ರಾಜ್ಯದಲ್ಲಿ ಒಳಮೀಸಲಾತಿ ಹೋರಾಟಕ್ಕೆ ದೀರ್ಘ ಕಾಲದ ಇತಿಹಾಸ ಇದೆ. ಸಾವಿರಾರು ಮಂದಿ ಹೋರಾಟಗಾರರು ಇದಕ್ಕಾಗಿಯೇ ಬದುಕನ್ನುತ್ಯಾಗ ಮಾಡಿದ್ದಾರೆ. ಆಗಸ್ಟ್ ಅಂತ್ಯದೊಳಗೆ ಒಳಮೀಸಲಾತಿ ಜಾರಿಗೊಳ್ಳುವುದು ಖಚಿತವಾಗಿದೆ. ಆದರೆ ಇದರ ಲಾಭವನ್ನುಪಡೆಯಲು ನಕಲಿ ಹೋರಾಟಗಾರರು ರಾಜ್ಯದಲ್ಲಿ ಹುಟ್ಟಿಕೊಂಡಿದ್ದಾರೆ, ಇವರ ಬಗ್ಗೆ ನಮ್ಮ ಸಮುದಾಯದವರು ತೆಲೆಕೆಡಿಸಿಕೊಳ್ಳಬಾರದೆಂದು ಲಿಡ್ಕರ್‍ನ ಮಾಜಿ ಆಧ್ಯಕ್ಷರಾದ ಓ.ಶಂಕರ್ ಹೇಳಿದರು.ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಜಾರಿಗಾಗಿ ಅನೇಕ
ರಾಜಕಾರಣಿಗಳು, ಜನಪ್ರತಿನಿಧಿಗಳು ಬೆಂಬಲವಾಗಿ ನಿಂತಿದ್ದಾರೆ. ಒಟ್ಟಾರೆ ಇವರೆಲ್ಲರ ತ್ಯಾಗ, ಬದ್ಧತೆ ಕಾರಣಕ್ಕೆ ರಾಜ್ಯದಲ್ಲಿ
ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ. ಒಳಮೀಸಲಾತಿ ಜಾರಿ ಹೋರಾಟಕ್ಕೆ ಬದುಕನ್ನು ಅರ್ಪಿಸಿಕೊಂಡಿದ್ದ ಬಹಳಷ್ಟುಮಂದಿ ಗಂಭೀರತೆಯಿಂದ ಸರ್ಕಾರದ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ.ಅದರಲ್ಲೂ ಮಾಜಿ ಸಚಿವರಾದ ಹೆಚ್.ಆಂಜನೇಯರವರು ಸೇರಿ ಅನೇಕ ರಾಜಕಾರಣಿಗಳು ಒಳಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ ನ್ಯಾ ನಾಗಮೋಹನ್ ದಾಸ್
ಆಯೋಗ ಕೈಗೊಂಡ ಜಾತಿಗಣತಿ ಸಮೀಕ್ಷೆ ಕಾರ್ಯದಲ್ಲಿ ಸಮುದಾಯದವರು ಪಾಲ್ಗೊಳ್ಳುವಂತೆ ರಾಜ್ಯಾದ್ಯಂತ ಜಾಗೃತಿ
ಕಾರ್ಯಕ್ರಮ, ಸಭೆ, ಸಿಎಂ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ
ಎಂದರು.
ಒಳಮೀಸಲಾತಿ ಜಾರಿಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದ್ದಂತೆ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಸಿದ್ದರಾಮಯ್ಯರವರು ಒಳಮೀಸಲಾತಿ ಜಾರಿಗೆ ಆಯೋಗನ್ನು ರಚಿಸಿ.. ಆಯೋಗ ವರದಿ ನೀಡುತ್ತಿದ್ದಂತೆಯೇ ಜಾರಿಗೆ ತಂದೇತರುತ್ತೇನೆಂದು ಘೋಷಿಸಿದ್ದಾರೆ.ಈ ಘೋಷಣೆ ಆಗುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಕೆಲವೇ ಜನ ಮೀಸಲಾತಿಗೆ ಸಂಬಂಧಪಟ್ಟಂತೆವಿವಿಧ ರೀತಿಯ ಹೋರಾಟಗಳನ್ನು ನಡೆಸುತ್ತಿದ್ದಾರೆ, ಇದರಲ್ಲಿ ನೆಲಮಂಗಲದ ಭಾಸ್ಕರ್ ಪ್ರಸಾದ್ ಎಂಬುವವರುಯಾವಾಗಿನಿಂದಲೂ ಸಹಾ ಈ ಹೋರಾಟದ ಬಗ್ಗೆ ಯಾವುದನ್ನು ಮಾಡದ ಅವರು ಈಗ ಮೀಸಲಾತಿಯ ಬಗ್ಗೆ ಪಾದಯಾತ್ರೆ..ರಥಯಾತ್ರೆ ಹೋದ ಸ್ಥಳಗಳಲ್ಲೆಲ್ಲಾ ಭಾಸ್ಕರ್ ಪೋನ್ ಪೇ, ಪೋನ್ ಪೇ, ಗೂಗಲ್ ಪೇ ಗೂಗಲ್ ಪೇ ಹಣ ಕೊಡಿ.. ಹಣ ಕೊಡಿ ಎಂದುಮುಗ್ಧ ಮಾದಿಗ ಸಮುದಾಯದ ನೌಕರರು ಮತ್ತು ಜನರಿಂದ ಹೇರಳವಾಗಿ ಹಣ ಸಂಗ್ರಹ ಮಾಡಿದ ಈ ರೋಲ್ ಕಾಲ್ ಭಾಸ್ಕರ್‍ನಅಕೌಂಟ್‍ಗೆ ಎಷ್ಟು ಹಣ ಹೋಗಿದೆ ಎಂದು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ನಾವೆಲ್ಲರೂ ಆತನನ್ನು ನಿರ್ಲಕ್ಷಿಸಿದ್ದೇವೆ. ಅವನಿಗೆ ತಲೆ ಸರಿ ಇಲ್ಲ. ಆದ್ದರಿಂದ ಹೀಗೆ ಮಾಡುತ್ತಾನೆಂದು ಮೌನ ವಹಿಸಿದ್ದೆವು. ಆದರೆಇತ್ತೀಚೆಗೆ ನಮ್ಮ ಸಮುದಾಯದ ಹಿತಕ್ಕಾಗಿ ಶ್ರಮಿಸುವ ನಮ್ಮ ಮಾದಿಗ ಸಮುದಾಯದ ಸಚಿವರುಗಳಾದ ಕೆ.ಎಚ್ ಮುನಿಯಪ್ಪ.ಆರ್.ಬಿ ತಿಮ್ಮಾಪುರ್ ಹಾಗೂ ಮಾಜಿ ಸಚಿವರಾದ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ಹೀಗೆಅನೇಕರ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಶಬ್ದಗಳಿಂದ ನಿಂದಿಸುತ್ತಿರುತ್ತಾನೆ. ಇಷ್ಟೆ ಅಲ್ಲದೆ ಸಮಾಜಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪರವರನ್ನು ಕೂಡ ಅವಮಾನಕಾರಿಯಾಗಿ ಟೀಕಿಸಿರುವುದನ್ನು ನಾವು ಖಂಡಿಸುತ್ತೇವೆ
ಎಂದರು.
ಈತನ ವಿರುದ್ಧ ಚಿತ್ರದುರ್ಗ ಸೇರಿ ರಾಜ್ಯಾದ್ಯಂತ ಸಮುದಾಯದವರು ದೂರು ದಾಖಲಿಸಲಿದ್ದಾರೆ. ಮಾದಿಗ ಸಮುದಾಯವರುಈತನನ್ನು ನಂಬುತ್ತಿಲ್ಲ. ಜೊತೆಗೆ ಅನೇಕ ಸಂಘಟನೆಗಳು ಈತನನ್ನು ದೂರ ಇಟ್ಟಿವೆ. ಪೊಲೀಸರು ಈತನು ಎಲ್ಲಿಯಾದರೂ ಕಂಡತಕ್ಷಣ ಆತನನ್ನು ಹಿಡಿದುಕೊಂಡು ಮಾನಸಿಕ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಜನರ ಹಿತದೃಷ್ಟಿಯಿಂದ ಒಳ್ಳೆಯದು.ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ.ನ್ಯಾ. ನಾಗಮೋಹನ್ ದಾಸ್ ಆಯೋಗ ಶೀಘ್ರದಲ್ಲಿಯೇ ವರದಿ ಸಲ್ಲಿಸಲಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನು ತಕ್ಷಣ ಸ್ವೀಕರಿಸಿ ಆಗಸ್ಟ್ ಅಂತ್ಯದೊಳಗೆಜಾರಿಗೊಳಿಸಲಿದೆ.ಈ ಸತ್ಯ ಅರಿತಿರುವ ಇವನು.ನನ್ನಿಂದಲೇ ಒಳಮೀಸಲಾತಿ ಜಾರಿ ಗೊಂಡಿತು ಎಂದು ನಂಬಿಸಲು ಅನಗತ್ಯವಾಗಿಹಾರಾಟ ನಡೆಸುತ್ತಿದ್ದಾನೆ ಎಂದು ತಿಳಿಸಿದರು.
ಒಳಮೀಸಲಾತಿ ಜಾರಿ ವಿಷಯದಲ್ಲಿ ಯಾವುದೇ ರೀತಿ ನಕಲಿ ಹೋರಾಟಗಾರರು ಲಾಭಗಳಿಸಲು ನಾವೆಲ್ಲರೂ ಬಿಡುವುದಿಲ್ಲ.30ವರ್ಷಗಳಿಂದ ಹೋರಾಟ ನಡೆಸಿದ ದ.ಸಂ.ಸ ಸೇರಿ ನಮ್ಮ ಸಮುದಾಯದ ಸಂಘಟನೆಗಳು.. ಹೋರಾಟಗಾರರಿಗೆ ಗೌರವಸಲ್ಲಬೇಕು.ಒಳಮೀಸಲಾತಿ ಜಾರಿಗೆ ತರುವ ಸುವರ್ಣಾವಕಾಶ ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿಸಿದ್ದರಾಮಯ್ಯರವರಿಗೆ ಒಲಿದಿರುವುದು ಅವರ ಭಾಗ್ಯ.., ಒಳ ಮೀಸಲಾತಿ ಪಡೆಯುತ್ತಿರುವುದು ನಮ್ಮ ಭಾಗ್ಯ. ಭಾಸ್ಕರ್ ಪ್ರಸಾದ್ಇವನು ಪೇಸ್‍ಬುಕ್ ಮತ್ತು ವಾಟ್ಸಪ್‍ನಲ್ಲಿ ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೋ ಕ್ಲಿಪ್ಗಳನ್ನೆಲ್ಲಾ ಪೊಲೀಸ್ ಇಲಾಖೆಯವರಿಗೆ ತಲುಪಿಸಿದ್ದೇವೆ.ಮತ್ತು ಭಾಸ್ಕರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿ.ಪಂ.ಮಾಜಿ ಸದಸ್ಯ ನರಸಿಂಹರಾಜು, ನ್ಯಾಯಾವಾದಿಗಳಾದ ಶರಣಪ್ಪ, ರವೀಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ, ಅನಿಲ್ ಕೋಟೆ ಸೇರಿದಂತೆ ಇತರರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



