ಹೊಸದುರ್ಗ: ಕೌಟುಂಬಿಕ ಕಲಹದ ಹಿನ್ನಲೆ ಅಕ್ಕನ ಜೊತೆ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಪಟ್ಟಣದ ಎಸ್.ಜೆ.ಎಂ ಬಡಾವಣೆಯಲ್ಲಿ ನಡೆದಿದ್ದು, ಪಟ್ಟಣದ ಜನರನ್ನು ಬೆಚ್ಚಿ ಬೀಳಿಸಿದೆ. ಅಕ್ಕನ ಜೊತೆ ಜಗಳ ಮಾಡುತ್ತಿದ್ದ ತಮ್ಮ ಬಾವನಿಂದ ಹತ್ಯೆಯಾಗಿದ್ದಾನೆ. ಕೊಲೆಯಾದ ವ್ಯಕ್ತಿಯನ್ನು ಶಿವಕುಮಾರ್ (44) ಎಂದು ಹೇಳಲಾಗಿದೆ. ಶಿವಕುಮಾರ ನ ಅಕ್ಕ ರೇಖಾಳ ಪತಿ ರೆಹಮಾನ್ ನಿಂದ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.ಅಕ್ಕ ರೇಖಾ ಬಳಿ ಹಣಕ್ಕಾಗಿ ಜಗಳ ಮಾಡುತ್ತಿದ್ದ ತಮ್ಮ ಶಿವಕುಮಾರ್. ಜಗಳ ಬಿಡಿಸಲು ಹೋದಾಗ ಭಾವ ರೆಹಮಾನ್ ಮೇಲೆ ಶಿವಕುಮಾರ್ ಹಲ್ಲೆ. ಹಲ್ಲೆ ಮಾಡಿದ ಶಿವಕುಮಾರ್ ಮೇಲೆ ರೆಹಮಾನ್ ಮುಖಕ್ಕೆ ಕತ್ತರಿಯಿಂದ ಇರಿದು ಜೋರಾಗಿ ತಳ್ಳಿದ್ದರಿಂದ ರಭಸಕ್ಕೆ ನೆಲಕ್ಕೆ ಬಿದ್ದು ಶಿವಕುಮಾರ್ ಸಾವನ್ನಪ್ಪಿದ್ದಾನೆ.
20 ವರ್ಷಗಳ ಹಿಂದೆ ರೆಹಮಾನ್ ಜತೆ ಮದುವೆ ಆಗಿದ್ದ ಶಿವಕುಮಾರ್ ಅಕ್ಕ ರೇಖಾ. ಘಟನಾ ಸ್ಥಳಕ್ಕೆ ಹೊಸದುರ್ಗ ಠಾಣೆ ಪಿ.ಐ.ರಮೇಶ್ ಭೇಟಿ ಪರಿಶೀಲನೆ, ಪ್ರಕರಣ ದಾಖಲು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



