ಕನ್ನಡದ ನಿರ್ದೇಶಕ ಎ.ಹರ್ಷ ಅವರು ಬಾಲಿವುಡ್ಗೆ ಹೋಗಿ ಸದ್ದು ಮಾಡಿದ್ದಾರೆ. ಹೌದು, ಅವರ ನಿರ್ದೇಶನದ ‘ಬಾಘಿ 4’ ಸಿನಿಮಾ ಸೆಪ್ಟೆಂಬರ್ 5ರಂದು ರಿಲಿಸ್ ಆಗಿ ಮೆಚ್ಚುಗೆ ಪಡೆದಿದೆ. ನಟ ಟೈಗರ್ ಶ್ರಾಫ್ ಅವರು ಈ ಚಿತ್ರದ ಹೀರೋ. ಟೈಗರ್ ಸಿನಿಮಾ ಎಂದರೆ ಕೇವಲ ಫೈಟ್ ಹಾಗೂ ವೈಲೆನ್ಸ್ಗಳು ಮಾತ್ರ ಇರುತ್ತಿದ್ದವು. ಆದರೆ, ಈ ಸಿನಿಮಾ ಭಿನ್ನವಾಗಿದೆ ಎಂಬ ಅಭಿಪ್ರಾಯ ಮೂಡಿ ಬಂದಿದೆ. ಈ ಸಿನಿಮಾ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ.‘ಬಾಘಿ ’ ಸಿನಿಮಾ ಸರಣಿಯಲ್ಲಿ ಈಗಾಗಲೇ ನಾಲ್ಕು ಸಿನಿಮಾಗಳು ಬಂದು ಹೋಗಿವೆ. ಮೊದಲ ಪಾರ್ಟ್ಗಿಂತ ಎರಡನೇ ಪಾರ್ಟ್ ಚಾರ್ಮ್ ಕಳೆದುಕೊಂಡಿತ್ತು. ಮೂರನೇ ಪಾರ್ಟ್ ಸಾಧಾರಣ ಎನಿಸಿಕೊಂಡಿತ್ತು. ಆದರೆ, ಬಿಸ್ನೆಸ್ ದೃಷ್ಟಿಯಿಂದ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಹೀಗಾಗಿ, ನಿರ್ಮಾಪಕರು ನಾಲ್ಕನೇ ಪಾರ್ಟ್ ಮಾಡಿದ್ದಾರೆ. ಇದಕ್ಕೆ ಕನ್ನಡದ ನಿರ್ದೇಶಕ ಎ. ಹರ್ಷ ಆ್ಯಕ್ಷನ್ ಹೇಳಿದ್ದಾರೆ. ಅವರು ಬಾಲಿವುಡ್ನಲ್ಲಿ ಗೆದ್ದಿದ್ದಾರೆ.‘ಬಾಘಿ 4’ ಸಿನಿಮಾ ಮೊದಲ ದಿನ ಬರೋಬ್ಬರಿ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿದೆ. ಬುಕ್ ಮೈ ಶೋನಲ್ಲಿ 8+ರೇಟಿಂಗ್ ಚಿತ್ರಕ್ಕೆ ಸಿಕ್ಕಿದೆ. ಹೀಗಾಗಿ, ಶನಿವಾರ ಹಾಗೂ ಭಾನುವಾರ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರ 100+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ ಹರ್ಷಗೆ ಬಾಲಿವುಡ್ ಆಫರ್ ಹೆಚ್ಚಲಿದೆ.ದಕ್ಷಿಣ ನಿರ್ದೇಶಕರ ಸಿನಿಮಾ ಮೇಕಿಂಗ್ ಸ್ಟೈಲ್ಗೂ ಬಾಲಿವುಡ್ ಸಿನಿಮಾ ನಿರ್ದೇಶಕರ ಶೈಲಿಗೂ ಸಾಕಷ್ಟು ವ್ಯತ್ಯಾಸ ಇದೆ. ಇಲ್ಲಿಯವರು ಸಿನಿಮಾಗಳನ್ನು ಸಖತ್ ಸ್ಪೈಸಿಯಾಗಿ ಮಾಡಬಲ್ಲರು ಎಂಬುದು ಬಾಲಿವುಡ್ ನಿರ್ಮಾಪಕರಿಗೆ ಅರ್ಥವಾಗಿದೆ. ಈ ಕಾರಣದಿಂದಲೇ ಸಾಕಷ್ಟು ಬಾಲಿವುಡ್ ನಿರ್ಮಾಪಕರು ದಕ್ಷಿಣದ ನಿರ್ದೇಶಕರನ್ನು ಕರೆಸುತ್ತಿದ್ದಾರೆ. ‘ಬಾಘಿ 4’ ಚಿತ್ರದ ನಿರ್ಮಾಪಕರು ಮಾಡಿದ್ದೂ ಅದನ್ನೇ. ಕಥೆ, ಸ್ಕ್ರಿಪ್ಟ್ ಎಲ್ಲವನ್ನೂ ನಿರ್ಮಾಪಕರೇ ನೀಡಿದ್ದರು. ಎ. ಹರ್ಷ ನಿರ್ದೇಶನದ ಜವಾಬ್ದಾರಿ ಮಾತ್ರ ಹೊತ್ತುಕೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







