರರು; ಕೈ-ಕಮಲ ನಡುವೆ ಜಿದ್ದಾಜಿದ್ದಿ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 21, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}
Share
WhatsApp Twitter Facebook Telegram

ಅಖಾಡದಲ್ಲಿ ಕೋಟಿವೀರರು; ಕೈ-ಕಮಲ ನಡುವೆ ಜಿದ್ದಾಜಿದ್ದಿ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಖಾಡಕ್ಕೆ ಕೋಟಿವೀರರು ಇಳಿದಿದ್ದು, ಇದೀಗ ಕೈ-ಕಮಲ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ನಾಮಪತ್ರ ಸಲ್ಲಿಕೆ ಮಾಡಿದ ಸ್ಪರ್ಧಿಗಳು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.

 

ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್‌ ಶಾಮನೂರು ಯುವ ಉದ್ಯಮಿಯಾಗಿದ್ದು ಒಟ್ಟು 4.25 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ಲ್ಲಿ ವಿವರ ನೀಡಿದ್ದಾರೆ. 2.17 ಕೋಟಿ ರೂ. ಮೌಲ್ಯದ ಚರ ಆಸ್ತಿ ಹಾಗೂ 2.08 ಕೋಟಿ ಮೌಲ್ಯದ ಕೃಷಿ ಭೂಮಿ ಸೇರಿದಂತೆ ಸ್ಥಿರ ಆಸ್ತಿಯಿದೆ ಎಂದು ಉಲ್ಲೇಖಿಸಿದ್ದಾರೆ.

 

ಆನೆಕೊಂಡ ಹಾಗು ಬೇತೂರು ಗ್ರಾಮಗಳಲ್ಲಿ ಒಟ್ಟು 6 ಎಕರೆ 14 ಗುಂಟೆ ಕೃಷಿ ಭೂಮಿ ಹೊಂದಿದ್ದು, ಅವರ ಹೆಸರಿನಲ್ಲಿ 8.35 ಲಕ್ಷ ರೂ. ನಗದು ಹಣವಿದೆ. ಅಲ್ಲದೆ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಹಣ ಹಾಗೂ 14.45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿವೆ.

 

ಆಸ್ತಿಯ ಜೊತೆಗೆ ಸಮರ್ಥ್ ಅವರ ಹೆಸರಿನಲ್ಲಿ ಒಟ್ಟು 3.52 ಕೋಟಿ ರೂ. ಮೊತ್ತದ ಸಾಲ ಹಾಗೂ ಹೊಣೆಗಾರಿಕೆಗಳಿವೆ. 2024-25ನೇ ಸಾಲಿನ ಆದಾಯ ತೆರಿಗೆ ಮರುಪಾವತಿಯಲ್ಲಿ ಅವರು 96.05 ಲಕ್ಷ ರೂ. ವಾರ್ಷಿಕ ಆದಾಯವನ್ನು ತೋರಿಸಲಾಗಿದೆ. ಸಮರ್ಥ್ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

 

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ಟಿ.ದಾಸಕರಿಯಪ್ಪ ಅವರು, 5.76 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಶ್ರೀನಿವಾಸ್‌ ಹೆಸರಿನಲ್ಲಿ 34.79 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 5.41 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಿವೆ.

 

ಸ್ಥಿರಾಸ್ತಿಯಲ್ಲಿ 1.13 ಕೋಟಿ ರೂ. ಬೆಲೆಬಾಳುವ ಪಿತ್ರಾರ್ಜಿತ ಕೃಷಿ ಭೂಮಿ ಹಾಗೂ 4.27 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿಗಳು ಸೇರಿವೆ. 3.60 ಲಕ್ಷ ರೂ. ನಗದು ಇರುವುದಾಗಿ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

 

45 ವರ್ಷದ ಶ್ರೀನಿವಾಸ್‌ ಕೃಷಿ ಮತ್ತು ವ್ಯವಹಾರವನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ತುಂಬಿಗೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2.96 ಲಕ್ಷ ರೂ. ಸಾಲ ಬಾಕಿ ಇದೆ. ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.

Follow on Facebook Follow on Instagram
Share. Facebook Twitter WhatsApp Telegram
Previous Articleತಾಲ್ಲೂಕು ಅಧಿಕಾರಿ ಆತ್ಮಹತ್ಯೆ: ಪ್ರಕರಣ ದಾಖಲು
Next Article ರಂಜಾನ್‌ ನಮಾಜ್ ವೇಳೆ ಹೆಜ್ಜೇನು ದಾಳಿ; ಐವರ ಸ್ಥಿತಿ ಗಂಭೀರ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ದಾವಣಗೆರೆ ದಕ್ಷಿಣದಲ್ಲಿ ‘ಶಿವ’ ನಡೆ ; ಯಾರಿಗೆ ಪ್ಲಸ್ ಯಾರಿಗೆ ಮೈನಸ್

March 23, 2026

ಸಮರ್ಥ್ ಗೆ ಸಾದಿಕ್ ಪೈಲ್ವಾನ್ ಸವಾಲ್ ; ಅಖಾಡಕ್ಕೆ ಇಳಿಯೋದು ಖಚಿತ

March 22, 2026

ಬರಿಗಾಲಲ್ಲಿ ಶಾಮನೂರು ಮೊಮ್ಮಗ ಸುತ್ತಾಟ; ಎಲ್ಲ ದುಗ್ಗಮ್ಮ ದೇವಿ ಕೃಪೆ

March 22, 2026
Add A Comment
Leave A Reply Cancel Reply

Advertisement
Latest Posts

ಐಪಿಎಲ್ ಆರಂಭದ ಹೊಸ್ತಿಲಲ್ಲೇ ಬದಲಾಯ್ತು ನಿಯಮ

ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಗೆ ಮಾತೃ ವಿಯೋಗ

200 ಕೋಟಿ ರೂ. ಬಂಗಲೆ ಮಾಹಿತಿ ಮರೆಮಾಚಿದ ಆರೋಪ:

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ; ಹೈಕೋರ್ಟ್ ತರಾಟೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.