ಆ್ಯಂಕರ್ ಅನುಶ್ರೀ ಅವರು ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಇಂದು (ಆಗಸ್ಟ್ 28) ವಿವಾಹ ಆಗುತ್ತಿದ್ದಾರೆ. ಇನ್ನು ಕೆಲವೇಸಮಯದಲ್ಲಿಈಮದುವೆಅದ್ದೂರಿಯಾಗಿನೆರವೇರಲಿದೆ.ಇವರಮದುವೆನೋಡಲುಫ್ಯಾನ್ಸ್ಕೂಡಆಗಮಿಸಿದ್ದರು.ಅನುಶ್ರೀ ಅವರ ವಿವಾಹ ಬೆಂಗಳೂರಿನ ಹೊರ ವಲಯದಲ್ಲಿ ಇರುವ ಕಗ್ಗಲಿಪುರದ ರೆಸಾರ್ಟ್ ಒಂದರಲ್ಲಿ ನಡೆಯುತ್ತಿದೆ. ಈ ವಿಚಾರ ತಿಳಿದ ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಆದರೆ, ಅಭಿಮಾನಿಗಳಿಗೆ ಒಳಗೆ ಎಂಟ್ರಿ ನೀಡಲಾಗುತ್ತಿಲ್ಲ.ಅನುಶ್ರೀ ವಿವಾಹಕ್ಕೆ ಆಮಂತ್ರಣ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹೀಗಾಗಿ, ಅಭಿಮಾನಿಗಳನ್ನು ಆರಂಭದಲ್ಲೇ ತಡೆದು ಕಳುಹಿಸಲಾಗುತ್ತಿದೆ. ಇದರಿಂದ ಫ್ಯಾನ್ಸ್ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಅವರು ಅಸಮಾಧಾನ ಹೊರಹಾಕುತ್ತಿದ್ದಾರೆ.ಅನುಶ್ರೀ ಹೆಸರು ಮಾಡೋಕೆ ಫ್ಯಾನ್ಸ್ ಕಾರಣ. ಇವತ್ತು ನಮನ್ನೆ ಮದುವೆ ಮನೆಗೆ ಬಿಟ್ಟಿಲ್ಲ’ ಎಂದು ಫ್ಯಾನ್ಸ್ ಬೇಸರ ಮಾಡಿಕೊಂಡು ಹೊರ ಹೋಗುತ್ತಿದ್ದಾರೆ.ಅನುಶ್ರೀ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅಭಿಮಾನಿಗಳನ್ನೂ ಒಳಗೆ ಬಿಟ್ಟರೆ ನೂಕು ನುಗ್ಗಲು ಆಗಿವ ಸಾಧ್ಯತೆ ಇರುತ್ತದೆ. ಹೀಗಾಗಿ, ಅನುಶ್ರೀ-ರೋಷನ್ ಆಮಂತ್ರಣ ಇರುವವರಿಗೆ ಮಾತ್ರ ಒಳಗೆ ಬಿಡಲು ಸೂಚನೆ ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







