ಚಿತ್ರದುರ್ಗ : ಈ ಬಾರಿ ಚಿತ್ರದುರ್ಗದ ಹಿಂದೂ ಮಹಾಗಣಪತಿ ಹಬ್ಬ 18 ದಿನಗಳ ಅದ್ದೂರಿಯಾಗಿ ನಡೆಯಲಿದೆ ಎಂದು
ದಕ್ಷಿಣ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣೇಶ ಹಬ್ಬವನ್ನು ದೇಶದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲರನ್ನೂ ಒಂದುಗೂಡಿಸಿ ರಾಷ್ಟ್ರೀಯ ಭಾವನೆ ಮೂಡಿಸುವ ಕೆಲಸ ಆಗುತ್ತಿದೆ. ಸಾರ್ವಜನಿಕ ಗಣೇಶೋತ್ಸವನ್ನು ಚಿತ್ರದುರ್ಗದಲ್ಲಿ 2007ರಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಆರಂಭ ಮಾಡಿದ್ವಿ. 17 ವರ್ಷಗಳಿಂದ ಹಿಂದೂ ಮಹಾ ಗಣಪತಿ ಉತ್ಸವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ. ಒಂದು ತಿಂಗಳು ನಡೆಯುವ ಈ ಉತ್ಸವ, ಇಡೀದೇಶಾದ್ಯಂತ ಪ್ರಸಿದ್ಧಿ ಪಡೆದಿದೆ. ಹಿಂದೂ ಮಹಾಗಣಪತಿ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸಾವಿರಾರು ಜನ ಉತ್ಸವ ನೋಡಲು ಬರುತ್ತಾರೆ. ಕೊನೆಯಲ್ಲಿ ನಡೆಯುವ ಶೋಭಾಯಾತ್ರೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಜನ ಸೇರುವ ಶೋಭಾಯಾತ್ರೆ ಎಂಬ ಖ್ಯಾತಿ ಪಡೆದಿದೆ. ವಿಶ್ವ ಹಿಂದೂ ಪರಿಷತ್ ಜೊತೆಗೆ ಸಾರ್ವಜನಿಕರನ್ನು ಸೇರಿಸಿಕೊಂಡು ಸಮಿತಿಮಾಡಿಕೊಂಡುಗಣೇಶೋತ್ಸವ ಮಾಡುತ್ತಾ ಬಂದಿದ್ದೇವೆ. ಹಿಂದೂ ಮಹಾಗಣಪತಿ RSS ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗೂ ಬಲ ತಂದಂತಹ ಕಾರ್ಯಕ್ರವಾಗಿದೆ. ನಾವು ದೇಶದ ವಿವಿದೆಡೆ ನಡೆಯುವ ಬೈಟೆಕ್ ನಡೆಯುವಾಗ ಇದನ್ನು ಪ್ರಸ್ತಾಪ ಮಾಡುತ್ತೇವೆ ಎಂದರು. ಇನ್ನು ಈ ಬಾರಿ ಹಿಂದೂ ಮಹಾಗಣಪತಿ ಹಬ್ಬ18ನೇ ವರ್ಷಕ್ಕೆ ಕಾಲಿಡುತ್ತಿದೆ. ಆಗಸ್ಟ್27ರಂದು ಗಣೇಶ ಪ್ರತಿಷ್ಠಾಪನೆ ಆಗಿ 18 ದಿವಸಗಳ ಕಾಲ ಗಣೇಶೋತ್ಸವ ನಡೆಯುತ್ತದೆ. ಕೊನೆಗೆ ಸೆಪ್ಟಂಬರ್ 13ರಂದು ಭವ್ಯವಾದ ಶೋಭಾಯಾತ್ರೆ ನಡೆಯುತ್ತದೆ ಎಂದು ಹೇಳಿದರು. ಇನ್ನು. ಈ ಬಾರಿ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷರಾಗಿ ಶರಣ್ ಕುಮಾರ್ ಆಯ್ಕೆ ಆಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಇಡೀ ಗಣೇಶೋತ್ಸವದ ಜವಾಬ್ದಾರಿ ಹೊಂದಿದೆ ಎಂದರು. ಇನ್ನು ನಮ್ಮ ಸಮಿತಿಯ ಮೇಲೆ ಆರೋಪಗಳು ಬಂದಿರುವುದು ನಿಜ. ಕಳೆದ ಬಾರಿಯ ಲೆಕ್ಕಪತ್ರ ಮಂಡನೆ ಮಾಡಿದಾಗ ನಾನು ಇದ್ದೇ. ಅದರ ಬಗ್ಗೆ ಪರಿಶೀಲನೆ ಸಹ ಮಾಡಿದ್ವಿ, ಯಾವ ಅವ್ಯವಹಾರ ಕಂಡುಬಂದಿಲ್ಲ. ಅವರ ಆರೋಪಗಳು ಕೇವಲ ಸುಳ್ಳು ಅಷ್ಟೇ. ಆರೋಪ ಮಾಡುವವರು ವೈಯಕ್ತಿಕವಾಗಿ ಬಂದು ಸಮಸ್ಯೆ ಹೇಳಿಕೊಂಡರೆ ಲೆಕ್ಕ ಕೊಡುತ್ತೇವೆ ಎಂದರು. ಸಾರ್ವಜನಿಕವಾಗಿ ಎಲ್ಲಿಯೂ ನಮ್ಮ ಹಣಕಾಸಿನ ಬಗ್ಗೆ ಬಹಿರಂಗ ಮಾಡುವ ಪದ್ಧತಿ ಇಲ್ಲ. ಹಣಕಾಸಿನ ವಿಚಾರವಾಗಿ ಬಹಿರಂಗ ಪಡಿಸುವ ಸಾರ್ವಜನಿಕರ ಸಲಹೆಯನ್ನು ನಮ್ಮ ಸಮಿತಿಯಲ್ಲಿ ಚರ್ಚೆ ಮಾಡ್ತೀವಿ. ವ್ಯಕ್ತಿ ಆಧಾರಿತವಾಗಿ ಗಣೇಶೋತ್ಸವ ನಡೆಯುವುದಿಲ್ಲ. ಅದು ನಮ್ಮ ಸಂಘಟನೆಯಲ್ಲಿ ಅಂತಹ ಪದ್ಧತಿ ಇಲ್ಲ. ಈ ಬಾರಿ ಎಲ್ಲರನ್ನೂ ಜೊತೆಗೂಡಿಸಿಕೊಂಡು ಹಿಂದೂ ಮಹಾಗಣಪತಿ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದೆ ವೇಳೆ ಕೇಶವ, ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ
ಷಡಕ್ಷರಯ್ಯ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷಚಂದ್ರಶೇಖರ್, ಶಿವಮೊಗ್ಗ ವಿಭಾಗ ಕಾರ್ಯದರ್ಶಿ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



