ಕಾರ್ಕಳ ಗೃಹ ಸಚಿವಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ತ ಮ್ಮ ಪತ್ನಿ ಕನ್ನಿಕಾ ಜೊತೆ ಕಾರ್ಕಳ ತಾಲೂಕಿನ ಬೆಳ್ಳಣ್ಣು ಗ್ರಾಮದದುರ್ಗಾಪರಮೇಶ್ವರಿದೇವಾಲಯಕ್ಕೆ ಆಗಮಿಸಿ ಚಂಡಿ ಕಾಹೋಮದಲ್ಲಿ ಭಾಗವಹಿಸಿ, ಪೂರ್ಣಾ ಹುತಿ ನೀಡಿ, ಪ್ರಸಾದ ಸ್ವೀಕರಿಸಿದರು.ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಮಂಗಳೂರಿನಲ್ಲಿ ನಡೆಯುವ ಶಾಂತಿ ಸಭೆಗೆ ಬಂದಿದ್ದೇನೆ. ಬರುವಾ ಶ್ರೀಮತಿಯವರು ‘ನಾನು ಬರ್ತೇನೆ’ ಅಂದರು. ಅವರಿಗೆ ಬೇಡ ಅನ್ನೋಕಾಗುತ್ತಾ?. ಆದ್ದರಿಂದ ಅವರನ್ನೂ ಕರಕೊಂಡು ಬಂದಿದ್ದೇನೆ. ಜನಕಲ್ಯಾಣ, ಲೋಕಕಲ್ಯಾಣಕ್ಕಾಗಿ ಪೂಜೆ ನಡೆಸಿದ್ದೇನೆ. ರಾಜ್ಯದ ಹಿತ ಕಾಪಾಡಲು ಪ್ರಾರ್ಥನೆಸಲ್ಲಿಸಿದ್ದೇನೆ ಎಂದರು.
ಈ ಪೂಜೆಯಲ್ಲಿ ವಿಶೇಷತೆ ಏನೂ ಇಲ್ಲ. 2013ರಲ್ಲಿ ಕಾಂಗ್ರೆ ರಾಜ್ಯಾಧ್ಯಕ್ಷನಾಗಿದ್ದಾಗ ಇಲ್ಲಿಗೆ ಬಂದು ಯಾಗ ಮಾಡಿಸಿ ಪಕ್ಷದ ಗೆಲುವಿಗೆ ಪ್ರಾರ್ಥಿಸಿದ್ದೆ. ನಂತರ ನಮ್ಮ ಸರ್ಕಾರ ಆವಿ ಕಾರಕ್ಕೆ ಬಂತು. ಈಗ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕೇಳಿದ್ದೇನೆ. ಸ್ವಾಭಾವಿಕವಾಗಿ ಆ ಪ್ರಾರ್ಥನೆಯ ಪ್ರಯೋಜನ ನಮಗು ಆಗುತ್ತದೆ. ಜನ ಸಮುದಾಯಕ್ಕೆ ಪ್ರಾರ್ಥನೆ ಸಲ್ಲಿಸಿದಾಗ ಅದರೊಳಗೆ ನನ್ನ ಪ್ರಾರ್ಥನೆ ಯೂ ಸೇರುತ್ತೆ. ನನಗಾಗಿ ಏನೂ ಪ್ರಾರ್ಥನೆ ಮಾಡಿಲ್ಲ. ಹೋಮ ಮಾಡಿದ್ದು ಶತ್ರನಾಶ ಕಲ್ಲ, ನನಗೆ ಯಾರು ಶತ್ರುಗಳಿಲ್ಲ, ಯಾರಾ ದ್ರೂ ಇದ್ರೆ ನೀವೇ ಹುಡುಕಿ ಕೊಡಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



