ಚಿತ್ರದುರ್ಗ: ಗಾಣಿಗ ಸಮುದಾಯಕ್ಕೆ ಸರ್ಕಾರದಿಂದ ಹಾಗೂ ನನ್ನ ವೈಯಕ್ತಿಕವಾಗಿ ಸಹಾಯ ಮತ್ತು ಸಹಕಾರವನ್ನು ಮಾಡುವುದಾಗಿಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.ಚಿತ್ರದುರ್ಗ ತಾಲೂಕು ಅಖಿಲ ಭಾರತ ಗಾಣಿಗರ ಸಂಘದ ವತಿಯಿಂದ ನಗರದ ಜಿ.ಜಿ. ಸಮುದಾಯ ಭವನದಲ್ಲಿಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಗಾಣಿಗ ಸಮಾಜ ಪುರಾತನವಾದ ಸಮಾಜವಾಗಿದೆ. ನನಗೆರಾಜಕಾರಣದಲ್ಲಿ ಚಳ್ಳಕರೆ ಹಾಗೂ ಹಿರಿಯೂರಿನಲ್ಲಿ ಸಹಾಯವನ್ನು ಮಾಡಿದೆ ನನ್ನ ಕೈಹಿಡಿದಿದೆ. ನನ್ನ ಗೆಲುವುವಿಗೆಸಹಕಾರಿಯಾಗಿದೆ. ನಿಮ್ಮ ಸಮಾಜದ ಋಣ ನನ್ನ ಮೇಲಿದೆ ನಿಮ್ಮ ಸಮುದಾಯದ ಪ್ರಗತಿಗೆ ಸರ್ಕಾರ ಹಾಗೂ ನನ್ನವೈಯಕ್ತಿಕವಾಗಿ ಸಹಾಯವನ್ನು ಮಾಡುವುದಾಗಿ ತಿಳಿಸಿದರು.
ಗಾಣಿಗ ಸಮಾಜಕ್ಕೆ ನಿವೇಶನವನ್ನು ನೀಡುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಇದರ ಬಗ್ಗೆ ಚಿತ್ರದುರ್ಗ ನಗರಸಭೆ ಹಾಗೂ
ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಜೊತೆಯಲ್ಲಿ ಮಾತನಾಡಿ, ಕಡಿಮೆ ದರದನ್ನು ನಿವೇಶನವನ್ನು ಕೂಡಿಸುವ ಕೆಲಸವನ್ನುಮಾಡುತ್ತೇನೆ, ಸರ್ಕಾರವೂ ಸಹಾ ಇಂತಹ ಸಮಾಜಗಳಿಗೆ ಶೇ.10ರ ರಿಯಾಯಿತಿ ದರದಲ್ಲಿ ನಿವೇಶನವನ್ನು ನೀಡಬೇಕೆಂದುಸೂಚನೆಯನ್ನು ನೀಡಿದೆ ಇದರಂತೆ ನಿಮ್ಮ ಸಮಾಜಕ್ಕೆ ನಿವೇಶನವನ್ನು ಕೊಡಿಸುವ ಹೊಣೆ ನನ್ನದು ಎಂದ ಸಚಿವರು ಸಮಾಜದಲ್ಲಿಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹ ಮಾಡುವುದು ಸಮಾಜದ ಕೆಲಸವಾಗಿದೆ ನಮ್ಮ ಸಮಾಜದ ಮಕ್ಕಳನ್ನು ನಾವೇ ಗುರುತಿಸಿಪ್ರೋತ್ಸಾಹ ಮಾಡದಿದ್ದರೆ ಬೇರೆಯವರು ಹೇಗೆ ಗುರುತಿಸುತ್ತಾರೆ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವುದು ಎಲ್ಲಾಸಮಾಜಗಳಲ್ಲಿಯೂ ಸಹಾ ನಡೆಯಬೇಕಿದೆ. ಗಾಣಿಗ ಸಮಾಜ ಬಸವಣ್ಣರವರ ಕಾಲದಿಂದಲೂ ಇದೆ ಚಿತ್ರದುರ್ಗದಲ್ಲಿ ನಿಮ್ಮಸಮಾಜದವರೇ ಶಾಸಕರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, ಗಾಣಿಗ ಸಮಾಜ ಭೂಮಿಯ ಮೇಲೆ ನಾಗರಿಕತೆ ಹುಟ್ಟಿದಾಗಿನಿಂದಲೂ ಇದೆ.ಕರ್ನಾಟಕ ರಾಜ್ಯದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಇದೆ. ಇವರು ಬಹು ಸಂಖ್ಯಾತರಾಗಿದ್ದಾರೆ. ಬೇರೆಯವರಿಗೆ ಉದ್ಯೋಗವನ್ನುನೀಡುವುದರ ಮೂಲಕ ಶ್ರೀಮಂತರಾಗಿದ್ದಾರೆ ಆದರೆ ಈಗ ಎಣ್ಣೆಯನ್ನು ತೆಗೆಯಲು ಯಂತ್ರಗಳು ಬಂದಾಗಿನಿಂದ ನಿಮ್ಮ ಕುಲಕಸುಬಿಗೆ ಹೊಡೆತ ಬಿದ್ದಂತೆ ಆಗಿದೆ. ಸಮಾಜದಲ್ಲಿ ಗಾಣಿಗರು ಗೌರಯುತವಾದ ಬದುಕನ್ನು ನಡೆಸುತ್ತಿದ್ದಾರೆ, ತಮ್ಮ ಜೊತೆಗೆ ಬೇರೆಸಮಾಜದವರನ್ನು ಸಹಾ ಕರೆದುಕೊಂಡು ಹೋಗುವ ಗುಣವನ್ನು ಹೊಂದಿದ್ದಾರೆ. ಇದ್ದಲ್ಲದೆ ಬೇರೆ ಸಮಾಜದವರ ಕಷ್ಟಕ್ಕೆ ಮರುಗುವಗುಣವನ್ನು ಹೊಂದಿದ್ದಾರೆ ಎಂದರು.
ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹ ಮಾಡುವುದು ಉತ್ತಮವಾದ ಕೆಲಸವಾಗಿದೆ. ಇದನ್ನು ಪ್ರತಿಯೊಂದು ಸಮಾಜವೂ ಸಹಾಮಾಡಬೇಕಿದೆ. ಇದರಿಂದ ಮಕ್ಕಳಿಗೆ ಮತ್ತಷ್ಟು ಸಾಧನೆಯನ್ನು ಮಾಡಬೇಕೆನ್ನುವ ಉತ್ಸಾಹ ಬರುತ್ತದೆ ಅಲ್ಲದೆ ಇದನ್ನು ನೋಡಿದಬೇರೆ ಮಕ್ಕಳಿಗೂ ಸಹಾ ನಾವು ಇವರಂತೆ ಆಗಬೇಕೆಂಬ ಛಲ ಮೂಡುತ್ತದೆ. ಗಾಣಿಗ ಸಮುದಾಯ ನಮ್ಮ ದೇಶಕ್ಕೆ ಉತ್ತಮವಾದಕೊಡುಗೆಯನ್ನು ನೀಡಿದೆ ನಮ್ಮನ್ನಾಳುವ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರರ ಮೋದಿಯವರು ಹಾಗೂ ಸಿದ್ದೇಶ್ವರಸ್ವಾಮೀಜಿಯವರ ಸಹಾ ಗಾಣಿಗರೇ, ದೇಶದಲ್ಲಿ ಈ ಸಮುದಾಯ ಒಂದೇ ಕುಲ ಕಸುಬನ್ನು ಹೊಂದಿದ ಸಮುದಾಯವಾಗಿದೆ. ನನ್ನಚುನಾವಣೆಯಲ್ಲಿ ಗಾಣಿಗ ಸಮುದಾಯ ಉತ್ತಮವಾದ ಸಹಕಾರವನ್ನು ನೀಡಿ ನನ್ನ ಗೆಲುವಿಗೆ ನೆರವಾಗಿದೆ. ಅವರ ಋಣ ನನ್ನಮೇಲಿದೆ ಇದನ್ನು ತೀರಿಸಲು ಈ ಸಮುದಾಯಕ್ಕೆ ಸಹಾಯವನ್ನು ಮಾಡುವ ಭರವಸೆಯನ್ನು ಸಂಸದರು ನೀಡಿದರು.ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಗಾಣಿಗ ಸಮಾಜ ಕಾಯಕ ಸಮಾಜವಾಗಿದೆ.
ಗಾಣಿಗರು ಇಲ್ಲದಿದ್ದರೆನಮ್ಮ ಮನೆ, ದೇವಾಲಯ, ಆಡುಗೆ ಮನೆಯಲ್ಲಿ ಎಣ್ಣೆ ಇಲ್ಲವಾಗಿರುತ್ತಿತ್ತು. ಈ ಸಮುದಾಯ ಕರ್ನಾಟಕ ಮಾತ್ರವಲ್ಲದೆ ಭಾರತದೇಶದಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಈಗಲೂ ಸಹಾ ಹಲವಾರು ಜನತೆ ಗಾಣವನ್ನು ಇಟ್ಟುಕೊಂಡು ತಮ್ಮ ಮೂಲಕಸುಬನ್ನು ಮುಂದುವರೆಸಿದ್ದಾರೆ. ಆದರೆ ಯಂತ್ರಗಳು ಬಂದ ಮೇಲೆ ನಿಮ್ಮ ವೃತ್ತಿಯ ಮೇಲೆ ಹೊಡೆತ ಬಿದ್ದಂತೆ ಆಗಿದೆ. ನಿಮ್ಮಸಮಾಜ ಸಂಘಟನೆಯಾಗಬೇಕಿದೆ. ನಿಮ್ಮಲ್ಲಿ ಇರುವ ಗೊಂದಲಗಳಿಂದ ಹೊರಗೆ ಬರಬೇಕಿದೆ. ಒಂದು ಕಾಲದಲ್ಲಿ ಚಳ್ಳಕೆರೆಯನ್ನುಚೋಟ ಮುಂಬೈ ಎಂದು ಕರೆಯಾಲಾಗುತ್ತಿತ್ತು ಅಲ್ಲಿ ಅಷ್ಟೊಂದು ಎಣ್ಣೆ ಮಿಲ್‍ಗಳು ಇದ್ದವು. ನನ್ನ ರಾಜಕೀಯ ಹಾಗೂ ವ್ಯವಹಾರಿಕಬೆಳವಣಿಗೆಗೆ ಗಾಣಿಗ ಸಮಾಜ ಕಾರಣವಾಗಿದೆ ಎಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದಆಡಳಿತ ಮಂಡಳಿ ಸದಸ್ಯರು, ಹಾಗೂ ವಿಜಯಪುರದ ವನಶ್ರೀ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಜಯಬಸವಕುಮಾರಸ್ವಾಮೀಜಿ ಮಾತನಾಡಿ, ಗಾಣಿಗ ಸಮಾಜ ಸಂಘಟಿತರಾಗಬೇಕಿದೆ. ನಮ್ಮ ಸಮಾಜದಲ್ಲಿಯೂ ಸಹಾ ಪ್ರತಿಭಾವಂತರಿದ್ದಾರೆ.
2ಎಮೀಸಲಾತಿಯನ್ನು ಪಡೆಯುವುದರ ಮೂಲಕ ಶಿಕ್ಷಣವನ್ನು ಪಡೆಯಬೇಕಿದೆ. ಮೀಸಲಾತಿಯ ಪ್ರಭಾವ ಈ ಹಿಂದೆ ಅಷ್ಠಾಗಿ ಇರಲಿಲ್ಲಈಗ 15 ವರ್ಷದಿಂದ ಇದರ ಪ್ರಭಾವ ಹೆಚ್ಚಾಗಿದೆ. ಈಗ ಮೀಸಲಾತಿ ಅನಿವಾರ್ಯ ಎನ್ನುವ ಪ್ರಸಂಗ ಬಂದಿದೆ. ಜಾತಿ ಗಣತಿಯಲ್ಲಿಗಾಣಿಗ ಎಂದು ಬರೆಸುವುದರ ಮೂಲಕ ನಮ್ಮ ಸಮುದಾಯದ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ನಮ್ಮ ಸಮುದಾಯದವರನ್ನುಜಾಗೃತಿಯನ್ನು ಮೂಡಿಸುವ ಸಲುವಾಗಿ ಡಿಸೆಂಬರ ಆಥವಾ ಜನವರಿಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನುನಡೆಸಲಾಗುವುದು, ಇದರಲ್ಲಿ ನಮ್ಮ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯ ಮಾಡಲಾಗುವುದ ಇದ್ದಲ್ಲದೆ ನಮ್ಮಅಭೀವೃದ್ದಿಗಾಗಿ ಗಾಣಿಗ ಅಭೀವೃದ್ದಿ ನಿಗಮವನ್ನು ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹಾಕಲಾಗುವುದು ಎಂದರು.ತಾಲೂಕು ಗಣಿಗಾರರ ಸಂಘದ ಅಧ್ಯಕ್ಷರಾದ ಎ.ಆರ್.ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಗಾಣಿಗರ ಸಂಘದ ಅಧ್ಯಕ್ಷರಾದ ಡಿ.ಎಸ್. ಸುರೇಶ ಬಾಬು ಚಿತ್ರದುರ್ಗ ತಾಲ್ಲೂಕು ಗಾಣಿಗರ ಸಂಘ ಮಹಿಳಾವಿಭಾಗದ ಗೌರವಾಧ್ಯಕ್ಷರಾದ ಶ್ರೀಮತಿ ಕೆ.ಸಿ.ವೀಣಾ ಚಿತ್ರದುರ್ಗ ತಾಲ್ಲೂಕು ಗಾಣಿಗರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷರಾದಶ್ರೀಮತಿ ಪುಷ್ಪ ಸುರೇಶ್ ಬಾಬು ಹಿರಿಯ ಉಪಾಧ್ಯಕ್ಷರಾದ ಡಿ.ಎಸ್.ರುದ್ರಮುನಿ, ಭರಮಸಾಗರ ಹೊಸದುರ್ಗದ ಮಲ್ಲಿಕಾರ್ಜನಪ್ಪ,ಮೊಳಕಾಲ್ಮೂರಿನ ವಿನಯಕುಮಾರ್, ಹಿರಿಯೂರಿಬ ಸಿದ್ದಾಮಣ್ಣ, ಚಳ್ಳಕೆರೆಯ ಸುಮಿತ್ರಮ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ,ದಾವಣಗೆರೆಯ ರತ್ನಮ್ಮ, ತಿಪ್ಪೇಸ್ವಾಮಿ, ಶಿವಾನಂದ,ಮ ಮುರುಘೇಶ, ಮಂಜುನಾಥ್, ವರದಶಂಕರ್ ಆಶೋಕ್ ವಿರೂಪಾಕ್ಷಿ,ನಂದಿಶ್ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



