ಹೊಸದುರ್ಗ: ತಾಲೂಕಿನ ಐತಿಹಾಸಿಕ ಬಾಗೂರು ಗ್ರಾಮದ ಶ್ರೀ ಬನಶಂಕರಿದೇವಿ ಸೇವಾ ಸಮಿತಿಯ 2018 -2019ರಿಂದ 2024-2025ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ ಕಾರ್ಯಕಾರಿ ಸಮಿತಿ ಆಯ್ಕೆಯ ಸಭೆ ಸಮಿತಿ ಅಧ್ಯಕ್ಷ ಹೆಚ್.ಎಸ್.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಿತು.ನೂತನ ಕಾರ್ಯಕಾರಿ ಸಮಿತಿಗೆ ಮುಂದಿನ ಅವಧಿಗೆ ಬೆಂಗಳೂರಿನ ರಾಮಣ್ಣ ಪೇಟೆಯಲ್ಲಿ ವಾಸವಾಗಿರುವ ಆರ್.ರವಿಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಚಿತ್ರದುರ್ಗದಲ್ಲಿ ವಾಸವಾಗಿರುವ ಶಿವನಿ ಎಸ್.ಸುರೇಶ್ ಅವರನ್ನು ಕಾರ್ಯದರ್ಶಿಯವರನ್ನಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಭೆಯಲ್ಲಿ ಸಮಿತಿಯ ಆದಾಯ ಹಾಗೂ ಖರ್ಚುವೆಚ್ಚದ ಬಗ್ಗೆ ಲೆಕ್ಕಪತ್ರ ಮಂಡಿಸಲಾಯಿತು. ಸಮಿತಿಯು ಅಭಿವೃದ್ಧಿ ಅಗತ್ಯ ನೂತನ ಯೋಜನೆ ಜಾರಿ ಬಗ್ಗೆ ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾದವು.ಈ ವೇಳೆ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಆರ್.ರವಿಕುಮಾರ್, ಕಾರ್ಯದರ್ಶಿ ಬಾಗೂರು ಬಿ.ಟಿ.ಸುರೇಶ್, ಖಜಾಂಚಿ ಬಿ.ವಿ.ವಿಶ್ವನಾಥ್, ನಿರ್ದೇಶಕರಾದ ಎಚ್.ಚಂದ್ರಪ್ಪ, ಎನ್.ಶಿವಮೂರ್ತಿ, ಎಚ್.ಆರ್.ಗೋವಿಂದರಾಜು, ಜಿ.ಪಿ.ಶಂಕರ್, ಜಿ.ಎಸ್.ಸಿದ್ದಪ್ಪ, ಲಾಲ್ಟಿ ಜಯಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







