ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣಾ ಹಾಗೂ ಶೇ. 40 ರಷ್ಟು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮ ಇದೇ ತಿಂಗಳು 27 ಹಾಗೂ28 ರಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಸಂಚಾಲಕರಾದ ಲವ ಬಂಗೇರ ತಿಳಿಸಿದರು.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ರಾಜ್ಯದ ವಿವಿಧೆಡೆಗಳಲ್ಲಿಶಿಬಿರಗಳನ್ನು ನಡೆಸಲಾಗಿದೆ ಚಿತ್ರದುರ್ಗದಲ್ಲಿ 37ನೇ ಶಿಬಿರವನ್ನು ಆಯೋಜಿಸಲಾಗಿದೆ. ನಮ್ಮ ಜನರು ಕಣ್ಣುಗಳಿಗೆ ಹೆಚ್ಚಿನಪ್ರಾಮುಖ್ಯತೆಯನ್ನು ನೀಡುತ್ತಾರೆ ಹೊರೆತು ಕಿವಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿಲ್ಲ, ಈ ಹಿನ್ನಲೆಯಲ್ಲಿ ಟೀಮ್ ಈಶ್ವರ್ಮಲ್ಪೆ ಇವರ ಸಹಯೋಗದಲ್ಲಿ ಕವಿಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸಿ ತಪಾಸಣೆಯನ್ನು ಮಾಡುವುದರ ಮೂಲಕ ತೊಂದರೆ.
ಇರುವವರೆಗೆ ತಪಾಸಣೆಯನ್ನು ಮಾಡಿಸಿ ಸಹಾಯಧನದಲ್ಲಿ ಯಂತ್ರಗಳನ್ನು ನೀಡಲಾಗುತ್ತದೆ ಎಂದರು.
ಇಂದಿನ ದಿನಮಾನದಲ್ಲಿ ವಯೋಸಹಜದಿಂದ ಹಾಗೂ ಚಿಕ್ಕ ಮಕ್ಕಳಿಗೂ ಸಹಾ ಕಿವಿಯ ತೊಂದರೆ ಉಂಟಾಗುತ್ತದೆ ಆದರೆ ಇದನ್ನುನಮ್ಮ ಜನತೆ ನಿರ್ಲಕ್ಷ ಮಾಡುತ್ತಾರೆ ಕಣ್ಣಿನ ತೊಂದರೆಯಾದರೆ ಬೇಗನೆ ತೋರಿಸುತ್ತಾರೆ ಎಂದು ಕಿವಿಯ ತೊಂದರೆಯಾದರೆಮಾಡಿಸುವುದಿಲ್ಲ ಎಂದ ಅವರು, ನಮ್ಮ ಸಂಸ್ಥೆಯವತಿಯಿಂದ ಈಗಾಗಲೇ ರಾಜ್ಯದ ವಿವಿಧೆಡೆಗಳಲ್ಲಿ ಶಿಬಿರವನ್ನುಮಾಡಿಸುವುದರಮೂಲಕ ಸಹಾಯಧನದಲ್ಲಿ ಯಂತ್ರಗಳನ್ನು ನೀಡಲಾಗುತ್ತದೆ. ಇದು ಬೇರೆ ತಪಾಸಣೆಯಂತೆ ಸ್ವಲ್ಪ ಸಮಯದಲ್ಲಿ ಆಗುವುದಿಲ್ಲ ಒಬ್ಬವ್ಯಕ್ತಿಯನ್ನು ತಪಾಸಣೆ ಮಾಡಲು ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ ಎಂದು ತಿಳಿಸಿದರು.ಈ ಶಿಬಿರದಲ್ಲಿ ತಪಾಸಣೆಗೆ ಒಳಗಾದ ವ್ಯಕ್ತಿಗೆ ಯಂತ್ರಗಳು ಬೇಕಾದರೆ 20 ಸಾವಿರದಿಂದ 1 ಲಕ್ಷದವರೆಗೂ ಸಹಾ ಯಂತ್ರಗಳಿನಮ್ಮಲ್ಲಿ ಲಭ್ಯವಿದೆ. ಜನತೆ ತಮ್ಮ ಶಕ್ತಾನುಸಾರ ಯಂತ್ರಗಳನ್ನು ಖರೀದಿ ಮಾಡಬಹುದಾಗಿದೆ. ಎಂದ ಅವರು, ನಮ್ಮ ಟೀಮ್ಈಶ್ವರ್ ಮಲ್ಪೆಯ ಈಶ್ವರ ರವರು ನದಿ ಸೇರಿದಂತೆ ಇತರೆ ಕಡೆಗಳಲ್ಲಿ ಒಳಗಡೆ ಮುಳಗಿದ್ದ ಸಾವಿರ ಮೃತ ದೇಹ ಹಾಗೂ 70ಕ್ಕೆ ಹೆಚ್ಚುಜನರ ಪ್ರಾಣವನ್ನು ಉಳಿಸಿದ್ದಾರೆ.
ಇದರೊಂದಿಗೆ 4 ಅಂಬುಲೆನ್ಸ್, 5 ಆಟೋ ರಿಕ್ಷಾ, ಹಾಗೂ ಸುಸಜ್ಜಿತವಾದ ಐಸಿಯನ್ನು ಹೊಂದಿದಅಂಬುಲೆನ್ಸ್ ಸಹಾ ಜನರ ಉಪಯೋಗಕ್ಕೆ ನೀಡಲಾಗಿದೆ ಎಂದರು.ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ ಮಾತನಾಡಿ ಟೀಮ್ ಈಶ್ವರ್ ಮಲ್ಪೆ ತಂಡಚಿತ್ರದುರ್ಗದಲ್ಲಿ ಪ್ರಥಮವಾಗಿ ಶಿಬಿರವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ನಗರದ ಎಲ್ಲರು ಪ್ರಯೋಜನಪಡೆಯಬೇಕಿದೆ, ಈ ಶಿಬಿರಕ್ಕೆ ಎಲ್ಲಾ ರೀತಿಯಾದ ಸಹಕಾರವನ್ನು ನೀಡಲಾಗುವುದು, ಚಿತ್ರದುರ್ಗ ನಗರದಲ್ಲಿ ಮಾತ್ರವಲ್ಲದೆತಾಲ್ಲೂಕಿನಲ್ಲಿಯೂ ಸಹಾ ಈ ಶಿಬಿರವನ್ನು ಆಯೋಜನ ಮಾಡಲಾಗುವುದು ಎಂದು ತಿಳಿಸಿದರು.ಪತ್ರಕರ್ತರಾದ ವಿರೇಶ್, ಹಾಗೂ ಕುಮಾರಸ್ವಾಮಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



