ರಜೆ ದಿನಗಳಲ್ಲೂ ಸಬ್ ರಿಜಿಸ್ಟ್ರಾರ್ ಕಚೇರಿಗಳು ಓಪನ್
ಟಿಒಬಿ ನ್ಯೂಸ್ ಬೆಂಗಳೂರು
ಯುಗಾದಿ ಹಾಗೂ ರಂಜಾನ್ ಹಬ್ಬಗಳ ಹಿನ್ನೆಲೆ ಸಾಲುಸಾಲು ಸರ್ಕಾರಿ ರಜೆ ಇರುವುದರಿಂದ, ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯವಾಗದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಮಾ. 28 (ನಾಲ್ಕನೇ ಶನಿವಾರ) ಮತ್ತು ಮಾ. 29 (ಭಾನುವಾರ) ರಜೆ ದಿನಗಳಾಗಿದ್ದರೂ, ಈ ಎರಡೂ ದಿನಗಳನ್ನು ‘ಕರ್ತವ್ಯ ನಿರ್ವಹಿಸುವ ದಿನ’ ಎಂದು ಪರಿಗಣಿಸಿ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳು ಕಾರ್ಯನಿರ್ವಹಿಸುವಂತೆ ಕಂದಾಯ ಇಲಾಖೆ ಆದೇಶಿಸಿದೆ.
ವರ್ಷಾಂತ್ಯದ ಪರಿಣಾಮವಾಗಿ ದಾಖಲೆ ನೋಂದಣಿ ಕಾರ್ಯಗಳಲ್ಲಿ ಹೆಚ್ಚಿದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ (ನೋಂದಣಿ ಮತ್ತು ಮುುದ್ರಾಂಕ) ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಸಾರ್ವಜನಿಕರು ರಜೆ
ಬಳಸಿಕೊಂಡು ತಮ್ಮ ಆಸ್ತಿ ನೋಂದಣಿ ಹಾಗೂ ಇತರ ಸಂಬಂಧಿತ ಕೆಲಸಗಳನ್ನು ಸುಗಮವಾಗಿ ಪೂರ್ಣಗೊಳಿಸಬಹುದು ಎಂದು ಇಲಾಖೆ ತಿಳಿಸಿದೆ.
