ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಯಾವುದೇ ಕೊರತೆ ಇಲ್ಲದೇ ಸಮವಸ್ತ್ರ, ಶೂ ,ಟೈ ಬೆಲ್ಟ್ ಇವುಗಳನ್ನು ನೀಡುವುದರ ಜೊತೆಗೆ ಸರ್ಕಾರಿಶಾಲೆಗಳನ್ನು ಹೈಟೆಕ್ ಶಾಲೆಗಳನ್ನಾಗಿ ಪರಿವರ್ತಿಸಲು ಹೆಚ್ಚು ಅನುದಾನ ಮಂಜೂರು ಮಾಡಬೇಕು ಮತ್ತು ಸರ್ಕಾರಿ ನೌಕರರಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಿಸುವಂತೆ ವಿಧಾನ ಸಭೆಯಲ್ಲಿ ಚರ್ಚಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡು ಆದೇಶಿಸಲು ಹಾಗೂ ಕೂಡಲೇ ಒಂದು ವಾರದ ಒಳಗಾಗಿ ಮಕ್ಕಳಿಗೆ ಶೂ ವಿತರಿಸದಿದ್ದರೆ ಸರ್ಕಾರಿ ಶಾಲೆಗಳ ಮುಂದೆಪ್ರತಿಭಟನೆ ಮಾಡಲಾಗುವುದೆಂದು ಕರುನಾಡ ವಿಜಯಸೇನೆ ಜಿಲ್ಲಾ ಘಟಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಬರಿಗಾಲಿನಲ್ಲಿ ಪಾದಯಾತ್ರೆ ಮೂಲಕ
ಆಗಮಿಸಿದ ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು 1 ರಿಂದ 10ನೇ ತರಗತಿಯ ಮಕ್ಕಳಿಗೆ/ವಿದ್ಯಾರ್ಥಿಗಳಿಗೆ
ಶಾಲೆ ಪ್ರಾರಂಭವಾಗಿ 2-3 ತಿಂಗಳು ಕಳೆದರೂ ಸರ್ಕಾರದಿಂದ ಶಾಲೆಗಳಿಂದ ಶೂಗಳನ್ನು ವಿತರಿಸಿಲ್ಲ. ಈ ರೀತಿಯ ಅವ್ಯವಸ್ಥೆಗೆ
ಶಿಕ್ಷಣ ಸಚಿವರೇ ನೇರ ಹೊಣೆ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತೆ ಇರುವುದಿಲ್ಲ. ನೌಕರರು ಇರುವುದಿಲ್ಲ, ಸರಿಯಾದ
ಪ್ರಮಾಣದಲ್ಲಿ ಶಿಕ್ಷಕರು ಇರುವುದಿಲ್ಲ. ಅವನತಿಗೆ, ಮುಚ್ಚುವಂತೆ ಆಗುವುದು ಸರ್ಕಾರದ ಯೋಜನೆಗಳಿಂದಲೇ. ಸರ್ಕಾರಿ ಶಾಲೆಗಳಸರ್ಕಾರ ಬಿ.ಬಿ.ಎಂ.ಪಿ. ವ್ಯಾಪ್ತಿಯ ನಾಯಿಗಳಿಗೆ ಪ್ರತಿ ನಾಯಿಗೆ ರೂ.27-00 ವೆಚ್ಚದಲ್ಲಿ ಬಿರಿಯಾನಿ ನೀಡುತ್ತಾರೆ. ಆದರೆ ಸರ್ಕಾರಿಶಾಲೆಗಳ ಮಕ್ಕಳಿಗೆ ಶೂ ವಿತರಣೆ ಮಾಡುವ ವ್ಯವಸ್ಥೆ ಸಚಿವರಿಗಿಲ್ಲ. ಈ ರೀತಿಯ ಅವ್ಯವಸ್ಥೆ ಶಿಕ್ಷಣ ಸಚಿವರ ನಿರ್ಲಕ್ಷ್ಯಯೇ ನೇರಹೊಣೆ..? ನಾಯಿಗಳಿಗೆ ಇರುವ ಬೆಲೆ ಮಕ್ಕಳಿಗೆ ಸರ್ಕಾರಿ ಶಾಲೆಗಳ ಮೇಲೆ ಕಾಳಜಿ ವಹಿಸುವುದಿಲ್ಲ, ಸರ್ಕಾರಿ ಶಾಲೆಗಳನ್ನುಮುಚ್ಚುವುದಕ್ಕೆ ಇಂತಹ ಎಡವಟ್ಟುಗಳೇ ಸಾರ್ವಜನಿಕರಲ್ಲಿ ಮಕ್ಕಳಲ್ಲಿ ಬೇರೂರಿರುತ್ತದೆ ಸರ್ಕಾರಿ ಶಾಲೆಯ ಮಕ್ಕಳ ಮೇಲೆಕೋಪವೇಕೆ..? ಎಂದರು.
ಸರ್ಕಾರಿ ಶಾಲೆಗಳ ಅವನತಿಗೆ ಶಿಕ್ಷಣ ಸಚಿವರೇ ಹೊಣೆ? ನಾಯಿಗಳ ಮೇಲಿರುವ ಕಾಳಜಿ, ಬೆಲೆ, ಕರುಣೆ ಸರ್ಕಾರಿ ಶಾಲೆ ಮತ್ತು
ವಿದ್ಯಾರ್ಥಿಗಳ ಮೇಲೆ ಏಕೆ ಇಲ್ಲ, ಶಿಕ್ಷಣ ಸಚಿವರೇ ತಾವು ಸಹ ಪಾದರಕ್ಷೆ ಹಾಕಬೇಡಿ, ಸರ್ಕಾರಿ ಕಾರು ಬಳಸಬೇಡಿ. ರಾಜ್ಯದ ಎಲ್ಲಾಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಹೈಟೆಕ್ ಮಾದರಿಯಲ್ಲಿ ಶಿಕ್ಷಣ ನೀಡಲು ಸರ್ಕಾರ ಈ ಬಗ್ಗೆ ಮುಂದಾಗಬೇಕು ಮತ್ತು ಖಾಸಗಿಶಾಲೆಗಳ ಫಲಿತಾಂಶದಂತೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರಲು ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನುನೇಮಕ ಮಾಡಿಕೊಳ್ಳುವುದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಇಂತಿಷ್ಟು ಉತ್ತಮ ಫಲಿತಾಂಶ ಬರಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸರ್ಕಾರಕ್ಕೆ ಮತ್ತು ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚು ಮಕ್ಕಳನ್ನು ಪೋಷಕರು ದಾಖಲಾತಿ ಮಾಡಲು ಸರ್ಕಾರಿನೌಕರರೇ ತಮ್ಮ ತಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಡೊನೇಷನ್ ಕಟ್ಟಿ ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿರುವುದುನೋಡಿದರೆ ಸಂಬಳ ಮಾತ್ರ ಸರ್ಕಾರದ್ದು, ಮಕ್ಕಳ ವಿದ್ಯಾಭ್ಯಾಸ ಖಾಸಗಿ ಶಾಲೆಯಲ್ಲಿ ಇದು ಯಾವ ನ್ಯಾಯ ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



