ಚಿತ್ರದುರ್ಗ: ಗಾಣಿಗ ಸಮಾಜಕ್ಕೆ ನಾಗರೀಕ ಸೌಲಭ್ಯ ನಿವೇಶನ ಮಂಜೂರು ಮಾಡಿಸಿ ಕೊಡುವಂತೆ ಗಾಣಿಗ ಸಮುದಾಯದ ತಾಲ್ಲೂಕುಅಧ್ಯಕ್ಷರಾದ ಎ.ಆರ್. ತಿಪೇಸ್ವಾಮಿ ಗಾಣಿಗ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಸಂಸದರಾದ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ನವೀನ್‍ರವರಿಗೆ ಮನವಿ ಮಾಡಿದರು.ಗಾಣಿಗ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯಂತ ಹಿಂದುಳಿದ ಸಮಾಜವುಹಾಗೂ ಅಲ್ಪಸಂಖ್ಯಾತ ಸಮಾಜವಾಗಿದ್ದು, ಗಾಣಿಗ ಸಮಾಜದ ಸರ್ವಾಂಗೀಣ ಏಳಿಗೆಗೆ ಮತ್ತು ಸರ್ವತೋಮುಖ ಅಭಿವೃದ್ಧಿದೃಷ್ಟಿಯಿಂದ ಆದ್ಯತೆ ನೀಡಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಬರುವ ಶಂಕರ್‍ಲಾಲ್ ಲೇಔಟ್, ಕೆಳಗೋಟೆ ಗ್ರಾಮದ ರಿ.ಸ.ನಂ;64/1, 2, 3 & amp; 4 ರ ಚಿತ್ರದುರ್ಗ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದಿತವಾಗಿ ವಸತಿ ವಿನ್ಯಾಸದಲ್ಲಿನ ನಾಗರೀಕಸೌಲಭ್ಯ ನಿವೇಶನವು ಚಿತ್ರದುರ್ಗ ನಗರಸಭೆ ವಶದಲ್ಲಿರುತ್ತದೆ. ಸದರಿ ನಾಗರೀಕ ಸೌಲಭ್ಯ ನಿವೇಶನವನ್ನಾಗಲಿ ಅಥವಾ ಚಿತ್ರದುರ್ಗನಗರದ ಆಯಕಟ್ಟಿನ ಪ್ರದೇಶದಲ್ಲಾಗಲಿ ಅಥವಾ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಯಾವುದಾದರೂ ಖಾಲಿ ನಿವೇಶನವನ್ನುಗಾಣಿಗ ಸಮಾಜಕ್ಕೆ ಮಂಜೂರು ಮಾಡಿಸಿಕೊಟ್ಟು ಗಾಣಿಗ ಸಮಾಜದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಾಯ ಮಾಡಬೇಕೆಂದು.ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜ್ಞಾನ ಮೂರ್ತಿ, ಉಪಾಧ್ಯಕ್ಷರಾದ ಶಿವಾನಂದ .ಜೆ.ಎಂ., ಸಹ ಕಾರ್ಯದರ್ಶಿ ಮುರುಗೇಶ್,ಮಂಜುನಾಥ್, ಸಂಚಾಲಕರಾದ ವಿರೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ವರದಶಂಕರ್, ಆಶೋಕ್, ನಿರ್ದೇಶಕರುಗಳಾದಬಸಣ್ಣ .ಕೆ.ಟಿ.,ವೀರೇಶ್.ಟಿ.,ನಂದೀಶ್.ಜಿ.ಟಿ,ಕಿರಣ್‍ಶಂಕರ್.ಬಿ.ಜೆ ವೀರಭದ್ರಪ್ಪ.ಎನ್.ಎಂ ಮಂಜುನಾಥ.ಎಸ್ ಮಂಜುನಾಥ್.ಟಿಪ್ರಶಾಂತ್.ಬಿ.ಆರ್. ವಿರೂಪಕ್ತ.ಜಿ.ಎನ್. ರವಿ .ಬಿ.ಎನ್. ಬಸವರಾಜು .ಎನ್.ಟಿ ಚನ್ನಬಸಪ್ಪ .ಡಿ.ವಿ ಮಂಜುನಾಥ್.ಎನ್.ಹೆಚ್.ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



