ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಬಿಜೆಪಿ ಶಾಸಕ ಬಿಪಿ ಹರೀಶ್ ನಾಲಿಗೆ ಹರಿಬಿಟ್ಟಿದ್ದು ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಇಂದು ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ ಶಿವಕುಮಾರ್ ಚಿತ್ರದುರ್ಗ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ನೀಡಿದರು.ಇದೆ ವೇಳೆ ಕೆ.ಟಿ ಶಿವಕುಮಾರ್ ಮಾತನಾಡಿದ ಅವರು, ದಾವಣಗೆರೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್ ದಾವಣಗೆರೆ ಜಿಲ್ಲಾ ಮಹಿಳಾ ವರಿಷ್ಠಾಧಿಕಾರಿಗಳನ್ನು ಏಕವಚನದಲ್ಲಿ ಹೀನಾಯ ಪಮೋರಿಯನ್ ನಾಯಿ ಎಂದು, ಪೋಲಿಸರು ನಾಯಿಗಳು ಎಂದು ನಿಂಧಿಸಿರುವುದು ಕಾನೂನು ಅಪರಾಧವಾಗಿರುತ್ತದೆ. ಸಾಮಾನ್ಯ ಜನ ಈ ರೀತಿ ಬೈದರೆ, ಮಾತನಾಡಿದರೆ ಕೂಡಲೇ ಅಂತಹವರನ್ನು ಬಂಧಿಸುತ್ತಾರೆ. ಆದರೆ ರಾಜಕೀಯ ನಾಯಕರು ಮಾತನಾಡಿದರೆ ಕೂಡಲೇ ಬಂಧಿಸಿದೇ, ಮೀನಾಮೇಷ ಎಣಿಸುತ್ತಿರುವುದು ನೋಡಿದರೆ ಬಡವರಿಗೆ ಒಂದು ನ್ಯಾಯ, ರಾಜಕೀಯ ನಾಯಕರಿಗೆ ಒಂದು ನ್ಯಾಯ ಎಂದು ಸಾರ್ವಜನಿಕರಲ್ಲಿ ಈಗಾಗಲೇ ಎದ್ದು ಕಾಣುತ್ತದೆ ಎಂದು ಕಿಡಿ ಕಾರಿದರು.ಕರ್ನಾಟಕದಲ್ಲಿ ವೀರವನಿತೆ ಓಬವ್ವ, ಗಂಡು ಮೆಟ್ಟಿನ ನಾಡು ಎಂದೇ ಪ್ರಸಿದ್ಧಿಯಾಗಿದ್ದು, ವೀರವನಿತೆ ಓಬವ್ವ ರೀತಿಯಲ್ಲಿಯೇ ಮಹಿಳೆಯರು ಕೆಲಸ ಮಾಡುತ್ತಾರೆ. ಅದೇ ರೀತಿ ಓಬವ್ವಳ ಪ್ರತಿರೂಪ ಉಮಾ ಪ್ರಶಾಂತ್, ಐಪಿಎಸ್ ಇವರ ಮೇಲೆ ಈ ರೀತಿ ಅವಹೇಳನವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದರು.ಇನ್ನು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಲಕ್ಷಣಗಳುಕಾಣುತ್ತವೆ. ಸಮಾಜದಲ್ಲಿ ಕಾನೂನು ಎಲ್ಲರಿಗೂ ಒಂದೇ, ಮುಂದೆ ಇದೇ ಸಾರ್ವಜನಿಕರಾಗಲೀ, ರಾಜಕೀಯ ನಾಯಕರಾಗಲೀ ಯಾರೇ ಆಗಲೀ ಈ ರೀತಿ ಮಾತನಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ಮುಂದಾಗಬೇಕು ಎಂದು ಒತ್ತಾಯಿಸಿ, ASP ಶಿವಕುಮಾರ್ ಅವರಿಗೆ ಮನವಿ ನೀಡಿದರು, ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯೇಂದ್ರ ಹಾಗೂ ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರವನ್ನು ಪೋಸ್ಟ್ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







