ಚಿತ್ರದುರ್ಗ: ನನ್ನ ಮೇಲೆ ಸುಳ್ಳು ಕಮಿಷನ್ ಆರೋಪವನ್ನು ಹೊರಸಿರುವ ಗಾಣಿಗ ಸಮುದಾಯ ಸ್ವಾಮಿಯ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನುಹಾಕಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಶಿವರಾಜ್ ತಗಂಡಗಿ ತಿಳಿಸಿದರು.ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಣಿಗ ಪೀಠಕ್ಕೆ ಹಿಂದಿನ ಬಿಜೆಪಿ ಸರ್ಕಾರದಬೊಮ್ಮಾಯಿಯವರು ತಮ್ಮ ಅಧಿಕಾರದಲ್ಲಿ 3.5 ಕೋಟಿ ಅನುದಾನ ಮಂಜೂರಾಗಿತ್ತು ಅದರಲ್ಲಿ ಅವರ ಸರ್ಕಾರದ ಅವಧಿಯಲ್ಲಿಯೇ2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು ಉಳಿದ 1.50 ಕೋಟಿ ರೂ.ಗಳನ್ನು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರೇಬಡುಗಡೆ ಮಾಡಬೇಡಿ ಎಂದು ಅರ್ಥಿಕ ಇಲಾಖೆಗೆ ಸೂಚಿಸಿದ್ದರು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸ್ವಾಮಿಗಳುಹಿಂದಿನ ಆದೇಶವನ್ನು ಮರೆ ಮಾಚಿ ನಮಗೆ ಇನ್ನೂ 1.50 ಕೋಟಿ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದರು.
ನಾನು ಇದರ ಬಗ್ಗೆಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದಾಗ ಅವರು ಈ ವಿಷಯವನ್ನು ತಿಳಿಸಿದರು.
ಈ ಬಗ್ಗೆ ಸ್ವಾಮಿಗಳು ನ್ಯಾಯಾಲಯಕ್ಕೆ ಹಿಂದಿನ ಸರ್ಕಾರ ನೀಡಿದ ಆದೇಶವನ್ನು ಮರೆ ಮಾಚಿ ನಮಗೆ 3.5 ಕೋಟಿಯಲ್ಲಿ 2
ಕೋಟಿಯನ್ನು ಮಾತ್ರ ನೀಡಲಾಗಿದೆ ಇದರಲ್ಲಿ ನಮಗೆ ಇನ್ನೂ 1.50 ಕೋಟಿ ಬರಬೇಕೆಂದು ತಿಳಿಸಿದ್ದಾರೆ. ಇದರ ಬಗ್ಗೆ ನಮ್ಮ ಸರ್ಕಾರಹಿಂದಿನ ಸರ್ಕಾರ ಮಾಡಿದ ಆದೇಶವನ್ನು ನ್ಯಾಯಾಲಯಕ್ಕೆ ನೀಡಲಾಗುವುದು, ಇದ್ದಲ್ಲದೆ ಗಾಣಿಗ ಸಮುದಾಯದ ಶ್ರೀಗಳು ಮಠಕ್ಕೆಅನುದಾನ ಪಡೆಯಲು ನಾನು ಕಮಿಷನ್ ಕೇಳಿದ್ದೇನೆ ಎಂದು ಆರೋಪ ಮಾಡಿದ್ದಾರೆ ಅವರು ಇದಕ್ಕೆ ಸಾಕ್ಷಿಯನ್ನು ನೀಡಿದರೆ ಸಚಿವಸ್ಥಾನಕ್ಕೆ ರಾಜೀನಾಮೆ ಅಲ್ಲ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ, ಇಲ್ಲವಾದಲ್ಲಿ ಅವರು ಗಾಣಿಗ ಪೀಠದ ಸ್ವಾಮಿಸ್ಥಾನದಿಂದಲೇ ಹೊರಗಬೇಕು ಎಂದು ಸಚಿವರಾದ ಶಿವರಾಜ್ ತಗಂಡಗಿ ಸ್ವಾಮಿಗಳಿಗೆ ಸವಾಲ್ ಹಾಕಿದ್ದಾರೆ.
ಈಗ ಗಾಣಿಗ ಸಮುದಾಯದಲ್ಲಿ ಸ್ವಾಮಿಗಳಾದವರು ಹಿಂದಿನ ಪೂರ್ವಾಶ್ರಮದಲ್ಲಿ ರಾಜಕಾರಣೀಯಾದವರು ಅವರು ಸಹಾ ತಮ್ಮಅಧಿಕಾರದ ಅವಧಿಯಲ್ಲಿ ಇದೇ ರೀತಿ ಅನುದಾನ ಪಡೆಯಲು ಕಮಿಷನ್ ಪಡೆದಿರಬಹುದೆ ಅದರಿಂದಲೇ ಅವರು ನನ್ನ ಮೇಲೆ ಈರೀತಿಯಾದ ಸುಳ್ಳಿನ ಆರೋಪವನ್ನು ಮಾಡಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ನಾನು ನೀಡುತ್ತೇನೆ ಇದರ ಬಗ್ಗೆ ನ್ಯಾಯಾಲಯದಲ್ಲಿಮೊಕದ್ದಮ್ಮೆಯನ್ನು ಹಾಕುವುದರ ಮೂಲಕ ಅವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ಅತಿ ಶೀಘ್ರದಲ್ಲಿಯೇ ದಾಖಲಿಸಲಾಗುವುದುಎಂದ ಸಚಿವರು, ಸ್ವಾಮಿಗಳಾದವರು ಖಾವಿಯನ್ನು ಬಿಚ್ಚಿ ಬಂದರೆ ಅವರು ಅವರ ವೃತ್ತಾಂತವನ್ನು ಹೇಳುತ್ತೇನೆ ನನಗೆ ಖಾವಿಯ ಬಗ್ಗೆಆಪಾರವಾದ ಗೌರವ ಇದೆ, ಅದೇ ರೀತಿ ನಂಬಿಕೆ ಇದೆ. ಸ್ವಾಮಿಗಳಾದವರು ತಮ್ಮ ಸಮುದಾಯದ ಅಭೀವೃದ್ದಿಗೆ ಸರ್ಕಾರದಿಂದಬೇಕಾದ ಸಹಾಯವನ್ನು ಪಡೆಯಬೇಕಿದೆ ಅದು ಬಿಟ್ಟು ಈ ರೀತಿಯಾದ ಆರೋಪ ಮಾಡುವುದು ಸರಿಯಲ್ಲ ಎಂದು ಶಿವರಾಜ್ತಗಂಡಗಿ ಸ್ವಾಮಿಗಳಿಗೆ ಕಿವಿ ಮಾತು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ವೆಂಕಟೇಶ್, ಆಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ, ಡಿಸಿಸಿ ಅಧ್ಯಕ್ಷರಾದತಾಜ್‍ಪೀರ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್, ಖುದ್ದುಸ್ ಪ್ರಕಾಶ್ ರಾಮನಾಯ್ಕ್, ಮಧುಗೌಡ, ಕಣ್ಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



