ಸಣ್ಣ ವಯಸ್ಸಿನ ಯುವಕರು ಹೃದ್ರೋಗದ ಅಪಾಯಗಳಿಗೆ ತುತ್ತಾಗುತ್ತಿರುವುದು ಆಘಾತಕಾರಿ ಸಂಗತಿಯೇ ಸರಿ. ದೇಹದ ಪ್ರಮುಖ ಭಾಗಗಳಲ್ಲಿ ನಮ್ಮ ಹೃದಯವು ಒಂದಾಗಿದೆ. ಹೃದಯದ ಆರೋಗ್ಯದ ಬಗ್ಗೆ ವಿಶೇಷವಾಗಿ ನಾವು ಕಾಳಜಿ ವಹಿಸಬೇಕು. ಇತ್ತೀಚಿನ ಅನಾರೋಗ್ಯಕರ ಜೀವನಶೈಲಿಯು ಕೂಡ ಹೃದಯದ ಸಮಸ್ಯೆಗಳಿಗೆ ಕಾರಣವಾಗಿದೆ.
ಧೂಮಪಾನ, ಮದ್ಯಪಾನ, ಅಪೌಷ್ಟಿಕ ಆಹಾರ, ಕೊಬ್ಬಿನಿಂದ ಕೂಡಿದ ತಿನಿಸುಗಳು, ದೈಹಿಕ ದಂಡನೆಯ ಕೊರತೆ, ಒತ್ತಡ ಇವೆಲ್ಲವೂ ಹೃದಯಕ್ಕೆ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಕೆಲವು ಸೂಪರ್ ಫುಡ್‌ಗಳನ್ನು ನೀವು ಸೇವಿಸಬೇಕು. ಇಲ್ಲಿವೆ ಆ ಪೌಷ್ಟಿಕ ಆಹಾರಗಳ.
ಹೃದಯದ ಆರೋಗ್ಯ ಏಕೆ ಕಾಪಾಡಬೇಕು ಗೊತ್ತಾ..?
ಹೃದಯವು ದೇಹದಾದ್ಯಂತ ಆಮ್ಲಜನಕಯುಕ್ತ ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡುತ್ತದೆ. ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟಲು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡುವ ಸಾಮರ್ಥ್ಯವಿರುವ ಬಲವಾದ ಹೃದಯ ಸ್ನಾಯುಗಳನ್ನು ಹೊಂದಿದೆ. ಸೂಕ್ತವಾದ ರಕ್ತದ ಹರಿವನ್ನು ಉತ್ತೇಜಿಸುವುದಲ್ಲದೆ, ಸಾಮಾನ್ಯ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಸಾಮಾನ್ಯ ವ್ಯಾಪ್ತಿಯಲ್ಲಿ ನಿರ್ವಹಿಸುತ್ತದೆ.
ಇಂತಹ ದೇಹದ ಪ್ರಧಾನ ಅಂಗಕ್ಕೆ ಪೂರಕವಾಗಿರುವ ಆಹಾರಗಳು ಯಾವುವು ಗೊತ್ತಾ?
ಮೀನು
ಮೀನುಗಳು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೌದು, ಕೆಂಪು ಮಾಂಸ ಸೇವನೆ ಮಾಡುವ ಬದಲಿಗೆ ಮೀನುಗಳನ್ನು ತಿನ್ನಬಹುದು. ನಿಮ್ಮ ಆಹಾರ ಯೋಜನೆಯಲ್ಲಿ ಕೊಬ್ಬಿನ ಮೀನುಗಳನ್ನು ಸೇರಿಸಬೇಕು.
ಉದಾಹರಣೆಗೆ ಸಾಲ್ಮನ್, ಮ್ಯಾಕೆರೆಲ್, ಸಾರ್ಡೀನ್‌ಗಳು. ಇವುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮೀನುಗಳನ್ನು ಆಗಾಗ್ಗೆ ನಿಮ್ಮ ಆಹಾರದಲ್ಲಿ ಸೇರಿಸಿ.
ಹಸಿರು ತರಕಾರಿಗಳು
ಹಸಿರು ತರಕಾರಿ ಮತ್ತು ಸೊಪ್ಪು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಮುಖ್ಯವಾಗಿ ಪಾಲಕ್, ಎಲೆಕೋಸುಗಳಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಇಂತಹ ಆರೋಗ್ಯಕರ ಆಹಾರಗಳು ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಹೃದಯರಕ್ತನಾಳದ ಕಾರ್ಯವನ್ನು ಸುಧಾರಿಸುವ ಮೂಲಕ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.
*ಡ್ರೈ ಫ್ರೂಟ್ಸ್*
ಒಣಹಣ್ಣುಗಳು ಅಥವಾ ಡ್ರೈ ಫ್ರೂಟ್ಸ್ ತನ್ನ ಅನೇಕ ಆರೋಗ್ಯ ಕೊಡುಗೆಗಳಿಂದ ಜನಪ್ರಿಯವಾಗಿದೆ. ಇವುಗಳನ್ನು ಮಿತವಾಗಿ ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ಹೃದಯವನ್ನು ಕಾಪಾಡಬಹುದು. ಇವುಗಳಲ್ಲಿ ಕೊಬ್ಬುಗಳು, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಶ್ರೀಮಂತವಾಗಿವೆ. ಇದು ಕೊಲೆಸ್ಟ್ರಲ್ ಕಡಿಮೆ ಮಾಡುವ ಮೂಲಕ ಹೃದಯದ ತೊಡಕುಗಳಿಗೆ ಚಿಕಿತ್ಸೆ ನೀಡುತ್ತದೆ.
ಧಾನ್ಯಗಳ ಸೇವನೆ
ಧಾನ್ಯಗಳ ಸೇವನೆ ಇತ್ತೀಚಿಗೆ ಕಡಿಮೆ ಎಂದೇ ಹೇಳಬಹುದು. ಓಟ್ಸ್, ಗೋಧಿ, ಬ್ರೌನ್ ರೈಸ್‌ಗಳಲ್ಲಿ ಯಥೇಚ್ಚವಾಗಿ ಫೈಬರ್ ಇದೆ. ಇಂತಹ ಆಹಾರಗಳು ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಹಾಗಾಗಿ ಪ್ರತಿನಿತ್ಯ ನಿಯಮಿತವಾಗಿ ಧಾನ್ಯಗಳಿಂದ ತಯಾರಿಸಿದ ಆಹಾರಗಳನ್ನು ಸೇವಿಸಿ.
ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣಿನ ಪ್ರಯೋಜನಗಳ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ನಿಮ್ಮ ಕಣ್ಣಿಗೆ ಬೆರ್ರಿ ಜಾತಿಗೆ ಸೇರಿದ ಸ್ಟ್ರಾಬೆರಿಗಳು, ಬೆರ್ರಿಹಣ್ಣು, ರಾಸ್‌ಬೆರ್ರಿಗಳು ಸಿಕ್ಕರೆ ಬಿಡಬೇಡಿ. ಅವುಗಳನ್ನು ಆಗಾಗ್ಗೆ ಸೇವಿಸಿ.
ಇಂತಹ ಹಣ್ಣುಗಳು ಉತ್ಕರ್ಷಣ ನಿರೋಧಕಗಳಾಗಿದ್ದು, ಫೈಬರ್‌ಗಳಿಂದ ತುಂಬಿದೆ. ಹೃದಯ ರಕ್ತನಾಳಗಳ ಆರೋಗ್ಯವನ್ನು ಕಾಪಾಡುತ್ತದೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



