ಬೇಕಾಗುವ ಪದಾರ್ಥಗಳು
ಬಾದಾಮಿ- 25 ಬೀಜ
ಸಕ್ಕರೆ- 1 ಬಟ್ಟಲು
ಹಾಲು- ಅರ್ಧ ಲೀಟರ್
ಶಾವಿಗೆ- ಕಾಲು ಬಟ್ಟಲು
ಬಾದಾಮಿ ಪುಡಿ- 2 ಚಮಚ
ಏಲಕ್ಕಿ ಪುಡಿ- ಸ್ವಲ್ಪ
ತುಪ್ಪ- 2 ಚಮಚ
ಪಿಸ್ತಾ- ಸ್ವಲ್ಪ
ಬಾದಾಮಿ ಚೂರು- ಸ್ವಲ್ಪ
ಬಾದಾಮಿ ಪಾಯಸ ಮಾಡುವ ವಿಧಾನ…
ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದು ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಶ್ಯಾವಿಗೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ಒಂದೂವರೆ ಬಟ್ಟಲು ನೀರು ಹಾಕಿ, 5 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.
ನಂತರ ರುಬ್ಬಿದ ಬಾದಾಮಿಯನ್ನು ಶ್ಯಾವಿಗೆಗೆ ಹಾಕಿ ಮಿಶ್ರಣಕ್ಕೆ ಮಾಜಿ. ನಂತರ ಹಾಲು, ಸಕ್ಕರೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಇದಕ್ಕೆ ಬಾದಾಮಿ ಪುಡಿ ಕತ್ತರಿಸಿಟ್ಟುಕೊಂಡ ಪಿಸ್ತಾ, ಬಾದಾಮಿಯನ್ನು ಸೇರಿಸಿ 3 ನಿಮಿಷ ಕುದಿಸಿಕೊಂಡರೆ ರುಚಿಕರವಾದ ಬಾದಾಮಿ ಪಾಯಸ ಸವಿಯಲು ಸಿದ್ಧ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







