ಚಿತ್ರದುರ್ಗ : ಹತ್ತನೆ ತರಗತಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ಮೇಲೆ ಕ್ರಮಕೈಗೊಳ್ಳುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲ್ಲೂಕು ಶಾಖೆವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಅನುದಾನಕ್ಕೆ ಒಳಪಟ್ಟಿರುವ ಪ್ರೌಢಶಾಲೆಗಳ ಸಹ ಶಿಕ್ಷಕರ ವಿಷಯವಾರು ಫಲಿತಾಂಶವನ್ನು ಪರಿಗಣಿಸಿ ಶೇ. 60 ಕ್ಕಿಂತ ಕಡಿಮೆಫಲಿತಾಂಶ ಬಂದಿರುವ ಸಹ ಶಿಕ್ಷಕರನ್ನು ಗುರುತಿಸಿ ವಾರ್ಷಿಕ ವೇತನ ಬಡ್ತಿ ತಡೆಹಿಡಿಯುವುದು. ಅನುದಾನ ಪಡೆಯುತ್ತಿರುವ ವಿಷಯಶಿಕ್ಷಕರು ನಿರಂತರ ಮೂರು ವರ್ಷಗಳಲ್ಲಿ ಶೇ.60 ಕ್ಕಿಂತ ಕಡಿಮೆ ಫಲಿತಾಂಶ ನೀಡಿದಲ್ಲಿ ಅಂತಹ ವಿಷಯ ಶಿಕ್ಷಕರುಗಳವೇತಾನುದಾನವನ್ನು ತಡೆಹಿಡಿಯುವುದು ಹೀಗೆ ಹಲವಾರು ವಿಷಯಗಳ ಮೇಲೆ ಕ್ರಮ ಕೈಗೊಳ್ಳಲು ದಿನಾಂಕ : 30-5-2025 ರಂದುನಿರ್ದೇಶಕರ ಸುತ್ತೋಲೆಯಂತೆ ಧಾರವಾಡ ಮತ್ತು ಕಲಬುರಗಿ ಆಯುಕ್ತಾಲಯ ವ್ಯಾಪ್ತಿಗೊಳಪಡುವ ಉಪ ನಿರ್ದೇಶಕರುಗಳಿಗೆ ಕ್ರಮವಹಿಸಲು ಸೂಚಿಸಲಾಗಿದೆ.
ಕಳಪೆ ಫಲಿತಾಂಶ ಬರುವುದಕ್ಕೆ ಕೇವಲ ಶಿಕ್ಷಕರುಗಳಷ್ಟೆ ಕಾರಣರಲ್ಲ. ವಿದ್ಯಾರ್ಥಿಗಳು ಬೆಳದು ಬಂದಿರುವ ಪರಿಸರ, ಪ್ರಾಥಮಿಕಹಂತದಲ್ಲಿ ಕಲಿತಿರುವ ಶಿಕ್ಷಣ, ಏಳನೆ ತರಗತಿಯವರೆಗೆ ಯಾವುದೇ ರೀತಿಯ ಗುಣಾತ್ಮಕ, ನಿರ್ಣಯಾತ್ಮಕ ಮಾನದಂಡಗಳಪರೀಕ್ಷೆಗಳು ಮೌಲ್ಯಮಾಪನ ಇಲ್ಲದಿರುವುದರಿಂದ ನೇರವಾಗಿ ಅಡೆತಡೆಗಳಿಲ್ಲದೆ ಕನಿಷ್ಠ ಎಫ್.ಎಲ್.ಎನ್. ಸಾಧಿಸದೆಉತ್ತೀರ್ಣರಾಗಿರುವ ಮಕ್ಕಳು ಎಂಟನೆ ತರಗತಿ ಪ್ರವೇಶ ಪಡೆಯುತ್ತಿದ್ದಾರೆ. ಪೋಷಕರು, ಆಡಳಿತ ಮಂಡಳಿ ಅಸಹಕಾರಒಳಗೊಂಡಂತೆ ಇನ್ನು ಅನೇಕ ಕಾರಣಗಳಿರುತ್ತವೆ. ಹಾಗಾಗಿ ಶಿಕ್ಷಕರುಗಳ ಮೇಲೆ ಕ್ರಮಕ್ಕೆ ಹೊರಡಿಸಿರುವ ಆದೇಶವನ್ನು ವಾಪಸ್ಪಡೆಯುವಂತೆ ಸಹ ಶಿಕ್ಷಕರುಗಳು ಒತ್ತಾಯಿಸಿದರು.ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜಪ್ಪ, ಸರ್ಕಾರಿ ನೌಕರರ ಸಂಘದಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ಪರಿಷತ್ ರಾಜಪ್ಪ ಎಸ್. ನಿರ್ದೇಶಕರಾದ ಮಂಜುನಾಥ್ ಡಿ. ಅನುದಾನಿತ ಮುಖ್ಯ ಶಿಕ್ಷಕರಸಂಘದ ಕೀರ್ತಿಕುಮಾರ್, ಡಾ.ಮಹೇಶ್, ದ್ವಾರಕನಾಥ್, ರಾಮಣ್ಣ, ನಿಜಲಿಂಗಪ್ಪ, ಶ್ರೀನಿವಾಸ್, ಸಹ ಶಿಕ್ಷಕರ ಸಂಘದಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



