ಹೊಳಲ್ಕೆರೆ : ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಹೋರಾಟ ಮಾಡಿ ಸರ್ಕಾರದಿಂದ ಹಣ ತಂದು ಪ್ರತಿನಿತ್ಯ
ಒಂದಲ್ಲ ಒಂದು ರೀತಿಯ ಅಭಿವೃದ್ದಿ ಕೆಲಸಗಳನ್ನು ಮಾಡಿಸುವ ಅಭ್ಯಾಸವಿಟ್ಟುಕೊಂಡಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ
ಹೇಳಿದರು.ತಾಲ್ಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ-13 ರಿಂದ ಹುಲೇಮನಹಳ್ಳಿ ರಸ್ತೆ ವಯಾ ಪುಣಜೂರು, ಪುಣಜೂರು
ಭೋವಿಹಟ್ಟಿವರೆಗೂ 4.21 ಕೋಟಿ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ಸಲ್ಲಿಸಿ
ಮಾತನಾಡಿದರು.ಮೊದಲ ಬಾರಿಗೆ ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಾಗ ಮತ ಕೇಳಲು ಜನರ ಬಳಿ
ಹೋಗಬೇಕೆಂದರೆ ರಸ್ತೆಗಳಿರಲಿಲ್ಲ. ಅಂತಹ ಕಷ್ಟದ ಕಾಲದಲ್ಲಿ ಸರ್ಕಾರದಿಂದ ಹಣ ತಂದು 386 ಹಳ್ಳಿಗಳಲ್ಲಿ ರಸ್ತೆ ಮಾಡಿಸಿದ
ಪರಿಣಾಮವಾಗಿ ಜನ ರಸ್ತೆ ರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೂ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರು. ಹೈಟೆಕ್ ಆಸ್ಪತ್ರೆ,
ಸಮುದಾಯ ಭವನ, ಶಾಲಾ-ಕಾಲೇಜು, ಸ್ಟೇಡಿಯಂ, ಈಜುಕೊಳಗಳನ್ನು ಕಟ್ಟಿಸಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75
ವರ್ಷಗಳಾಗಿದೆ. ಎಷ್ಟು ಎಂ.ಎಲ್.ಎ.ಗಳು ಬಂದು ಹೋದರು ಏನೇನು ಕೆಲಸ ಮಾಡಿಸಿದ್ದಾರೆನ್ನುವ ಕುರಿತು ನಿಮ್ಮಲ್ಲಿ ಆಲೋಚನೆ
ಮೂಡಬೇಕು ಎಂದು ಜನತೆಯನ್ನು ಜಾಗೃತಿಗೊಳಿಸಿದರು.ಎದೆತಟ್ಟಿಕೊಂಡು ಚುನಾವಣೆಯಲ್ಲಿ ಓಟು ಕೇಳುತ್ತೇನೆ. ಕಳ್ಳ ಬೆಕ್ಕಿನ ತರಹ ಓಡಾಡಲ್ಲ. ಧೈರ್ಯವಾಗಿ ಮತ ಕೇಳುತ್ತೇನೆ.ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಐದು ನೂರು ಕೋಟಿ ರೂ.ಗಳಲ್ಲಿ ವಿದ್ಯುತ್ ಪವರ್ಸ್ಟೇಷನ್ ನಿರ್ಮಾಣವಾಗುತ್ತಿದೆ. ಇದು ಪೂರ್ಣಗೊಂಡರೆ ದಿನಕ್ಕೆ ಹತ್ತು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ಪೂರೈಸಲಾಗುವುದು.
ಇದರಿಂದ ಇನ್ನು ಐವತ್ತು ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ರೈತರನ್ನು ಕಾಡುವುದಿಲ್ಲ ಎಂದು ತಿಳಿಸಿದರು.ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ತಿಳಿದುಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಿಸುವ ಯೋಗ್ಯತೆಯಿಟ್ಟುಕೊಂಡಿದ್ದೇನೆ.ಚುನಾವಣೆಗೆ ಎಲ್ಲಿಂದಲೂ ಬಂದವರು ಹೆಗಲ ಮೇಲೆ ಕೈಹಾಕಿ ಪಾಲಿಷ್ ಮಾತುಗಳನ್ನಾಡುವವರಿಗೆ ಮರುಳಾಗಬೇಡಿ. ನಿಮ್ಮ ಕಷ್ಟ-ಸುಖಗಳಿಗೆ ಯಾರು ಸ್ಪಂದಿಸುತ್ತಾರೆನ್ನುವುದನ್ನು ಮನದಲ್ಲಿಟ್ಟುಕೊಂಡು ಮತ ನೀಡಿ ಎಂದು ಜನತೆಯಲ್ಲಿ ಶಾಸಕ ಡಾ.ಎಂ.ಚಂದ್ರಪ್ಪಮನವಿ ಮಾಡಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮೀನಾಕ್ಷಮ್ಮ, ಸಂಪತ್ಕುಮಾರ್, ಡಿ.ಸಿ.ಮೋಹನ್, ಯತೀಶ್, ಸೂರಪ್ಪ, ಮರುಳಸಿದ್ದಪ್ಪಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







