ಶ್ರೀರಾಮುಲು ಜತೆಗೆ ನನ್ನದು 40 ವರ್ಷದ ಸ್ನೇಹ. ನಮ್ಮಿಬ್ಬರ ಸ್ನೇಹದ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಕುಟುಂಬ ಸದಸ್ಯರ ಜತೆ ತಮ್ಮ ಪುತ್ರ ಕಿರೀಟಿ ಅಭಿಯನದ ಜೂನಿಯರ್ ಸಿನಿಮಾ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವುದೋ ಒಂದು ಘಟನೆಯಿಂದ ಪ್ರೀತಿ ಅಭಿಮಾನ ಬದಲಾಗುವುದಿಲ್ಲ. ಶ್ರೀರಾಮುಲು ಜತೆ 4 ದಶಕಗಳ ಸ್ನೇಹವಿದೆ. ನಮ್ಮ ಸ್ನೇಹ ಯಾವುದೇ ಹಂತದಲ್ಲೂ ಮುಕ್ಕಾಗಿಲ್ಲ. ನಮ್ಮಿಬ್ಬರ ಜತೆಗೂಡಿ ಸಲು ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ. ಶ್ರೀರಾಮುಲು, ನಾನು ಒಟ್ಟಾಗಿ ಜೂನಿಯರ್ ಸಿನಿಮಾ ನೋಡುತ್ತೇವೆ ಎಂದರು.
ಪುತ್ರನ ಜೂನಿಯರ್ ಸಿನಿಮಾ ಸೂಪರ್ ಹಿಟ್
ಪುತ್ರನ ಅಭಿನಯದ ಜೂನಿಯರ್ಸಿನಿಮಾ ಅತ್ಯುತ್ತಮವಾಗಿದೆ. ಕಿರೀಟಿಗೆ ಬಾಲ್ಯ ದಿಂದಲೇ ಸಿನಿಮಾಸಕ್ತಿ ಇತ್ತು. ಆರೇಳು ವರ್ಷದ ಮಗುವಿದ್ದಾಗಲೇ ಪುನೀತ್ ರಾಜ್ಕುಮಾರ್ ಕಿರೀಟಿಯನ್ನು ಎತ್ತಿ ಮುದ್ದಾಡಿದ್ದರು. ಹಿರಿಯ ನಟರು ಆಶೀ ರ್ವಾದ ಮಾಡಿದ್ದಾರೆ. ನಾನು ನಟನಾಗಿಯೇ ಬದುಕಬೇಕು ಎಂದು ಕಿರೀಟಿ ನಿರ್ಧರಿಸಿದ್ದಾನೆ ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



