ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಸಿಂಗ್ವಾ ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಥಳೀಯ ಜಾನುವಾರು ಸಾಕಣೆದಾರ ಈಶ್ವರ್ ಸಿಂಗ್ವಾ ಅವರ ಒಡೆತನದ ಮುರ್ರಾ ಎಮ್ಮೆ (ಬಫಲೋ) ರಾಧಾ 35.669 ಕಿಲೋಗ್ರಾಂಗಳಷ್ಟು ಹಾಲು ಉತ್ಪಾದನೆ ಮಾಡಿದೆ. ಇದು ಕೈತಾಲ್ನ ಎಮ್ಮೆ ರೇಷ್ಮಾಳ ಈ ಹಿಂದಿನ ದಾಖಲೆಯನ್ನು ಪುಡಿಗಟ್ಟಿದೆ. ಕೈತಾಲ್ನ ರೇಷ್ಮಾ, 33,800 ಕಿಲೋಗ್ರಾಂಗಳಷ್ಟು ಹಾಲು ಉತ್ಪಾದಿಸಿದ್ದು, ದಾಖಲೆಯಾಗಿತ್ತು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸಿಂಗ್ವಾ ಖಾಸ್ ಗ್ರಾಮದ ಪಶುಗಳ ಆಸ್ಪತ್ರೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.ಹರಿಯಾಣದ ಪಶುಸಂಗೋಪನಾ ಇಲಾಖೆ ಆಯೋಜಿಸಿದ್ದ ಈ ಸ್ಪರ್ಧೆಗೆ ಇಲಾಖೆಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಪರಿಶೀಲನೆ ಬಳಿಕ ಇಲಾಖೆಯು ನಮ್ಮ ರಾಧಾ ಎಮ್ಮೆಯನ್ನು ಸ್ಪರ್ಧೆಗೆ ಆಹ್ವಾನಿಸಿತ್ತು. ಹಿರಿಯ ಅಧಿಕಾರಿಗಳ ತಂಡ ಸ್ಪರ್ಧೆಯಲ್ಲಿ ರಾಧಾ ಎಮ್ಮೆ ನೀಡಿದ ಹಾಲನ್ನು ಮೂರು ಬಾರಿ ಅಳತೆ ಮಾಡಿತು. ಈ ವೇಳೆ ಮುರ್ರಾ ತಳಿಯ ರಾಧಾ ಎಮ್ಮೆ 35.669 ಕಿಲೋಗ್ರಾಂಗಳಷ್ಟು ಹಾಲು ಉತ್ಪಾದಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಈ ಹಿಂದೆ ಕೈತಾಲ್ನ ಎಮ್ಮೆ ರೇಷ್ಮಾ 33,800 ಕಿಲೋಗ್ರಾಂಗಳಷ್ಟು ಹಾಲು ಉತ್ಪಾದಿಸುವ ಮೂಲಕ ಹಿಂದಿನ ದಾಖಲೆ ಬರೆದಿತ್ತು. ಈ ದಾಖಲೆಯನ್ನು ರಾಧಾ ಮುರಿದಿದ್ದಾಳೆ.
ಹರಿಯಾಣದ ಪಶುಸಂಗೋಪನೆ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವಸಿಂಗ್ವಾ ಅವರ ತಂದೆ ಹೋಶಿಯಾರ್ ಸಿಂಗ್, ಹಲವು ವರ್ಷಗಳಿಂದ ಮುರ್ರಾ ಎಮ್ಮೆಗಳನ್ನು ಸಾಕುತ್ತಿದ್ದಾರೆ. ಪಶುಸಂಗೋಪನೆಗೆ ನೀಡಿದ ಕೊಡುಗೆಗಾಗಿ ಸೆಪ್ಟೆಂಬರ್ 21 ರಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಗೌರವಿಸಿದ್ದರು ಎಂದು ಸಿಂಗ್ವಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಭೂಪಿಂದರ್ ಸಿಂಗ್ ಹೂಡಾ ಅವರು ಸಹ ಪಶುಪಾಲನೆಗಾಗಿ ಸನ್ಮಾನಿಸಿದ್ದರು ಎಂದು ರೈತ ಸಿಂಗ್ವಾ ಹೇಳಿಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







