Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಅಗ್ನಿಬನ್ನಿರಾಯ ಜಯಂತಿ; ಲಾಲ್‍ಬಾಗ್ ನಿರ್ಮಾಣದಲ್ಲಿ ತಿಗಳ ಸಮುದಾಯದ ಪಾತ್ರ ಅನನ್ಯ 
ಚಿತ್ರದುರ್ಗ

ಅಗ್ನಿಬನ್ನಿರಾಯ ಜಯಂತಿ; ಲಾಲ್‍ಬಾಗ್ ನಿರ್ಮಾಣದಲ್ಲಿ ತಿಗಳ ಸಮುದಾಯದ ಪಾತ್ರ ಅನನ್ಯ 

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 28, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಅಗ್ನಿಬನ್ನಿರಾಯ ಜಯಂತಿ; ಲಾಲ್‍ಬಾಗ್ ನಿರ್ಮಾಣದಲ್ಲಿ ತಿಗಳ ಸಮುದಾಯದ ಪಾತ್ರ ಅನನ್ಯ

ಟಿಒಬಿ ನ್ಯೂಸ್ ಚಿತ್ರದುರ್ಗ

ವಿಶ್ವವಿಖ್ಯಾತ ಬೆಂಗಳೂರಿನ ಲಾಲ್‍ಬಾಗ್ ಉದ್ಯಾನವನವನ್ನು ಸಸ್ಯಕಾಶಿಯಾಗಿ ರೂಪಿಸುವಲ್ಲಿ ಹಾಗೂ ಐತಿಹಾಸಿಕ ಕರಗ ಉತ್ಸವವನ್ನು ಉಳಿಸಿ ಬೆಳೆಸುವಲ್ಲಿ ತಿಗಳ ಸಮುದಾಯದ ಕೊಡುಗೆ ಅನನ್ಯವಾಗಿದೆ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಕನ್ನಡ ಉಪನ್ಯಾಸಕ ಡಾ.ಜಿ.ಎನ್.ಯಶೋಧರ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಗ್ನಿಬನ್ನಿರಾಯ ಜಯಂತಿಯಲ್ಲಿ ಉಪನ್ಯಾಸ ನೀಡಿದರು.

ಅಗ್ನಿ ಪುರಾಣದ ಪ್ರಕಾರ, ಶಂಭು ಮಹರ್ಷಿಗಳು ನಡೆಸಿದ ಯಜ್ಞ ಕುಂಡದಿಂದ ಶಿವನ ಮೂರನೇ ಕಣ್ಣಿನ ಹನಿಯ ಮೂಲಕ ಜನ್ಮತಾಳಿದ ಅಗ್ನಿಬನ್ನಿರಾಯ ಈ ಸಮುದಾಯದ ಮೂಲ ಪುರುಷ. ತಮಿಳುನಾಡಿನ ಚೋಳರ ಕಾಲದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಈ ಜನಾಂಗಕ್ಕೆ ತಿಗಳ ಎಂಬ ಹೆಸರು ಬರಲು ಅಗ್ನಿ (ತಿ) ಮತ್ತು ಸಮೂಹ (ಗಳ) ಎಂಬ ಅರ್ಥವಿದೆ. ಚಂದ್ರನನ್ನು ತಿಂಗಳು ಎನ್ನುವಂತೆ ಇವರನ್ನು ತಿಂಗಳರು ಎಂದು ಕರೆಯಲಾಗುತ್ತಿತ್ತು, ಅದು ಕಾಲಕ್ರಮೇಣ ತಿಗಳ ಎಂದಾಗಿದೆ ಎಂದು ತಿಳಿಸಿದರು.

18ನೇ ಶತಮಾನದಲ್ಲಿ ಹೈದರ್ ಅಲಿ ಆರ್ಕಾಟ್ ಪ್ರಾಂತ್ಯ ಗೆದ್ದಾಗ, ಅಲ್ಲಿನ ತಿಗಳ ಸಮುದಾಯದವರ ಕೃಷಿ ಮತ್ತು ತೋಟಗಾರಿಕಾ ನೈಪುಣ್ಯತೆ ಕಂಡು ಬೆರಗಾಗಿ ಅವರನ್ನು ಮೈಸೂರಿಗೆ ಕರೆತಂದನು. ಇಂದು ನಾವು ಕಾಣುವ 60 ಎಕರೆ ವಿಸ್ತೀರ್ಣದ ಲಾಲ್‍ಬಾಗ್ ಸಸ್ಯಕಾಶಿಯನ್ನು ನಿರ್ಮಿಸಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕಳೆದ ಐದು ಶತಮಾನಗಳಿಂದ ನಡೆಯುತ್ತಿರುವ ಐತಿಹಾಸಿಕ ಕರಗ ಉತ್ಸವವು ತಿಗಳ ಸಮುದಾಯದ ಸಾಂಸ್ಕೃತಿಕ ಅಸ್ಮಿತೆಯಾಗಿದೆ ಎಂದು ಹೇಳಿದರು.

ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಹಾಗೂ ಸರ್ಕಾರದ ವತಿಯಿಂದ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿರುವುದು ಶ್ಲಾಘನೀಯ ಎಂದು ಡಾ.ಜಿ.ಎನ್.ಯಶೋಧರ ಹೇಳಿದರು.

ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮೀ, ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ಎಂ.ಉಷಾರಾಣಿ ಸೇರಿದಂತೆ ಮತ್ತಿತರರು ಇದ್ದರು. ಹೊಸದುರ್ಗದ ಶಬೀನಾಬಾನು ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

Follow on Facebook Follow on Instagram
Share. Facebook Twitter WhatsApp Telegram
Previous Articleಕುಸಿತವಾಗುತ್ತಿದೆ ಹೆಣ್ಣು ಮಕ್ಕಳ ಸಂಖ್ಯೆ; ಗಡಿ ಭಾಗದ ಮೇಲೆ ನಿಗಾ
Next Article ನಿತ್ಯ ಭವಿಷ್ಯ – 29/03/2026 (ಭಾನುವಾರ)
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

March 29, 2026

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

March 29, 2026

ಜಾತಿಗಿಂತ ಪ್ರೀತಿ ದೊಡ್ಡದು; ಕುಂಚಿಟಿಗ ಮಠದಲ್ಲಿ ಜಾತ್ಯತೀತ ವಿವಾಹ ಕ್ರಾಂತಿ

March 29, 2026
Add A Comment
Leave A Reply Cancel Reply

Advertisement
Latest Posts

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.