ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗಿ ವರದಿ ಆಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಗುರುವಾರ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಿದ್ದು, ಹೃದಯಾಘಾತಕ್ಕೆ ಕಾರಣಗಳ ಕುರಿತು ಕುತೂಹಲ ಮೂಡಿದೆ.
ರಾಜ್ಯಾದ್ಯಂತ ಹಠಾತ್ ಹೃದಯಾಘಾತದಿಂದ ನಿಧನ ಹೊಂದುತ್ತಿದ್ದ ಕಾರಣದಿಂದ ಕೊರೋನಾ ಸೋಂಕು ಹಾಗೂ ಲಸಿಕೆ ಅಡ್ಡ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಫೆಬ್ರವರಿಯಲ್ಲಿ ರವೀಂದ್ರನಾಥ್ ಸಮಿತಿ ರಚಿಸಿತ್ತು. ಬಳಿಕ ಮೇ-ಜೂನ್ ತಿಂಗಳಲ್ಲಿಹಾಸನ ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚಾಗಿದ್ದರಿಂದ ಜು.2 ರಂದು ಇದೇ ತಜ್ಞರ ಸಮಿತಿಗೆ ಹಾಸನ ಪ್ರಕರಣಗಳ ಕುರಿತು ವರದಿ ನೀಡಲು ಸೂಚಿಸಿ ಒಂದು ವಾರದ ಕಾಲಾವಕಾಶ ನೀಡಿತ್ತು.ಸಮಿತಿ ಮೃತಪಟ್ಟಿರುವವರ ಮರಣೋತ್ತರ ವರದಿ ಸೇರಿ ಚಿಕಿತ್ಸಾ ವಿವರ ಸಂಗ್ರಹಿಸಿ ಅಧ್ಯ ಯನ ನಡೆಸಿದೆ. ಆದರೆ 22 ಮಂದಿ ಸಾವಿಗೀಡಾದವರಲ್ಲಿ 8 ಮಂದಿ ಮಾತ್ರ ಮರಣೋತ್ತರ ಪರೀಕ್ಷೆ ನಡೆಸಿದ್ದು, ಉಳಿದ 14 ಮಂದಿ ಮಾಡಿಸಿಲ್ಲ. ಹೀಗಾಗಿ ವಿವಿಧ ಅಂಶಗಳನ್ನು ಆಧಾರವಾಗಿ ಟ್ಟುಕೊಂಡು ವರದಿ ನೀಡುವ ಬಗ್ಗೆ ಬುಧ ವಾರ ಚರ್ಚೆ ನಡೆಸಿದೆ. ಅಂತಿಮವಾಗಿ ಗುರುವಾರ ಹಾಸನದ ಪ್ರಕರಣಗಳ ವರದಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



