ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿಯಿಂದ ಬರುವ ಪ್ರತಿ ತಿಂಗಳ 2 ಸಾವಿರ ರೂಪಾಯಿ ಹಣವನ್ನು ಅಜ್ಜಿಯೊಬ್ಬಳು ತಂದೆ-ತಾಯಿ ಇಲ್ಲದ ತನ್ನ ಮೊಮ್ಮಗಳಿಗೆ ಕೂಡಿಟ್ಟಿದ್ದಾಳೆ. ಹೌದು! ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿ ಶಂಕ್ರಮ್ಮ ತನ್ನ ಮೊಮ್ಮಗಳು ರೇಖಾ ಭವಿಷ್ಯಕ್ಕಾಗಿ ಕಳೆದ 23 ತಿಂಗಳಿಂದ ಬಂದಿರುವ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟುಕೊಂಡು ಬಂದಿದ್ದಾರೆ.
ತಂದೆ ತಾಯಿ ಇಲ್ಲದ ರೇಖಾ ವ್ಯಾಸಂಗ ಹಾಗೂ ಭವಿಷ್ಯದ ದೃಷ್ಟಿಕೋನಕ್ಕಾಗಿ ಅಜ್ಜಿ 23 ಕಂತುಗಳ ಹಣವನ್ನು ರೇಖಾಳ ಖಾತೆಗೆ ವರ್ಗಾಯಿಸಿದ್ದಾಳೆ. ಮೊಮ್ಮಗಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಇರಲಿ ಎಂದು ಸರಕಾರ ಹಾಕಿರುವ ಹಣ ಕೂಡಿಟ್ಟಿದ್ದೇನೆ ಎನ್ನುತ್ತಾರೆ ಅಜ್ಜಿ ಶಂಕ್ರಮ್ಮ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







