ಚಿತ್ರದುರ್ಗ ನಗರದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗ ದಳದವತಿಯಿಂದ ಕಳೆದ 17 ವರ್ಷಗಳಿಂದ ನಿರಂತರವಾಗಿ
ನಡೆಯುತ್ತಿರುವ ಹಿಂದೂ ಮಹಾ ಗಣಪತಿ ಮಹೋತ್ಸವವೂ ಈ ಬಾರಿಯೂ ನಡೆಯಲಿದ್ದು, ಇದಕ್ಕೆ ಸಕಲ
ಸಿದ್ದತೆಯನ್ನು ಮಾಡಲಾಗುತ್ತಿದೆ. ಎಂದು ಹಿಂದೂ ಮಹಾ ಗಣಪತಿ 2025ರ ಸೇವಾ ಸಮಿತಿಯ ಅಧ್ಯಕ್ಷರಾದ ಶರಣಕುಮಾರ್
ತಿಳಿಸಿದ್ದಾರೆ.ಈ ಬಾರಿ 18ನೇ ವರ್ಷದ ಹಿಂದೂ ಮಹಾ ಗಣಪತಿ ಮಂಟಪದ ನಿರ್ಮಾಣಕ್ಕೆ ಭೂಮಿ ಪೂಜೆಯು ನಗರದ ಬಿ.ಡಿ.ರಸ್ತೆಯಲ್ಲಿನ ವಿಜ್ಞಾನಕಾಲೇಜಿನ ಮುಂಭಾಗದ ಜೈನಧಾಮದಲ್ಲಿ ಜು.31ರಂದು ಧ್ವಜ ಪೂಜೆ ಹಾಗೂ ಗೋವಿನ ಪೂಜೆ
ಕಾರ್ಯ ನಡೆಯುವುದರ ಮೂಲಕ ಮಂಟಪ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ವಿವಿಧ ಸಮಾಜದ ಗಣ್ಯರು, ಮುಖಂಡರು ಭಾಗವಹಿಸುವುದರ ಮೂಲಕಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೂ ಮಹಾ ಗಣೇಶೋತ್ಸವನ್ನು ಚಿತ್ರದುರ್ಗದಲ್ಲಿ 2007ರಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿಆರಂಭವಾಯಿತು.17 ವರ್ಷಗಳಿಂದ ಹಿಂದೂ ಮಹಾ ಗಣಪತಿ ಉತ್ಸವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ. ಒಂದುತಿಂಗಳು ನಡೆಯುವ ಈ ಉತ್ಸವ ಇಡೀ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಉತ್ಸವಕ್ಕೆ ಕೇವಲ ಚಿತ್ರದುರ್ಗದ ಜನತೆಗೆ ಅಷ್ಟೇಅಲ್ಲದೇ ದೇಶ ವಿದೇಶಗಳಿಂದ ಕಾರ್ಯಕರ್ತರು ಬಂದು ಭಾಗವಹಿಸುತ್ತಾರೆ.ಹಿಂದೂ ಮಹಾಗಣಪತಿ ಕಾರ್ಯಕ್ರಮಕ್ಕೆ ವಿವಿಧರಾಜ್ಯಗಳಿಂದಲೂ ಸಾವಿರಾರು ಜನ ಉತ್ಸವ ನೋಡಲು ಬರುತ್ತಾರೆ.ಕೊನೆಯಲ್ಲಿ ನಡೆಯುವ ಶೋಭಾಯಾತ್ರೆಯು ದಕ್ಷಿಣಭಾರತದಲ್ಲಿ ಅತಿ ಹೆಚ್ಚು ಜನ ಸೇರುವ ಶೋಭಾಯಾತ್ರೆ ಎಂಬ ಖ್ಯಾತಿ ಪಡೆದಿದೆ ಆಗಸ್ಟ್-27 ರಂದು ಗಣೇಶ ಪ್ರತಿಷ್ಠಾಪನೆಯಾಗಿ 18ದಿವಸಗಳ ಕಾಲ ಗಣೇಶೋತ್ಸವ ನಡೆಯುತ್ತಿದ್ದು, ಸೆಪ್ಟಂಬರ್-13 ರಂದು ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



