ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಇತಿಹಾಸವುಳ್ಳ ಮದಕರಿ ವ್ಯಾಯಾಮ ಶಾಲೆಯ ಸ್ಥಳದಲ್ಲಿ ಅಂಗನವಾಡಿ ಕಟ್ಟುತ್ತಿದ್ದು ಅದನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಮದಕರಿ ವ್ಯಾಯಾಮ ಶಾಲೆ ವತಿಯಿಂದ ಪ್ರತಿಭಟನೆ
ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.ಮದಕರಿ ವ್ಯಾಯಾಮ ಶಾಲೆ ಕರ್ನಾಟಕದಲ್ಲಿ ಒಂದು ಅಪರೂಪದ ವ್ಯಾಯಾಮ ಶಾಲೆ ಕರ್ನಾಟಕದ ಅತ್ಯಂತ 50 ರಿಂದ 100 ವರ್ಷ ಹಳೆಯದಾದ ವ್ಯಾಯಾಮ ಶಾಲೆಯಾಗಿದೆ.ಇದು ಒಂದು ಧಾರವಾಡದ ಪ್ರತಿಷ್ಠಿತ ಮಲ್ಲಸಜ್ಜನ ವ್ಯಾಯಾಮ ಶಾಲೆ. ದಾವಣಗೆರೆಯ
ಬೀರೇಶ್ವರ ವ್ಯಾಯಮ ಶಾಲೆ. ಮಂಗಳೂರಿನ ಬಾಲಾಂಜನೇಯ ಶಾಲೆ. ಶಿವಮೊಗ್ಗದ ಪುಲಕೇಶಿ ವ್ಯಾಯಾಮ ಶಾಲೆ ಹಾಗೂ ಬೆಂಗಳೂರಿನಕೆ ಜಿ ಎಸ್ ಕ್ಲಬ್ ಸೇರಿದಂತೆ ಚಿತ್ರದುರ್ಗದಲ್ಲಿ ಇದಾಗಿದೆ. 1942ರಿಂದ ಸರ್ಕಾರಿ ಶಿಕ್ಷಣ ಇಲಾಖೆಯ ಸ್ಥಳದಲ್ಲಿ ವ್ಯಾಯಾಮಕಟ್ಟಡವಿದ್ದು, ಕಟ್ಟಡಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಖಾತೆ ಮತ್ತು ವಿದ್ಯುತ್ ಸಂಪರ್ಕ ಇದ್ದು, ಅದನ್ನು ಪಟ್ಟಾಭದ್ರಾ ಹಿತಾಸಕ್ತಿಗಳುವೈಯಕ್ತಿಕವಾಗಿ ಟ್ರಸ್ಟ್ ಮೂಲಕ ಕಟ್ಟಲು ಹೋದಾಗ ನಾವೆಲ್ಲ ತಡೆಯಾಜ್ಞೆಯನ್ನು ತಂದಿದ್ದೇವು. ಮತ್ತೆ ವ್ಯಾಯಾಮ ಶಾಲೆಪ್ರಾರಂಭದ ಬಗ್ಗೆ ನೆನೆಗುದಿಗೆ ಬಿದ್ದಾಗ ಈಗೀನ ಶಾಸಕರು ನೇತೃತ್ವದಲ್ಲಿ ವ್ಯಾಯಾಮ ಶಾಲೆಯನ್ನು ಪುನರಾಂಭಿಸಲುಪ್ರಾರಂಭಿಸಿದ್ದೆವು. ಇದರ ಮಧ್ಯದಲ್ಲಿ ಸಿ.ಡಿ.ಪಿ.ಒ ಕಡೆಯಿಂದ ಅಂಗನವಾಡಿಗೆ ಕಟ್ಟಡ ನಿರ್ಮಾಣ ಕಾಮಗಾರಿಯು ನಡೆಯಲುಮುಂದಾಗಿದ್ದು, ತಕ್ಷಣ ನೂರಾರು ವ್ಯಾಯಾಮ ಶಾಲೆ ಸದಸ್ಯರು ಈ ಒಂದು ಮನವಿಯನ್ನು ಸಲ್ಲಿಸುತ್ತಿದ್ದೇವೆ. ದಯಮಾಡಿ ತಾವುಗಳುಇತಿಹಾಸ ಪ್ರಸಿದ್ದ ಕೋಟೆನಾಡು ಚಿತ್ರದುರ್ಗದಲ್ಲಿ ಅನೇಕ ರಾಷ್ಟ್ರಮಟ್ಟ, ಅಂತರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಹುಟ್ಟು ಹಾಕಿದಮದಕರಿ ವ್ಯಾಯಾಮ ಶಾಲೆಯನ್ನು ಪುರುಜ್ಜಿವನಗೊಳಿಸಲು ತಾವುಗಳು ಸಹಕರಿಸಿ ಇಲ್ಲಿ ಅಂಗನವಾಡಿ ಕೇಂದ್ರವನ್ನುಸ್ಥಾಪಿಸುವುತ್ತಿರುವ ಕಟ್ಟಡದ ಕಾಮಗಾರಿಯನ್ನು ತಡೆಯಬೇಕೆಂದು ಮನವಿ ಮಾಡಿದರು.ಪ್ತಿಭಟನೆಯಲ್ಲಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಎನ್ ಡಿ ಕುಮಾರ್. ರಾಷ್ಟ್ರಮಟ್ಟದ ಬಾಡಿ ಬಿಲ್ಡರ್ಗಳಾದ ಅಣ್ಣಪ್ಪ ದಿಲೀಪ್ , ರುದ್ರೇಶ್. ಜಿತೇಂದ್ರ ಬಸವರಾಜ್ ಗುರುರಾಜ್ ಸೈ ಸೈಫುಲ್ಲ ಸೈಯದ್ ಚೋಟುವಾಸಿಮ. ನಾಗರಾಜ್. ಸಮಿವುಲ್ಲಾ ಇದ್ದರೂ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



